ಕನ್ನಡದ 'ಭೀಮಸೇನ ನಳಮಹಾರಾಜ', 'ಮನೆ ನಂಬರ್ 13' ಸೇರಿ ಐದು ಭಾಷೆಗಳ 9 ಚಿತ್ರಗಳು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ!

ಕನ್ನಡದ ಭೀಮಸೇನ ನಳಮಹಾರಾಜ ಸೇರಿದಂತೆ 9 ಬಹು ನಿರೀಕ್ಷಿತ ಚಿತ್ರಗಳು ಐದು ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ.
ಭೀಮಸೇನ ನಳಮಹಾರಾಜ, ಮನೆ ನಂಬರ್ 13 ಪೋಸ್ಟರ್
ಭೀಮಸೇನ ನಳಮಹಾರಾಜ, ಮನೆ ನಂಬರ್ 13 ಪೋಸ್ಟರ್

ಬೆಂಗಳೂರು: ಕನ್ನಡದ ಭೀಮಸೇನ ನಳಮಹಾರಾಜ ಸೇರಿದಂತೆ 9 ಬಹು ನಿರೀಕ್ಷಿತ ಚಿತ್ರಗಳು ಐದು ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ.

ವರುಣ್ ಧವನ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಕೂಲಿ ನಂಬರ್ 1, ರಾಜ್‌ಕುಮಾರ್ ರಾವ್ ಅಭಿನಯದ ಛಲಾಂಗ್, ಭೂಮಿ ಪೆಡ್ನೇಕರ್ ಅವರ ದುರ್ಗಾವತಿ, ಆನಂದ್ ದೇವರಾಕೊಂಡ ಅಭಿನಯದ ಮಿಡ್ಲ್ ಕ್ಲಾಸ್ ಮೆಲೋಡೀಸ್ (ತೆಲುಗು), ಮಾಧವನ್ ಅಭಿನಯದ ಮಾರ (ತಮಿಳು), ಅರವಿಂದ್ ಐಯ್ಯರ್ ನಟಿಸಿರುವ ಭೀಮಸೇನಾ ನಳ ಮಹಾರಾಜ ಮತ್ತು ಹಲಾಲ್ ಲವ್ ಸ್ಟೋರಿ (ಮಲಯಾಳಂ) ಅಕ್ಟೋಬರ್ 15, 2020ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 200 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

ವರುಣ್ ಧವನ್ (ಜುಡ್ವಾ 2, ಸ್ಟ್ರೀಟ್ ಡ್ಯಾನ್ಸರ್ 3ಡಿ) ಮತ್ತು ಸಾರಾ ಅಲಿ ಖಾನ್ (ಸಿಂಬಾ) ರವರ  ಕೂಲಿ ನಂ 1 , ರಾಜಕುಮಾರ್  ರಾವ್ (ಟ್ರಾಪ್ಪ್ಡ್  ಸ್ಟ್ರೀ)  ಮತ್ತು ನುಶ್ರತ್ ಭರೂಚಾ ( ಸೋನು ಕೆ ಟಿಟು ಕಿ ಸ್ವೀಟಿ) ನಟಿಸಿರುವ ಛಲಾಂಗ್, ಭೂಮಿ  ಪೆಡ್ನೇಕರ್ (ಶುಭ್ ಮಂಗಲ್ ಸವ್ಧಾನ್, ಟಾಯ್ಲೆಟ್: ಏಕ್ ಪ್ರೇಮ್  ಕಥಾ) ನಟಿಸಿರುವ ದುರ್ಗಾವತಿ, ಅರವಿಂದ್ ಅಯ್ಯರ್ ಅಭಿನಯದ ಭೀಮ ಸೇನಾ ನಲಾ ಮಹಾರಾಜ (ಕನ್ನಡ), ಆನಂದ್ ದೇವರಾಕೊಂಡಾ ನಟಿಸಿದ ಮಿಡ್ಲ್ ಕ್ಲಾಸ್ ಮೆಲೋಡೀಸ್ (ತೆಲುಗು), ಮಾಧವನ್ ನಟಿಸಿರುವ ಮಾರ(ತಮಿಳ್) ಮತ್ತು ವರ್ಷಾ ಬೊಲ್ಲಮ್ಮ (ಬಿಗಿಲ್) ಮತ್ತು ಚೇತನ್ ಗಂಧರ್ವ (ಮೆಲೊಡಿ)  ನಟಿಸಿರುವ ಮನೆ ನಂಬರ್  13 (ಕನ್ನಡ) ಜೊತೆಗೆ ಈ ಹಿಂದೆ ಘೋಷಿಸಿದ ಜಕಾರಿಯಾ ಮೊಹಮ್ಮದ್ ಅವರ ಹಲಾಲ್ ಲವ್ ಸ್ಟೋರಿ (ಮಲಯಾಳಂ) ಮತ್ತು ಸೂರ್ಯ ಅಭಿನಯದ ಸೂರಾರೈ ಪೊಟ್ರು (ತಮಿಳು). ಸಿನಿಮಾಗಳು ಈ ವರ್ಷಾಂತ್ಯದೊಳಗೆ ಪ್ರತ್ಯೇಕವಾಗಿ ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಪ್ರದರ್ಶನಗೊಳ್ಳಲಿದ್ದು, ವಿಶ್ವದಾದ್ಯಂತ 200 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಲಭ್ಯವಿರುತ್ತದೆ.

ನಿರೀಕ್ಷೆ, ಕುತೂಹಲ ಕೆರಳಿಸಿದ ಕನ್ನಡದ ನಳ ಮಹಾರಾಜ
ವರ್ಷದ ಹಿಂದೆಯೇ ಪೂರ್ಣಗೊಂಡು ತೆರೆಕಾಣುವ ಹಂತದಲ್ಲಿದ್ದ ‘ಭೀಮಸೇನ ನಳಮಹಾರಾಜ’ ಚಿತ್ರಕ್ಕೆ ಈಗ ಮುಕ್ತಿ ಸಿಗುತ್ತಿದೆ. ಅಮೆಜಾನ್‌ ಪ್ರೈಮ್‌ ವಿಡಿಯೊ ಒಟಿಟಿ ವೇದಿಕೆಯಲ್ಲಿ ಈ ಚಿತ್ರವು ಅ.29ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ. ರಕ್ಷಿತ್‌ ಶೆಟ್ಟಿ ಅವರ ‘ಅವನೇ ಶ್ರೀಮನ್ನಾರಾಯಣ’ನಿಗೂ ಮೊದಲೇ ಈ  ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರವನ್ನು ಇನ್ನಷ್ಟು ಸೃಜನಾತ್ಮಕವಾಗಿ ಸಿದ್ಧಪಡಿಸುವ ಕೆಲಸಕ್ಕೆ ಚಿತ್ರತಂಡ ಕೈಹಾಕಿದ್ದರಿಂದ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇನ್ನೇನು ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿದ್ದಾಗಲೇ ಕೋವಿಡ್‌ 19 ಸೋಂಕು  ಆವರಿಸಿತು. ಹೀಗಾಗಿ ಬಿಡುಗಡೆ ಮತ್ತೆ ಮುಂದೂಡುವುದು ಅನಿವಾರ್ಯವಾಗಿತ್ತು ಎಂದು ಚಿತ್ರತಂಡ ಹೇಳಿಕೊಂಡಿದೆ. 

ಕೋವಿಡ್ ನಿಂದಾಗಿ ಚಿತ್ರಮಂದಿರಗಳಿಂದ ಲಾಭದ ನಿರೀಕ್ಷೆ ಸಾಧ್ಯವಿಲ್ಲ
ಅ.15ರಿಂದ ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದರೂ ಈ ಚಿತ್ರವನ್ನು ಒಟಿಟಿಯಲ್ಲಿ ತೆರೆಕಾಣಿಸುವ ನಿರ್ಧಾರ ತೆಗೆದುಕೊಂಡಿರುವ ಕಾರಣ ಬಿಚ್ಚಿಟ್ಟ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ‘ಚಿತ್ರಮಂದಿರಗಳ ಬಾಗಿಲು ತೆರೆದರೂ ಬರುವ ಜನವರಿಯವರೆಗೂ ಶೇ 100ರಷ್ಟು  ಆಸನಗಳ ಭರ್ತಿಗೆ ಚಿತ್ರಮಂದಿರದಲ್ಲಿ ಅವಕಾಶವಿಲ್ಲ. ನಾವು ಹೂಡಿರುವ ಬಂಡವಾಳ ಮತ್ತು ಅದರ ಬಡ್ಡಿಯ ಮೊತ್ತವನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ವಾಪಸ್‌ ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡೆವು. ಅಮೆಜಾನ್‌  ಪ್ರೈಮ್‌ ವಿಡಿಯೊಕ್ಕೆ ನಮ್ ಚಿತ್ರ ಮಾರಾಟ ಮಾಡಿರುವುದರಿಂದ ನಾವು ಹೂಡಿದ ಬಂಡವಾಳ ಮತ್ತು ಲಾಭವು ಸಿಕ್ಕಿದೆ’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com