'ಜೂನಿಯರ್ ಚಿರು' ಆಗಮನ: ಸರ್ಜಾ ಕುಟುಂಬದಲ್ಲಿ ಇಮ್ಮಡಿಸಿದ ಸಂಭ್ರಮ

ಸರ್ಜಾ ಮನೆಯಲ್ಲಿ ಸಂತಸ ಇಮ್ಮಡಿಸಿದೆ. ಕುಟುಂಬಕ್ಕೆ ಜೂನಿಯರ್ ಚಿರು ಸರ್ಜಾ ಎಂಟ್ರಿಯಾಗಿದೆ. ಮೇಘನಾ ರಾಜ್ ಸರ್ಜಾ ಇಂದು ಬೆಳಗ್ಗೆ ನಗರದ ಅಕ್ಷ ಆಸ್ಪತ್ರೆಯಲ್ಲಿ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Published: 22nd October 2020 11:28 AM  |   Last Updated: 22nd October 2020 03:24 PM   |  A+A-


Meghana Raj Sarja baby shower photo

ಕೆಲ ದಿನಗಳ ಹಿಂದೆ ಸೀಮಂತ ಆಚರಿಸಿಕೊಂಡಿದ್ದ ಮೇಘನಾ ರಾಜ್ ಸರ್ಜಾ

Posted By : Sumana Upadhyaya
Source : Online Desk

ಬೆಂಗಳೂರು: ಸರ್ಜಾ ಮನೆಯಲ್ಲಿ ಸಂತಸ ಇಮ್ಮಡಿಸಿದೆ. ಕುಟುಂಬಕ್ಕೆ ಜೂನಿಯರ್ ಚಿರು ಸರ್ಜಾ ಎಂಟ್ರಿಯಾಗಿದೆ. ಮೇಘನಾ ರಾಜ್ ಸರ್ಜಾ ಇಂದು ಬೆಳಗ್ಗೆ ನಗರದ ಅಕ್ಷ ಆಸ್ಪತ್ರೆಯಲ್ಲಿ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇಲ್ಲಿದೆ ನೋಡಿ ಚಿರು-ಮೇಘನಾ ಪುತ್ರನ ಫೋಟೋಗಳು!

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಗು ಜನಿಸಿರುವುದು ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡಿದೆ. ನಮ್ಮ ಚಿರು ಅಣ್ಣ ಎಲ್ಲೂ ಹೋಗಿಲ್ಲ, ಎಲ್ಲರ ಜೊತೆಯಲ್ಲಿದ್ದಾರೆ, ಮಗುವಿನ ರೂಪದಲ್ಲಿ ಮತ್ತೆ ಬಂದಿದ್ದಾರೆ ಎಂದು ಸಂಭ್ರಮದಿಂದ ಆಸ್ಪತ್ರೆಯ ಹೊರಗೆ ಪಟಾಕಿ ಹಚ್ಚಿ ಸಿಹಿ ಹಂಚಿ ಸಂಭ್ರಮವನ್ನು ವ್ಯಕ್ತಪಡಿಸುತ್ತಿದ್ದಾರೆ.

ಮೇಘನಾ ಹೆರಿಗೆಯಾದ ಬಳಿಕ ವಾರ್ಡ್ ನಲ್ಲಿರುವ ಚಿರು ಫೋಟೋ ಮುಂದೆ ಮಗುವನ್ನು ತೋರಿಸುತ್ತಿರುವ ಆಸ್ಪತ್ರೆ ದಾದಿಯರು
ಮೇಘನಾ ಹೆರಿಗೆಯಾದ ಆಸ್ಪತ್ರೆ ವಾರ್ಡ್ ನಲ್ಲಿ ಮಗುವನ್ನು ಚಿರು ಸರ್ಜಾ ಫೋಟೋ ಮುಂದೆ ಹಿಡಿದಿರುವ ದಾದಿಯರು

2017ರ ಅಕ್ಟೋಬರ್ 22ರಂದು ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮದುವೆ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಅದೇ ದಿನಾಂಕದಂದು ಅವರ ಪ್ರೇಮದ ಕಾಣಿಕೆ ಮಗು ಜನನವಾಗಿದ್ದು ಕಾಕತಾಳೀಯ ಎನ್ನಬಹುದು. ಮೊನ್ನೆ 17ನೇ ತಾರೀಖು ಚಿರಂಜೀವಿ ಸರ್ಜಾ ಹುಟ್ಟುಹಬ್ಬವಾಗಿತ್ತು.ಅಂದು ಮಗು ಜನನವಾಗಲಿದೆ, ಅವಳಿ ಮಗುವಾಗಲಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿತ್ತು.

ಕಳೆದ ಜೂನ್ 7ರಂದು ಚಿರಂಜೀವಿ ಸರ್ಜಾ ಹಠಾತ್ತಾಗಿ ಹೃದಯಾಘಾತದಿಂದ ನಿಧನ ಹೊಂದಿ ಕುಟುಂಬ ವರ್ಗ, ಅಪಾರ ಬಂಧು-ಮಿತ್ರರು, ಅಭಿಮಾನಿಗಳು ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿದ್ದರು. ಆಗ ಮೇಘನಾ ರಾಜ್ 4 ತಿಂಗಳ ಗರ್ಭಿಣಿ. 5 ತಿಂಗಳ ನಂತರ ಇದೀಗ ಜೂನಿಯರ್ ಚಿರು ಆಗಮನ ಎಲ್ಲ ದುಃಖವನ್ನು ಮರೆಸಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘನಾ ರಾಜ್ ತಂದೆ ತಾಯಿ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್, ಕತ್ತಲೆಯ ದುಃಖದ ಕಾರ್ಮೋಡ ಸರಿದು ನಮ್ಮ ಕುಟುಂಬಕ್ಕೆ ನವರಾತ್ರಿಯ ಶುಭ ಸಂದರ್ಭದಲ್ಲಿ ಖುಷಿ ತಂದಿದೆ. ಮಗು ಚಿರು ಥರಾನೇ ಇದ್ದಾನೆ. ಇಡೀ ಕರ್ನಾಟಕದ, ಕನ್ನಡಿಗರ ಹಾರೈಕೆ ನಮ್ಮ ಮೇಲಿದೆ, ನಮ್ಮ ಕಷ್ಟದ ಸಂದರ್ಭದಲ್ಲಿ ಎಲ್ಲರೂ ನಮ್ಮ ಜೊತೆಗಿದ್ದು ಹಾರೈಸಿದ್ದಾರೆ, ಅವರಿಗೆ ಧನ್ಯವಾದಗಳು ಎಂದರು.

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp