‘1980’ ರೆಟ್ರೋ ಶೈಲಿಯ ಕಥೆ ನನ್ನನ್ನು ಸೆಳೆಯಿತು: ಪ್ರಿಯಾಂಕ ಉಪೇಂದ್ರ

ನಟಿ ಪ್ರಿಯಾಂಕ ಉಪೇಂದ್ರ 1980ರ ಕಾಲದ ಕಥೆಯೊಂಡಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ. ಪ್ರಸ್ತುತ ನಟಿ "ಉಗ್ರಾವತಾರ" ಚಿತ್ರದಲ್ಲಿ ನಟಿಸುತ್ತಿದ್ದು 'ಸವಾರಿ 2’, ‘ವಸಂತ ಕಾಲ’, ‘ಮಿಸ್ಡ್ ಕಾಲ್’, ‘ಪರಿಧಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ರಾಜ್ ಕಿರಣ್ ‘1980’ ಚಿತ್ರದ ನಿರ್ದೇಶಕರು.
ಪ್ರಿಯಾಂಕ ಉಪೇಂದ್ರ
ಪ್ರಿಯಾಂಕ ಉಪೇಂದ್ರ

ನಟಿ ಪ್ರಿಯಾಂಕ ಉಪೇಂದ್ರ 1980ರ ಕಾಲದ ಕಥೆಯೊಂಡಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ. ಪ್ರಸ್ತುತ ನಟಿ "ಉಗ್ರಾವತಾರ" ಚಿತ್ರದಲ್ಲಿ ನಟಿಸುತ್ತಿದ್ದು 'ಸವಾರಿ 2’, ‘ವಸಂತ ಕಾಲ’, ‘ಮಿಸ್ಡ್ ಕಾಲ್’, ‘ಪರಿಧಿ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ರಾಜ್ ಕಿರಣ್ ‘1980’ ಚಿತ್ರದ ನಿರ್ದೇಶಕರು. ಇವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.  “ಮಮ್ಮಿ ಸೇವ್ ಮಿ" ಹಾಗೂ "ದೇವಕಿ" ನಂತರ ನಾನು ಬೇರೆ ಪ್ರಕಾರದ ಕಥೆ ಆಯ್ಕೆ ಮಾಡಿಕೊಳ್ಳಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿದ್ದೇನೆ ಮತ್ತು ಅದಕ್ಕಾಗಿಯೇ ನಾನು "ಉಗ್ರಾವತಾರ"ಕ್ಕೆ ಸಹಿ ಹಾಕಿದ್ದೇನೆ, ಅದರಲ್ಲಿ ನಾನು ಪೋಲೀಸ್  ಪಾತ್ರವನ್ನು ಅಭಿನಯಿಸುತ್ತಿದ್ದೇನೆ.

"ಲೈಫ್ ಈಸ್ ಬ್ಯೂಟಿಫುಲ್" ಚಿತ್ರದ ನನ್ನ ಪಾತ್ರ ಹೆಚ್ಚು ಭಾವನಾತ್ಮಕವಾಗಿದೆ. ಆದಾಗ್ಯೂ, ನಾನು ಇಲ್ಲಿಯವರೆಗೆ ಮಾಡಿದ ಪಾತ್ರಗಳಿಗೆ ಹೋಲಿಸಿದರೆ "1980 "ವಿಭಿನ್ನ ವಿಷಯವಾಗಿದೆ ”ಎಂದು ಹೇಳುತ್ತಾರೆ,“ ಕಥೆ ಮತ್ತು ರೆಟ್ರೋ ಶೈಲಿಯು ನನ್ನನ್ನು ಆಕರ್ಷಿಸಿದೆ.  "1980 - ಎ ಡೆಮನ್ಸ್ ಎರಾ" ಎಂದು ಹೆಸರಿಸಲಾಗಿರುವ ಚಿತ್ರ ಅಕ್ಟೋಬರ್ 28 ರಂದು ಪ್ರಾರಂಭವಾಗಿ ನವೆಂಬರ್ ನಲ್ಲಿ ಚಿಕ್ಕಮಗಳೂರು ಸುತ್ತಮುತ್ತ ಶೂಟಿಂಗ್ ನಡೆಯಲಿದೆ..

"ಉಗ್ರಾವತಾರ" ಚಿತ್ರದ ಶೇ 50 ರಷ್ಟು ಚಿತ್ರೀಕರಣವನ್ನು ಪ್ರಿಯಾಂಕ ಪೂರ್ಣಗೊಳಿಸಿದ್ದಾರೆ, ಇದು ಉತ್ತಮವಾಗಿ ಮೂಡಿಬರುತ್ತಿದೆ ಎನ್ನುವ ನಟಿ “ನಾನು ನವೆಂಬರ್ ನಿಂದ 1980 ಚಿತ್ರೀಕರಣದಲ್ಲಿ ತೊಡಗುತ್ತೇನೆ. ಏಕಕಾಲದಲ್ಲಿ ಉಗ್ರವತಾರಕ್ಕಾಗಿಯೂ ನನ್ನ ಪಾಲಿನ ಶೂಟಿಂಗ್ ಮುಂದುವರಿಯಲಿದೆ.  ಸದ್ಯ ತಯಾರಿ ನಡೆಯುತ್ತಿರುವ ಚಿತ್ರಕ್ಕಾಗಿ ನಾನು ನಿರ್ದೇಶಕ ಗೌತಮ್ ವಿ.ಪಿ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ” ಎಂದು ಅವರು ಹೇಳುತ್ತಾರೆ.

ಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಗುತ್ತಿರುವ "1980" ರಲ್ಲಿ ಅರವಿಂದ ರಾವ್, ಶ್ರೀಧರ್ ಮತ್ತು ಮುರಳಿ ಶರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ  ಚಿಂತನ್ ವಿಕಾಸ್ ಸಂಗೀತ ಸಂಯೋಜನೆ ಮತ್ತು ಜೀವನ್ ಆಂಥೋನಿ ಕ್ಯಾಮೆರಾ ಕೆಲಸ ನಿರ್ವಹಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com