ಹರಿಪ್ರಸಾದ್ 'ಪದವಿ ಪೂರ್ವ’ ಚಿತ್ರಕ್ಕೆ ಯಶಾ ಶಿವಕುಮಾರ್ ನಾಯಕಿ

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ನವನಟರಾದ ಪೃಥ್ವಿ ಶಾಮನೂರ್ ಮತ್ತು ಅಂಜಲಿ ಅನೀಶ್ ನಟಿಸಿದ್ದು ಇವರೊಡನೆ ಇದೀಗ ಪದವಿ ಪೂರ್ವ" ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ಯಶಾ ಶಿವಕುಮಾರ್ ಆಗಮನವಾಗಿದೆ.

Published: 17th October 2020 11:31 AM  |   Last Updated: 17th October 2020 12:09 PM   |  A+A-


ಯಶಾ ಶಿವಕುಮಾರ್

Posted By : Raghavendra Adiga
Source : The New Indian Express

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ನವನಟರಾದ ಪೃಥ್ವಿ ಶಾಮನೂರ್ ಮತ್ತು ಅಂಜಲಿ ಅನೀಶ್ ನಟಿಸಿದ್ದು ಇವರೊಡನೆ ಇದೀಗ ಪದವಿ ಪೂರ್ವ" ಚಿತ್ರದ ಮೂಲಕ ಮತ್ತೊಬ್ಬ ನಾಯಕಿಯಾಗಿ ಯಶಾ ಶಿವಕುಮಾರ್ ಆಗಮನವಾಗಿದೆ. ಪದವಿ ಪೂರ್ವ ವಿದ್ಯಾರ್ಥಿಗಳ ಸುತ್ತ ಸುತ್ತುವ ಈ ಚಿತ್ರವು ಪೃಥ್ವಿ ಶಾಮನೂರ್ ಮತ್ತು ಅಂಜಲಿ ಅನೀಶ್‌ರಂತಹ ಹೊಸಬರ ದಂಡನ್ನೇ ಹೊಂದಿದೆ.

ಯಶಾ ಶಿವಕುಮಾರ್ ಎಂಜಿನಿಯರಿಂಗ್ ವಿದ್ಯಾರ್ಥಿನಿ, ರೂಪದರ್ಶಿ ಮತ್ತು ಭರತನಾಟ್ಯ ಕಲಾವಿದೆ ಸಹ ಹೌದು.  ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ 'ಆಳ್ವಾಸ್ ಕಾಲೇಜ್'ನ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು ಈಕೆ ಕಳೆದ ವರ್ಷ 2019ರಲ್ಲಿ ‘ಫ್ಯಾಶನ್ ಎಬಿಸಿಡಿ' ಸಂಸ್ಥೆ ಆಯೋಜಿಸಿದ್ದ "ಮಿಸ್ ಬೆಂಗಳೂರು 2019" "ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ 2019" ಹಾಗೂ ಮುಂಬೈನಲ್ಲಿ ನಡೆದ "ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019" ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಮೂಲಕ ಅನೇಕ ಫ್ಯಾಶನ್ ಕಿರೀಟಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

"ನಮ್ಮ ಚಲನಚಿತ್ರವು 90 ರ ದಶಕದ ಹಿನ್ನೆಲೆಯಲ್ಲಿ ಕಾಲೇಜಿನ ಕಥೆಯನ್ನಾಧರಿಸಿದೆ. ಐದು ಪ್ರಮುಖ ಪಾತ್ರಗಳನ್ನು ಒಳಗೊಂಡಿರುತ್ತದೆ. ನಾವು ಇಲ್ಲಿಯವರೆಗೆ ಮೂರು ಪಾತ್ರಗಳನ್ನು ಅಂತಿಮಗೊಳಿಸಿದ್ದು ಇನ್ನೂ ಇಬ್ಬರು ಪಾತ್ರಧಾರಿಗಳನ್ನು ಹುಡುಕುತ್ತಿದ್ದೇವೆ" ಹರಿಪ್ರಸಾದ್ ಹೇಳುತ್ತಾರೆ.

ಯೋಗರಾಜ್ ಭಟ್ ಮತ್ತು ರವಿ ಶಾಮನೂರ್  ನಿರ್ಮಾಣ ಮಾಡಿರುವ ಯೋಜನೆ ನವೆಂಬರ್‌ನಿಂದ ಪ್ರಾರಂಭವಾಗಲಿದೆ. "ಪದವಿ ಪೂರ್ವ"ಗೆ ಯೋಗರಾಜ್ ಭಟ್ ಬರೆದ ಸಾಹಿತ್ಯವಿದ್ದು ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿದೆ.
 

Stay up to date on all the latest ಸಿನಿಮಾ ಸುದ್ದಿ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp