
ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ ಅವರನ್ನು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭೇಟಿಯಾಗಿದ್ದಾರೆ
ಪವನ್ ಕಲ್ಯಾಣ್ ಅವರನ್ನು ಹೈದರಾಬಾದ್ ನ ಜನಸೇನಾ ಕಚೇರಿಯಲ್ಲಿ ನಟ ಸುದೀಪ್ ಭೇಟಿ ಮಾಡಿದರು.
ಇದೊಂದು ಔಪಚಾರಿಕ ಭೇಟಿಯಾಗಿದ್ದು ಸುದೀಪ್ ತಮ್ಮ ಚಿತ್ರದ ಶೂಟಿಂಗ್ ಸಲುವಾಗಿ ಹೈದರಾಬಾದ್ ನಲ್ಲಿದ್ದಾರೆ.
ಈ ಭೇಟಿಯ ವೇಳೆ ಪವನ್ ಕಲ್ಯಾಣ್ ಅವರು ಸೆಟ್‌ಗಳಲ್ಲಿ ಅನುಸರಿಸಿದ ಕೋವಿಡ್ 19 ಪ್ರೋಟೋಕಾಲ್‌ಗಳ ಬಗ್ಗೆ ಸುದೀಪ್ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಿಚ್ಚ ಪವನ್ ಕಲ್ಯಾಣ್ ಗೆ ಸಸಿ ಕೊಟ್ಟು ಅಭಿನಂದಿಸಿದ್ದಾರೆ.
Met a simple grounded human @PawanKalyan i must admit. Wonderful interacting with you sir. pic.twitter.com/Da50XnKaUC
— Kichcha Sudeepa (@KicchaSudeep) October 5, 2020
ಇನ್ನು ಪವನ್ ಕಲ್ಯಾಣ್ ಶೀಘ್ರದಲ್ಲೇ ‘ವಕೀಲ್ ಸಾಬ್’ ಚಿತ್ರದ ಚಿತ್ರೀಕರಣ ಪುನರಾರಂಭಿಸಲಿದ್ದಾರೆ. ಕೊರೋನಾವೈರಸ್ ಲಾಕ್ ಡೌನ್ ನಂತರ ಅವರು ಯಾವ ಚಿತ್ರ್ದ ಶೂಟಿಂಗ್ ನಲ್ಲಿ ಭಾಗವಹಿಸಿಲ್ಲ.