ಹಾಡುಹಗಲೇ ತುಳು ಚಿತ್ರ ನಟ ತುಳು ಚಿತ್ರ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಕೊಚ್ಚಿ ಬರ್ಬರ ಹತ್ಯೆ!

ಸುವರ್ಣದೀರ್ಘ ಸಂಧಿ ಸೇರಿದಂತೆ ಕೆಲ ತುಳು ಚಿತ್ರಗಳಲ್ಲಿ ಅಭಿನಯಿಸಿರುವ ತುಳು ಚಿತ್ರ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರನ್ನು ಹಾಡುಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

Published: 21st October 2020 03:13 PM  |   Last Updated: 21st October 2020 04:33 PM   |  A+A-


surendra bantwal

ಸುರೇಂದ್ರ ಬಂಟ್ವಾಳ್

Posted By : Vishwanath S
Source : Online Desk

ಮಂಗಳೂರು: ಸುವರ್ಣದೀರ್ಘ ಸಂಧಿ ಸೇರಿದಂತೆ ಕೆಲ ತುಳು ಚಿತ್ರಗಳಲ್ಲಿ ಅಭಿನಯಿಸಿರುವ ತುಳು ಚಿತ್ರ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರನ್ನು ಹಾಡುಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಬಿ.ಸಿ.ರೋಡ್ ನ ಫ್ಲ್ಯಾಟ್ ಒಂದರಲ್ಲಿ ಸುರೇಂದ್ರ ಬಂಟ್ವಾಳ್‌ ಎಂಬವರ ಹತ್ಯೆ ಮಾಡಲಾಗಿದೆ. ಕಳೆದ ರಾತ್ರಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2018ರಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಬಂಟ್ವಾಳ ಪೇಟೆಯಲ್ಲಿ ನಡೆದ ತಲವಾರು ದಾಳಿ ಪ್ರಕರಣದಲ್ಲಿ ಸುರೇಂದ್ರ ಬಂಟ್ವಾಳ್ ಹೆಸರು ಕೇಳಿಬಂದಿತ್ತು. ಬಳಿಕ ಅವರನ್ನು ಕಾಸರಗೋಡಿನ ಕುಂಬ್ಳೆ ಬಳಿ ಪೊಲೀಸರು ಬಂಧಿಸಿ ಕರೆತಂದಿದ್ದರು.

ಈ ಹಿಂದೆ ಬಲಪಂಥೀಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಸುರೇಂದ್ರ ರೌಡಿಶೀಟರ್‌ ಆಗಿದ್ದು ಬಳಿಕ ಕಾಂಗ್ರೆಸ್ ಸೇರಿದ್ದರು. ಅವರು ಚಾಲಿಪೋಲಿಲು ತುಳು ಸಿನಿಮಾದಲ್ಲಿ ನಟಿಸಿದ್ದರು.

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp