ಕೆಜಿಎಫ್ ಚಾಪ್ಟರ್-1, ಟಗರು ಸಿನಿಮಾ ಮರು ಬಿಡುಗಡೆ

ಇದೀಗ ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ ಕೆಜಿಎಫ್-1 ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ  ಕೂಡ ರೀ ರಿಲೀಸ್ ಆಗಿದೆ.

Published: 23rd October 2020 05:27 PM  |   Last Updated: 23rd October 2020 05:46 PM   |  A+A-


KGF_Tagaru1

ಕೆಜಿಎಫ್, ಟಗರು ಚಿತ್ರದ ಪೋಸ್ಟರ್

Posted By : Nagaraja AB
Source : UNI

ಬೆಂಗಳೂರು: ಚಿತ್ರ ಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದ ನಂತರ, ಲಾಕ್ ಡೌನ್ ಗೂ ಮುನ್ನ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಗಳು ಮತ್ತೆ ಬಿಡುಗಡೆಗೊಂಡು ಪ್ರದರ್ಶಿತವಾಗುತ್ತಿದೆ. ದಿಯಾ, ಲವ್ ಮಾಕ್ಟೇಲ್, ಶಿವಾರ್ಜುನ ಸಿನಿಮಾಗಳು ಸೇರಿದಂತೆ ಸಾಕಷ್ಟು ಸಿನಿಮಾಗಳು ಮತ್ತೆ ಬೆಳ್ಳಿ ಪರದೆ ಮೇಲೆ ರಾರಾಜಿಸುತ್ತಿವೆ.

ಇದೀಗ ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ ಕೆಜಿಎಫ್-1 ಹಾಗೂ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ  ಕೂಡ ರೀ ರಿಲೀಸ್ ಆಗಿದೆ.  ಕೆಜಿಎಫ್-1 ಸಿನಿಮಾ  ಐನಾಕ್ಸ್, ಪಿವಿಆರ್, ಸಿನಿಪೊಲಿಸ್ ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ರೀ ರಿಲೀಸ್ ಆಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-1 ಸಿನಿಮಾ 2018 ಡಿಸೆಂಬರ್ 21ರಂದು ದೇಶ ಮತ್ತು ವಿದೇಶಗಳಲ್ಲಿ ತೆರೆಗೆ ಬಂದಿತ್ತು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ತೆರೆ ಕಂಡಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ಬಾಕ್ಸ್ ಆಫೀಸ್ ನಲ್ಲಿ 250 ಕೋಟಿ ಗೂ ಹೆಚ್ಚು ಗಳಿಕೆ ಕಂಡಿತ್ತು. 

2019ನೇ ಸಾಲಿನ ಅಮೆಜಾನ್ ಪ್ರೈಮ್ ನಲ್ಲೂ ಅತಿ ಹೆಚ್ಚು ಜನರು ವೀಕ್ಷಿಸಿದ ಭಾರತ ಸಿನಿಮಾ ಎಂಬ ಕೀರ್ತಿಗೂ ಪಾತ್ರವಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ 66ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ ಮತ್ತು ಅತ್ಯುತ್ತಮ ಸಾಹಸ ವಿಭಾಗದಲ್ಲಿ ಪ್ರಶಸ್ತಿ ಗಳಿಸಿತ್ತು.

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp