ಬಿರಾದಾರ್ ಭಾರತದ ಹೆಮ್ಮೆ: ಕನ್ನಡ ನಟನಿಗೆ ಬಿಗ್ ಬಿ ಅಮಿತಾಬ್ ಪ್ರಶಂಸೆ

ಪಾತ್ರ ಯಾವುದಾದರೇನು, ಜೀವ ತುಂಬಿ ನಟಿಸುವುದಷ್ಟೇ ನನ್ನ ಕೆಲಸ ಎನ್ನುವ ವೈಜನಾಥ್ ಬಿರಾದಾರ್ ಅತ್ಯುತ್ತಮ ಕಲಾವಿದ.

Published: 09th October 2020 01:52 PM  |   Last Updated: 09th October 2020 01:52 PM   |  A+A-


ವೈಜನಾಥ್ ಬಿರಾದಾರ್ ಅಮಿತಾಭ್ ಬಚ್ಚನ್

Posted By : Raghavendra Adiga
Source : UNI

ಪಾತ್ರ ಯಾವುದಾದರೇನು, ಜೀವ ತುಂಬಿ ನಟಿಸುವುದಷ್ಟೇ ನನ್ನ ಕೆಲಸ ಎನ್ನುವ ವೈಜನಾಥ್ ಬಿರಾದಾರ್ ಅತ್ಯುತ್ತಮ ಕಲಾವಿದ.

ಭಿಕ್ಷುಕ, ಕುಡುಕ, ಬಡವ ಮೊದಲಾದ ಪಾತ್ರಗಳಿಂದ 350ಕ್ಕೂ ಹಚ್ಚು ಚಿತ್ರಗಳ ಮೂಲಕ ರಸಿಕರನ್ನು ರಂಜಿಸುವ ಈ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಲೆಯನ್ನು ದೇವರೆಂದು ನಂಬಿರುವ ವೈಜನಾಥ್​ ಬಿರಾದರ್​ ಅವರು ಗಿರೀಶ್​​ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನೇರಿ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದು, ಅದಕ್ಕಾಗಿ ಸ್ಪೇನ್​ನ ಮ್ಯಾಡ್ರಿಡ್​ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಿರಾದರ್​ಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರುವ ವಿಚಾರ ತಿಳಿದು ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಇತ್ತೀಚೆಗಷ್ಟೆ ಕರೆ ಮಾಡಿ, ಶುಭಾಶಯ ತಿಳಿಸಿದ್ದಾರೆ. ಭಾರತೀಯನಿಗೆ ಈ ಗೌರವ ಸಿಕ್ಕಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp