ಹೊಸ ಸಿನಿಮಾಗಾಗಿ ಜತೆಯಾದ ನಿರ್ದೇಶಕ ಸುನಿ-ಚೇತನ್ ಜೋಡಿ
ನಟ ಚೇತನ್ ಮತ್ತು ನಿರ್ದೇಶಕ ಸುನಿ ಒಂದೇ ಚಿತ್ರದ ಮೂಲಕ ಜತೆಯಾಗಿ ಕೆಲಸ ಮಾಡಲು ತೀರ್ಮಾನಿಸಿದ್ದಾರೆ. ಮೂಲಗಳ ಪ್ರಕಾರ ಇದು ನಟ ಮತ್ತು ನಿರ್ದೇಶಕರ ನಡುವಿನ ಹಳೆಯ ಒಪ್ಪಂದದ ಭಾಗವಾಗಿದೆ.
Published: 13th October 2020 10:44 AM | Last Updated: 13th October 2020 12:50 PM | A+A A-

ನಟ ಚೇತನ್ ಮತ್ತು ನಿರ್ದೇಶಕ ಸುನಿ ಒಂದೇ ಚಿತ್ರದ ಮೂಲಕ ಜತೆಯಾಗಿ ಕೆಲಸ ಮಾಡಲು ತೀರ್ಮಾನಿಸಿದ್ದಾರೆ. ಮೂಲಗಳ ಪ್ರಕಾರ ಇದು ನಟ ಮತ್ತು ನಿರ್ದೇಶಕರ ನಡುವಿನ ಹಳೆಯ ಒಪ್ಪಂದದ ಭಾಗವಾಗಿದೆ. ಇದೀಗ ಅದು ಅಂತಿಮವಾಗಿ ಕಾರ್ಯರೂಪಕ್ಕೆ ಬರುತ್ತಿದೆ. ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ನಿರ್ದೇಶಕರೊಂದಿಗೆ ಮಾತನಾಡಿದಾಗ "ನಾವು ಒಂದು ಚಿತ್ರಕ್ಕಾಗಿ ತಂಡವನ್ನು ರೆಡಿ ಮಾಡುವ ಯೋಜನೆ ಇದೆ" ಎಂದರು.
ಇದಕ್ಕಾಗಿ ಸ್ಕ್ರಿಪ್ಟ್ ಸಹ ಸಿದ್ಧವಾಗಿದ್ದು ಚರ್ಚೆಗಳು ನಡೆಯುತ್ತಿವೆ. ನಿರ್ದೇಶಕರು ಮತ್ತು ನಿರ್ಮಾಪಕರು ನಿರ್ಧರಿಸಿದಂತೆ ಮತ್ತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಅಲ್ಲದೆ 2021ರಲ್ಲಿ ಚಿತ್ರ ಸೆಟ್ಟೇರಲಿದೆ.
ಏತನ್ಮಧ್ಯೆ, ಇತ್ತೀಚೆಗೆ ಅತಿರಥದಲ್ಲಿ ಕಾಣಿಸಿಕೊಂಡ ಚೇತನ್, ರಣಂ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ, ಚಿತ್ರಮಂದಿರಗಳು ತೆರೆದ ನಂತರ ಈ ಚಿತ್ರ ಬಿಡುಗಡೆಯಾಗುತ್ತಿದೆ. ಪ್ರಸ್ತುತ ಚಿತ್ರಕಥೆಗಳನ್ನು ಕೇಳುತ್ತಿರುವ ಚೇತನ್, ಮೋಹನ್ ನಿರ್ದೇಶನದ ಮಾರ್ಗ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಮುಂದಾಗಿದ್ದಾರೆ.
ಮತ್ತೊಂದೆಡೆ, ನಿರ್ದೇಶಕ ಸುನಿ ಪ್ರಸ್ತುತ ಶರಣ್ ಅವರ ಅವತಾರ ಪುರುಷ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಪುಷ್ಕರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ಸುನಿ ಗಣೇಶ್ ಅವರ ಸಖತ್ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾ