ಕ್ರಿಸ್‌ಮಸ್ ಗೆ ಚಿತ್ರಮಂದಿರಗಳಿಗೆ 'ರಾಬರ್ಟ್' ಎಂಟ್ರಿ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಹಾಗೂ ಬಿಗ್ ಸಿನಿಮಾಗಳ ರಿಲೀಸ್ ಗಾಗಿ ಕಾಯುತ್ತಿದ್ದವರಿಗೆ, ಥಿಯೇಟರ್ ಮಾಲೀಕರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ದರ್ಶನ್ ಅಭಿನಯದ "ರಾಬರ್ಟ್"ಕ್ರಿಸ್‌ಮಸ್ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

Published: 19th October 2020 10:50 AM  |   Last Updated: 19th October 2020 12:33 PM   |  A+A-


ರಾಬರ್ಟ್

Posted By : Raghavendra Adiga
Source : The New Indian Express

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಹಾಗೂ ಬಿಗ್ ಸಿನಿಮಾಗಳ ರಿಲೀಸ್ ಗಾಗಿ ಕಾಯುತ್ತಿದ್ದವರಿಗೆ, ಥಿಯೇಟರ್ ಮಾಲೀಕರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ದರ್ಶನ್ ಅಭಿನಯದ "ರಾಬರ್ಟ್"ಕ್ರಿಸ್‌ಮಸ್ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿದ ಮತ್ತು ಉಮಾಪತಿ ಎಸ್ ಗೌಡ ನಿರ್ಮಿಸಿದ ಈ ಚಿತ್ರ ಡಿಸೆಂಬರ್ 25 ರಂದುಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ ಎನ್ನಲಾಗಿದೆ.

ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿರೋ "ರಾಬರ್ಟ್"  ಹೊಸ ವರ್ಷದ ಮುನ್ನ ರಜಾದಿನಗಳಂದು ಜನರ ಮನರಂಜಿಸಲು ಬರುತ್ತಿದೆ. ಆದರೆ ಈ ಬಗ್ಗೆ  ಅಂತಿಮ ತೀರ್ಮಾನದ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ. 

"ರಾಬರ್ಟ್ ಏಪ್ರಿಲ್ 9 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಸಾಂಕ್ರಾಮಿಕ ರೋಗದಿಂದಾಗಿ ದಿನಾಂಕವನ್ನು ಮುಂದಕ್ಕೆ ಹಾಕಲಾಯಿತು. ನಾವು ಈಗಾಗಲೇ ಎಂಟು ತಿಂಗಳ ವಿಳಂಬ ಕಂಡಿದ್ದೇವೆ. ಚಿತ್ರವು ಸಿದ್ಧವಾಗಿರುವುದರಿಂದ, ನಾವು ಅದನ್ನು ಕ್ರಿಸ್‌ಮಸ್‌ನ ಆಸುಪಾಸಿನಲ್ಲಿ ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಮಾಡಲು ನೋಡುತ್ತಿದ್ದೇವೆ ”ಎಂದು ಉಮಾಪತಿ ಹೇಳುತ್ತಾರೆ. ಅಭಿಮಾನಿಗಳು ದೀರ್ಘಕಾಲ ಕಾಯಲು ನಾವು ಬಯಸುವುದಿಲ್ಲ ಎನ್ನುವ ಅವರು "ನಿರ್ಮಾಪಕರಾಗಿ, ನಾನು ಬಿಡುಗಡೆ ಯೋಜನೆಯನ್ನು ರೂಪಿಸುತ್ತಿದ್ದೇನೆ ಮತ್ತು ನಟ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಅವರೊಂದಿಗೆ ಒಂದು ಸುತ್ತಿನ ಚರ್ಚೆಯ ನಂತರ ಸ್ಪಷ್ಟಚಿತ್ರಣ ಸಿಕ್ಕಲಿದೆ" ಎಂದರು.

ಉಮಾಪತಿ ಫಿಲ್ಮ್ಸ್ ನಿರ್ಮಿಸಿದ " ರಾಬರ್ಟ್"ಪೋಸ್ಟರ್‌ಗಳು, ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಸಾಕಷ್ಟು ಸಂವೇದನೆಯನ್ನುಂಟುಮಾಡಿದೆ. ಎಮೋಷನಲ್ ಮಾಸ್ ಥ್ರಿಲ್ಲರ್ ಮೊದಲ ಬಾರಿಗೆ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಒಟ್ಟುಗೂಡಿಸುತ್ತದೆ ಮತ್ತು ದರ್ಶನ್ ವಿಭಿನ್ನ ಶೇಡ್ ಗಳಲ್ಲಿ ಕಾಣುವುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಇನ್ನು ಈ ಚಿತ್ರದ ಮೂಲಕ ಆಶಾ ಭಟ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ  ಮಾಡುತ್ತಿದ್ದಾರೆ. ಜಗಪತಿ ಬಾಬು  ವಿಲನ್ ರೋಲ್ ನಲ್ಲಿದ್ದು , ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೋ, ರವಿ ಕಿಶನ್, ಶಿವರಾಜ್ ಕೆ ಆರ್ ಪೇಟ್, ಚಿಕ್ಕಣ್ಣ ಮತ್ತು ಧರ್ಮಣ್ಣ ಕಡೂರ್ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ  ಅರ್ಜುನ್ ಜನ್ಯಾ ಸಂಗೀತ ನೀಡಿದ್ದರೆ, ಸುಧಾಕರ್ ಎಸ್ ರಾಜ್ ಛಾಯಾಗ್ರಹಣವಿದೆ. 


Stay up to date on all the latest ಸಿನಿಮಾ ಸುದ್ದಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp