ಧನಂಜಯ್ 'ಬಡವ ರಾಸ್ಕಲ್' ಗೆ ವಿಸ್ಮಯಕಾರಿ ಕ್ಲೈಮ್ಯಾಕ್ಸ್: ನಿರ್ದೇಶಕ ಗುರುಪ್ರಸಾದ್

ಡಾಲಿ ಪಿಕ್ಚರ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ "ಬಡವ ರಾಸ್ಕಲ್" ಡಾಲಿ ಧನಂಜಯ್ ಬ್ಯಾನರ್‌ನಿಂದ ಮೂಡಿ ಬರುತ್ತಿರುವ ಮೊದಲ ಚಿತ್ರವಾಗಿದೆ. "ಎದ್ದೇಳು ಮಂಜುನಾಥ" ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಈ ಚಿತ್ರದಲ್ಲಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ
ಧನಂಜಯ್ ನಿರ್ದೇಶಕ ಗುರುಪ್ರಸಾದ್
ಧನಂಜಯ್ ನಿರ್ದೇಶಕ ಗುರುಪ್ರಸಾದ್

ಡಾಲಿ ಪಿಕ್ಚರ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ "ಬಡವ ರಾಸ್ಕಲ್" ಡಾಲಿ ಧನಂಜಯ್ ಬ್ಯಾನರ್‌ನಿಂದ ಮೂಡಿ ಬರುತ್ತಿರುವ ಮೊದಲ ಚಿತ್ರವಾಗಿದೆ. "ಎದ್ದೇಳು ಮಂಜುನಾಥ" ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಈ ಚಿತ್ರದಲ್ಲಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್ ಶಾಟ್‌ನಲ್ಲಿಗುರುಪ್ರಸಾದ್ ನಟಿಸಿದ್ದು ಜತೆಗೆ ಇನ್ನೊಬ್ಬ ನಿರ್ದೇಶಕ ವಿಜಯ ಪ್ರಸಾದ್ ಸಹ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ನಿರ್ದೇಶಕ ಶಂಕರ್ ಗುರು ಮತ್ತು ನಟ ಧನಂಜಯ್ "ಬಡವ ರಾಸ್ಕಲ್" ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಗುರುಪ್ರಸಾದ್ ಅವರ ಅಭಿನಯಿಸಿರುವುದಕ್ಕೆ ಸಂತಸಪಟ್ಟಿದ್ದಾರೆ. “ಅವರು ನನ್ನ ಗುರು, ಮತ್ತು ಮಠ ಹೊರತಾಗಿ  ನಾನು ಅವರ ಎಲ್ಲಾ ಚಿತ್ರಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದೇನೆ, ಡೈರೆಕ್ಟರ್ಸ್ ಸ್ಪೆಷಲ್ ಸೆಟ್ ಗಳಲ್ಲಿ ನಾನು ಧನಂಜಯ್ ಅವರನ್ನು ಪರಿಚಯಿಸಿಕೊಂಡಿದ್ದೆ. ಬಡವ ರಾಸ್ಕಲ್ ಆಕ್ಷನ್ ಫ್ಯಾಮಿಲಿ ಎಂಟರ್‌ಟೈನರ್ ಆಗಿರುವುದರಿಂದ, ನಾವು ಚಿತ್ರಕ್ಕೆ ಅತ್ಯಂತ ವಿಸ್ಮಯಕಾರಿ ಕ್ಲೈಮ್ಯಾಕ್ಸ್ ನಿಡಲು ಬಯಸಿದ್ದೆವು ಮತ್ತು ಅತಿಥಿ ಪಾತ್ರದಲ್ಲಿ ಗುರುಪ್ರಸಾದ್ ಬಗ್ಗೆ ನಾನು ಯೋಜಿಸಿದೆ. ಮತ್ತದನ್ನು ನಟ ಧನಂಜಯ್ ಅವರಿಗೆ ಹೇಳಿದೆ.  ಅವರು  ಒಪ್ಪಿದ್ದರು. 

" ಗುರುಪ್ರಸಾದ್ ಅವರೊಂದಿಗೆ ನಾವು ಇದನ್ನು ಚರ್ಚಿಸಿದೆವು. ಅವರೂ ಅದಕ್ಕೆ ತಕ್ಷಣವೇ ಒಪ್ಪಿದರು.  ಗುರುಪ್ರಸಾದ್ ಅವರ ಎರಡು ನಿಮಿಷಗಳ ಚಿತ್ರೀಕರಣವು ಚಿತ್ರದ ಕೊನೆಯಲ್ಲಿ ವೀಕ್ಷಕರ ಮನಸ್ಸನ್ನು ಖಚಿತವಾಗಿ ಹಿಡಿದಿಡಲಿದೆ."

ಈ ಚಿತ್ರದಲ್ಲಿ ಅಮೃತ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿದ್ದರೆ, ನಾಗಭೂಷಣ್ ಮತ್ತು ತಾರಾ  ಸಹ ಭಿನಯಿಸಿದ್ದಾರೆ. ಚಿತ್ರಕ್ಕೆ  ವಾಸುಕಿ ವೈಭವ್ ಸಂಗೀತ ಮತ್ತು ಪ್ರೀತಾ ಜಯರಾಮ್ ಛಾಯಾಗ್ರಹಣವಿದೆ.  "ಬಡವ ರಾಸ್ಕಲ್" ಚಿತ್ರದ ಬಗ್ಗೆ ಮಾತನಾಡಿದ ಧನಂಜಯ್ "ನನ್ನ ಮೊದಲ ಚಿತ್ರಕ್ಕೆ ಆಕರ್ಷಕ ಕ್ಲೈಮ್ಯಾಕ್ಸ್ ನೀಡಲು ಬಯಸಿದ್ದೆವು. ಅದು ಇಡೀ ಪಾತ್ರವರ್ಗವನ್ನು ಒಟ್ಟುಗೂಡಿಸುತ್ತದೆ. ನಾವು ಒಂದು ಪ್ರಮುಖ ಪಾತ್ರವನ್ನು ಹುಡುಕುತ್ತಿದ್ದೆವು, ಮತ್ತು ನಮ್ಮ ಸರ್ವಾನುಮತದ ಆಯ್ಕೆ ಗುರುಪ್ರಸಾದ್  ಅವರಾಗಿದ್ದರು. ಅವರಿಗೂ ಸಹ ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಸಂತಸವಾಗಿದೆ."

ಧನಂಜಯ್ ಅವರ ಅಭಿಮಾನಿಗಳು ಸಹ ಚಿತ್ರದ ಒಂದು ಭಾಗವಾಗಿದ್ದಾರೆ ಎನ್ನುವುದು ಚಿತ್ರದ ಇನ್ನೊಂದು ಹೈಲೈಟ್  “ಧನಂಜಯ ಅವರ ಅಭಿಮಾನಿಗಳು ಕಡೇ ಶೆಡ್ಯೂಲ್ ನಲ್ಲಿ ಸಾಕಷ್ಟು ಬೆಂಬಲಿಸಿದ್ದಾರೆ. . ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಅವರು ನಮ್ಮೊಂದಿಗೆ ನಿಂತು ಶುಭಕೋರಿದ್ದಾರೆ. ನಮ್ಮ ಟೀಂ ನೊಂದಿಗೆ 100 ಆಟೋ ಡ್ರೈವರ್‌ಗಳು ತಮ್ಮ ಆಟೋ ಚಲಾಯಿಸಿದ್ದಾರೆ. ಅಲ್ಲದೆ ಶೆಡ್ಯೂಲ್ ಅದ್ದೂರಿಯಾಗಿ ಅಂತ್ಯವಾಗುವುದನ್ನು ಖಾತ್ರಿಪಡಿಸಿದರು" ನಿರ್ದೇಶಕ ಶಂಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com