ಮುರುಳಿಧರನ್ ಬಯೋಫಿಕ್ ನಿಂದ ಹೊರಬಂದ ವಿಜಯ್ ಸೇತುಪತಿ: ನಟನ ಮಗಳಿಗೆ ಅತ್ಯಾಚಾರ ಬೆದರಿಕೆ

ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಿಂದ ಹೊರಬಂದ ಬೆನ್ನಲ್ಲೇ ತಮಿಳು ನಟ ವಿಜಯ್ ಸೇತುಪತಿ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. 

Published: 20th October 2020 11:47 AM  |   Last Updated: 20th October 2020 11:47 AM   |  A+A-


Vijay sethupathi

ವಿಜಯ್ ಸೇತುಪತಿ

Posted By : Shilpa D
Source : Online Desk

ಚೆನ್ನೈ: ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಿಂದ ಹೊರಬಂದ ಬೆನ್ನಲ್ಲೇ ತಮಿಳು ನಟ ವಿಜಯ್ ಸೇತುಪತಿ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. 

ವಿಜಯ್ ಸೇತುಪತಿ 800 ಸಿನಿಮಾದಿಂದ ಹೊರಬರುವುದಾಗಿ ಮಾಡಿದ್ದ ಟ್ವೀಟ್ ಗೆ ಕಿರಾತಕನೊಬ್ಬ ಮಗಳ ಮೇಲೆ ಅತ್ಯಾಚಾರವೆಸಗುವುದಾಗಿ ಅಸಹ್ಯಕರ ಕಾಮೆಂಟ್ ಹಾಕಿದ್ದಾನೆ.  ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ವಿಜಯ್ ಸೇತುಪತಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಆತನ ಟ್ವಿಟ್ಟರ್ ಹ್ಯಾಂಡಲ್ ಗೆ ರಿಪೋರ್ಟ್ ಮಾಡಿ ತಕ್ಷಣ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ.

ರಿತಿಕ್ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ನಿಂದ ಬೆದರಿಕೆ ಅತ್ಯಾಚಾರ ಬೆದಕರಿಕೆ ಹಾಕಿದ ವ್ಯಕ್ತಿಯ ಟ್ವಿಟ್ಟರ್ ಖಾತೆ ರಿತಿಕ್ ಎನ್ನುವ ಹೆಸರಿನಲ್ಲಿದೆ. ಈ ಟ್ವಿಟ್ಟರ್ ಹ್ಯಾಂಡಲ್ ನಿಂದ ವಿಜಯ್ ಮತ್ತು ಪುಟ್ಟ ಮಗಳ ಫೋಟೋವನ್ನು ಶೇರ್ ಮಾಡಿ ಅತ್ಯಾಚಾರ ನಡೆಸಬೇಕು, ಅವಳ ತಂದೆಗೆ ತಮಿಳರು ಶ್ರೀಲಂಕಾದಲ್ಲಿ ನಡೆಸಿದ ಜೀವನ ಅರ್ಥವಾಗಬೇಕು' ಎಂದು ಟ್ವೀಟ್ ಮಾಡಿದ್ದಾನೆ.
 

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp