ಪ್ರಖ್ಯಾತ ಕನ್ನಡ ಧಾರಾವಾಹಿ ನಟ ಕೃಷ್ಣ ನಾಡಿಗ್ ವಿಧಿವಶ

ಕನ್ನಡ ಧಾರವಾಹಿಯ ಪ್ರಖ್ಯಾತ ನಟ ಕೃಷ್ಣ ನಾಡಿಗ್ ಅವರು ಶನಿವಾರ ವಿಧಿವಶರಾಗಿದ್ದಾರೆ. 

Published: 18th October 2020 10:25 AM  |   Last Updated: 18th October 2020 10:25 AM   |  A+A-


krishna nadig

ಕೃಷ್ಣ ನಾಡಿಗ್

Posted By : Manjula VN
Source : Online Desk

ಬೆಂಗಳೂರು: ಕನ್ನಡ ಧಾರವಾಹಿಯ ಪ್ರಖ್ಯಾತ ನಟ ಕೃಷ್ಣ ನಾಡಿಗ್ ಅವರು ಶನಿವಾರ ವಿಧಿವಶರಾಗಿದ್ದಾರೆ. 

ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕೃಷ್ಣ ನಾಡಿಗ್ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ. 

ಕೃಷ್ಣ ನಾಡಿಗ್ ಅವರು ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾಗಳಲ್ಲಿಯೂ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಮಿಲನ, ದೇವಿ, ಪಾರು ಮುಂತಾದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಪೈಲ್ವಾನ್, ಆದಿ ಲಕ್ಷ್ಮಿ ಪುರಾಣ ಹಾಗೂ ಇತರೆ ಸಾಕಷ್ಟು ಸಿನಿಮಾಗಳಲ್ಲೂ ನಡೆಸಿದ್ದರು. 

ನಾಡಿಗ್ ಚಿಕ್ಕಮಗಳೂರು ಮೂಲದವರು. ನಾಟಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡ ಇವರು ಪುಟ್ಟಣ್ಣ ಕಣಗಾಲ್ ಚಿನಿಮಾಗಳನ್ನು ನೋಡಿ ನಿರ್ದೇಶಕನಾಗುವ ಕನಸು ಹೊತ್ತು ಬಂದಿದ್ದರು. ಆದರೆ, ಕೊನೆಗೆ ನಟರಾಗಿ ಜನರ ಮನಗೆದ್ದಿದ್ದರು.

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp