ಸ್ಯಾಂಡಲ್ವುಡ್ ಡ್ರಗ್ ಪ್ರಕರಣ: ನಟಿ ರಾಗಿಣಿ ಜಾಮೀನು ವಿಚಾರಣೆ ಮುಂದೂಡಿಕೆ
ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿರಿವ ನಟಿ ರಾಗಿಣಿ ದ್ವಿವೇದಿಗೆ ಮತ್ತೆ ನಿರಾಶೆಯಾಗಿದೆ. ನಟಿ ರಾಗಿಣಿಯವರ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೊಮ್ಮೆ ನ್ಯಾಯಾಲಯ ಮುಂದೂಡಿ ಆದೇಶಿಸಿದೆ.
Published: 17th October 2020 03:26 PM | Last Updated: 17th October 2020 03:26 PM | A+A A-

ರಾಗಿಣಿ ದ್ವಿವೇದಿ
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ಜೈಲು ಸೇರಿರಿವ ನಟಿ ರಾಗಿಣಿ ದ್ವಿವೇದಿಗೆ ಮತ್ತೆ ನಿರಾಶೆಯಾಗಿದೆ. ನಟಿ ರಾಗಿಣಿಯವರ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೊಮ್ಮೆ ನ್ಯಾಯಾಲಯ ಮುಂದೂಡಿ ಆದೇಶಿಸಿದೆ.
ಡ್ರಗ್ ಪ್ರಕರಣದಲ್ಲಿ ಜೈಲಿನಲ್ಲಿರುವ ರಾಗಿಣಿ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಪೀಠ ಸಿಸಿಬಿ ಪರಎಸ್ಪಿಪಿಗೆ ನೋಟಿಸ್ ನೀಡಿ ಅಕ್ಟೋಬರ್ 23ಕ್ಕೆ ವಿಚಾರಣೆ ಮುಂದೂಡಿದೆ.
ಇದಕ್ಕೂ ಮುನ್ನ ರಾಗಿಣಿ ಪರ ವಕೀಲ ಎ.ಮೊಹಮ್ಮದ್ ತಾಹೀರ್ ನಟಿಗೆ ಜಾಮೀನು ಮಂಜೂರು ಂಆಡುವಂತೆ ನ್ಯಾಯಾಲಯವನ್ನು ಕೋರಿದ್ದರು. ಆದರೆ ನ್ಯಾಯಾಲಯ ಸಿಸಿಬಿ ಆಕ್ಷೇಪಣೆ ಸಲ್ಲಿಸಬೇಕೆಂದು ಹೇಳಿ ವಿಚಾರಣೆ ಮುಂದೂಡಿದೆ. ಹೀಗಾಗಿ ಜಾಮೀನು ಸಿಕ್ಕಿ ಜೈಲುವಾಸವನ್ನು ಮುಗಿಸಬಹುದೆಂಬ ನಿರೀಕ್ಷೆಯಲ್ಲಿದ್ದ ನಟಿಗೆ ಮತ್ತೊಮ್ಮೆ ನಿರಾಶೆಯಾಗಿದೆ.