ಸಿನಿಮಾ ನಂಬಿ ಹಾಳಾಗದಿರಿ, ಓದಿ ದಡ ಸೇರಿ: ನವರಸ ನಾಯಕ ಜಗ್ಗೇಶ್

ಚಿತ್ರರಂಗಕ್ಕೆ ಬರಬೇಕು, ಹೆಸರು, ಹಣ ಸಂಪಾದಿಸಬೇಕು ಎಂಬುದು ಹಲವರ ಕನಸು. ಅನೇಕ ಮಂದಿ ಅದಕ್ಕಾಗಿ ಮನೆ ಬಿಟ್ಟು ಬಂದವರೂ ಇದ್ದಾರೆ.

Published: 15th October 2020 04:52 PM  |   Last Updated: 15th October 2020 04:52 PM   |  A+A-


Jaggesh

ಜಗ್ಗೇಶ್

Posted By : Vishwanath S
Source : UNI

ಬೆಂಗಳೂರು: ಚಿತ್ರರಂಗಕ್ಕೆ ಬರಬೇಕು, ಹೆಸರು, ಹಣ ಸಂಪಾದಿಸಬೇಕು ಎಂಬುದು ಹಲವರ ಕನಸು. ಅನೇಕ ಮಂದಿ ಅದಕ್ಕಾಗಿ ಮನೆ ಬಿಟ್ಟು ಬಂದವರೂ ಇದ್ದಾರೆ.

ಎಷ್ಟೋ ಮಂದಿ ಯಶಸ್ಸು ಕಂಡಿದ್ದರೆ, ಕೆಲವರು ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದ್ದರೆ, ಇನ್ನೂ ಹಲವರು ತಲೆಕೆಡಿಸಿಕೊಂಡು ಹಾಳಾಗಿದ್ದಾರೆ. ಇಂತಹ ಸಂದರ್ಭದಲ್ಲಿ “ಸಿನಿಮಾ ನಂಬಿ ಹಾಳಾಗಬೇಡಿ” ಎಂದು ನಟ ಜಗ್ಗೇಶ್‍ ಸಲಹೆ ನೀಡಿದ್ದಾರೆ.

ಪ್ರಸ್ತುತ ಚಿತ್ರರಂಗ ಬದಲಾಗಿದೆ. ಸಿನಿಮಾ ಇಂಡಸ್ಟ್ರಿ ಅಂದ್ರೆ ಅನುಮಾನದಿಂದ ನೋಡುವಂತಾಗಿದೆ. ಭವಿಷ್ಯ ರೂಪಿಸಿಕೊಳ್ಳಲು ಬರುವ ಯುವಕರು ಎಲ್ಲಿ ಜೀವನ ಹಾಳು ಮಾಡಿಕೊಂಡು ಬಿಡುತ್ತಾರೆ ಎಂಬ ಆತಂಕ ಹೆಚ್ಚು. ಹೀಗಾಗಿ ನಿರ್ದೇಶಕನಾಗಬೇಕೆಂದು ಬಯಸಿರುವ ಯುವಕನಿಗೆ ಜಗ್ಗೇಶ್ ಕಿವಿಮಾತು ಹೇಳಿದ್ದಾರೆ.

“ಜಗ್ಗೇಶ್ ಸರ್....ನನಗೆ ಡೈರೆಕ್ಟರ್ ಆಗಬೇಕು ಎಂಬ ಕನಸು. ನಾನು ಈಗ ಎರಡು ವರ್ಷ ಡಿಪ್ಲೋಮಾ ಮಾಡ್ತಿದ್ದೀನಿ. ಆಮೇಲೆ ಇಂಜಿನಿಯರಿಂಗ್ ಹೋಗ್ಲಾ ಅಥವಾ ಸಿನಿಮಾ ಇಂಡಸ್ಟ್ರಿಗೆ ಬರ್ಲಾ? ನಿರ್ದೇಶಕ ಆಗಬೇಕು ಎನ್ನುವುದು ನನಗೆ ದೊಡ್ಡ ಕನಸು'' ಎಂದು ಟ್ವಿಟ್ಟರ್ ಮೂಲಕ ಕೇಳಿದ್ದಾನೆ. ಅದಕ್ಕೆ ಜಗ್ಗೇಶ್ ಅವರು ಪ್ರತಿಕ್ರಿಯಿಸಿ ''ದಯಮಾಡಿ ಓದಿ ದಡ ಸೇರಿ! ಇಂದಿನ ಸಿನಿಮಾ ನಂಬಿ ತಂದೆ ತಾಯಿ ಕನಸು ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ! ನೀವೆಲ್ಲಾ ಅಂದುಕೊಂಡಷ್ಟು ಸುಲಭವಿಲ್ಲಾ ಇಂದಿನ ಸಿನಿಮಾ! ಬೇಕಾದರೆ ಸಂತೋಷಕ್ಕೆ ಹವ್ಯಾಸ ಆಗಿ ಬಳಸಿ ವೃತ್ತಿಯಾಗಿ ಅಲ್ಲ! ಬೆರಳೆಣಿಸುವ ಕೆಲವರ ಬಿಟ್ಟು ಶೇ. 98ರಷ್ಟು ಸಿನಿಮಾ ಜನ ಸಂಕಷ್ಟದಲ್ಲಿ ಇದ್ದಾರೆ ಎಂದು ವಾಸ್ತವ ತೆರೆದಿಟ್ಟಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp