ಮಳೆ ಬಾಧಿತ ಹೈದ್ರಾಬಾದಿಗೆ ದೇಣಿಗೆ ಪ್ರಕಟಿಸಿದ ತೆಲುಗು ಸೂಪರ್ ಸ್ಟಾರ್ ಗಳು!

ಮಳೆಯಿಂದ ತೀವ್ರ ಹಾನಿಗೊಳಗಾಗಿರುವ ಮುತ್ತಿನ ನಗರಿ ಹೈದರಾಬಾದ್‌ಗಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸ್ಥಾಪಿಸಿರುವ ಪರಿಹಾರ ನಿಧಿಗೆ  ದಕ್ಷಿಣ ಭಾರತದ ನಟರಾದ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ಜೂನಿಯರ್ ಎನ್‌ಟಿಆರ್, ವಿಜಯ್ ದೇವರಕೊಂಡ ಮತ್ತು ಮಹೇಶ್ ಬಾಬು, ದೇಣಿಗೆ ನೀಡಿದ್ದಾರೆ.

Published: 20th October 2020 05:44 PM  |   Last Updated: 20th October 2020 06:17 PM   |  A+A-


Chiranjeevi_nagarjuna_mahesh_babu1

ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು

Posted By : Nagaraja AB
Source : Online Desk

ಹೈದ್ರಾಬಾದ್:  ಮಳೆಯಿಂದ ತೀವ್ರ ಹಾನಿಗೊಳಗಾಗಿರುವ ಮುತ್ತಿನ ನಗರಿ ಹೈದರಾಬಾದ್‌ಗಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸ್ಥಾಪಿಸಿರುವ ಪರಿಹಾರ ನಿಧಿಗೆ  ದಕ್ಷಿಣ ಭಾರತದ ನಟರಾದ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ಜೂನಿಯರ್ ಎನ್‌ಟಿಆರ್, ವಿಜಯ್ ದೇವರಕೊಂಡ ಮತ್ತು ಮಹೇಶ್ ಬಾಬು, ದೇಣಿಗೆ ನೀಡುತ್ತಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ 1 ಕೋಟಿ ರೂ. ದೇಣಿಗೆ ನೀಡುವುದಾಗಿ ಟ್ವೀಟರ್ ನಲ್ಲಿ ಪ್ರಕಟಿಸಿದ್ದು, ಅಗತ್ಯ ನೆರವು ನೀಡಲು ಎಲ್ಲರು ಮುಂದೆ ಬರುವಂತೆ ಮನವಿ ಮಾಡಿದ್ದಾರೆ. 

ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡುವುದಾಗಿ ನಾಗಾರ್ಜುನ  ತಿಳಿಸಿದ್ದಾರೆ.

ಇಂತಹ ಸಂಕಷ್ಟದ ಸಂದರ್ಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ.ದೇಣಿಗೆ ನೀಡುವುದಾಗಿ ನಟ ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.

ಇನ್ನೂ 50 ಲಕ್ಷ ದೇಣಿಗೆ ನೀಡುವುದಾಗಿ ಜ್ಯೂನಿಯರ್ ಎನ್ ಟಿಆರ್ ತಿಳಿಸಿದ್ದಾರೆ.

ವಿಜಯ ದೇವರಕೊಂಡ 10ಲಕ್ಷ ರೂ. ದೇಣಿಗೆ ನೀಡಿದ್ದು, ಉಳ್ಳವರು ಸಿಎಂ ಪರಿಹಾರ ನಿಧಿಗೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ತೆಲಂಗಾಣದ ರಾಜಧಾನಿಯಾಗಿರುವ ಹೈದ್ರಾಬಾದ್ ಸುತ್ತಮುತ್ತ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ 70 ಜನರು ಸಾವನ್ನಪ್ಪಿದ್ದು, ಆಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.

Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp