'ಫಿಮೇಲ್ ಸೂಪರ್ ಹೀರೋ' ಆದ ಅದಿತಿ ಪ್ರಭುದೇವ

ಮನೋಜ್ ಪಿ ನಡುಮನೆ ಅವರ ಹಾರರ್ ಆಧಾರಿತ ಮಹಿಳಾ ಪ್ರಧಾನ ಚಿತ್ರ ಫಿಮೇಲ್ ಸೂಪರ್ ಹೀರೋದಲ್ಲಿ  ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡಿದೆ. ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಬಾಕಿಯಿದ್ದು ಅದರ ಶೂಟಿಂಗ್ ಮುಗಿದ ಬಳಿಕ ತೆರೆಗೆ ಬರಲು ಸಿದ್ಧವಾಗಲಿದೆ.

Published: 08th October 2020 01:59 PM  |   Last Updated: 08th October 2020 01:59 PM   |  A+A-


Aditi Prabhudev

ಅದಿತಿ ಪ್ರಭುದೇವ್

Posted By : Sumana Upadhyaya
Source : The New Indian Express

ಮನೋಜ್ ಪಿ ನಡುಮನೆ ಅವರ ಹಾರರ್ ಆಧಾರಿತ ಮಹಿಳಾ ಪ್ರಧಾನ ಚಿತ್ರ ಫಿಮೇಲ್ ಸೂಪರ್ ಹೀರೋದಲ್ಲಿ  ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡಿದೆ. ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಬಾಕಿಯಿದ್ದು ಅದರ ಶೂಟಿಂಗ್ ಮುಗಿದ ಬಳಿಕ ತೆರೆಗೆ ಬರಲು ಸಿದ್ಧವಾಗಲಿದೆ.

ಕಿರು ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ನಿರ್ದೇಶಕ ಮನೋಜ್, ಇಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಬಂದಿದ್ದಾರೆ. ಮಹಿಳಾ ಸೂಪರ್ ಹೀರೋ ಆಗಿ ಇಲ್ಲಿ ಅದಿತಿ ಪ್ರಭುದೇವ ಅವರ ಪಾತ್ರವಿದ್ದು ಇದು ಭಾರತೀಯ ಚಿತ್ರರಂಗದಲ್ಲಿಯೇ ಮೊದಲನೆಯದು, ಇದರ ಸರಣಿ ಚಿತ್ರಗಳನ್ನು ಸಹ ತರುವ ಯೋಜನೆಯಲ್ಲಿ ನಿರ್ದೇಶಕರಿದ್ದಾರೆ.

ಇಲ್ಲಿ ಆರಂಭದಲ್ಲಿ ಸಾಮಾನ್ಯ ಹುಡುಗಿಯಾಗಿ ಪಾತ್ರ ಮಾಡುವ ಅದಿತಿ ಪ್ರಭುದೇವ ನಂತರ ತನ್ನ ಪೂರ್ವ ಹಿನ್ನೆಲೆಯನ್ನು ತಿಳಿದುಕೊಂಡು ಸೂಪರ್ ಪವರ್ ಪಡೆದುಕೊಳ್ಳುತ್ತಾಳೆ. ತನ್ನ ಸಾಮರ್ಥ್ಯವನ್ನು ಬಳಸಿಕೊಂಡು ಹೇಗೆ ಮುಂದೆ ಬರುತ್ತಾಳೆ ಎನ್ನುವುದು ಚಿತ್ರದ ಸಾರಾಂಶ. ಹಾರರ್ ಮತ್ತು ಫ್ಯಾಂಟಸಿ ಜಗತ್ತಿನ ಅನಾವರಣ ಇದರಲ್ಲಿದೆ ಎಂದು ನಿರ್ದೇಶಕರು ಹೇಳುತ್ತಾರೆ.

ಯು ಕೆ ಪ್ರೊಡಕ್ಷನ್ ನಡಿ ಫಿಮೇಲ್ ಸೂಪರ್ ಹೀರೋ ಚಿತ್ರವನ್ನು ತಯಾರಿಸಲಾಗುತ್ತಿದೆ. ಛಾಯಾಗ್ರಾಹಕ ಉದಯ್ ಲೀಲಾ, ಸಂಪಾದಕ ವಿಜೇತ್ ಚಂದ್ರ, ರಿತ್ವಿಕ್ ಮುರಳೀಧರ್ ಅವರ ಸಂಗೀತ ಚಿತ್ರಕ್ಕಿದ್ದು ಉತ್ತಮ ತಂತ್ರಜ್ಞರ ತಂಡವಿದೆ. ಗ್ರಾಫಿಕ್ಸ್ ನ್ನು ಹೆಚ್ಚು ಬಳಸಿಕೊಂಡಿಲ್ಲ ಎಂದು ನಿರ್ದೇಶಕರು ಹೇಳಿದರು.

ಬೆಂಗಳೂರು ಸುತ್ತಮುತ್ತ ಚಿತ್ರೀಕರಣವಾಗಿದೆ. ಫ್ಯಾಂಟಸಿ ವರ್ಲ್ಡ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಸುನಿಲ್ ಪುರಾಣಿಕ್, ಪ್ರೇರಣಾ ಕಂಬಮ್, ಚೇತನ್ ಗಂಧರ್ವ ಮೊದಲಾದವರು ಪೋಷಕ ಪಾತ್ರದಲ್ಲಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp