ರೆಡ್ ಡೈಮಂಡ್ ಪ್ರೊಡಕ್ಷನ್ಸ್: 'ಬಿಚ್ಚುಗತ್ತಿ' ನಟ ರಾಜವರ್ಧನ್ ಈಗ ನಿರ್ಮಾಪಕ

'ಬಿಚ್ಚುಗತ್ತಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿರುವ ನಟ ರಾಜವರ್ಧನ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದು, ತಮ್ಮದೇ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

Published: 24th October 2020 01:02 PM  |   Last Updated: 24th October 2020 01:02 PM   |  A+A-


Rajavardan turns producer

ನಟ ರಾಜವರ್ಧನ್

Posted By : Srinivasamurthy VN
Source : The New Indian Express

ಬೆಂಗಳೂರು: 'ಬಿಚ್ಚುಗತ್ತಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿರುವ ನಟ ರಾಜವರ್ಧನ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದು, ತಮ್ಮದೇ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

ರೆಡ್ ಡೈಮಂಡ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯನ್ನು ರಾಜವರ್ಧನ್ ಹುಟ್ಟುಹಾಕಿದ್ದು, ತಮ್ಮ ಮುಂದಿನ ಚಿತ್ರವನ್ನು ಇದೇ ಬ್ಯಾನರ್ ನಡಿಯಲ್ಲಿ ಸೆಟ್ಟೇರಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಜವರ್ಧನ್ ಮಾಹಿತಿ ನೀಡಿದ್ದು, ನನ್ನ ಕನಸು ಇದೀಗ ನನಸಾಗಿದೆ. ನಿಮ್ಮ  ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನೀವು ಸದಾ ನನ್ನ ಬೆನ್ನ ಹಿಂದೆ ಬೆಂಬಲ ನೀಡಿ ಧೈರ್ಯ ತುಂಬಿದ್ದೀರಿ. ನನ್ನ ಈ ಹೊಸ ಸಂಸ್ಥೆಯ ಮೂಲಕ ಹೊಸ ಚಿತ್ರಗಳು ಮೂಡುತ್ತದೆ. ಖಂಡಿತವಾಗಿಯೂ ಶತಾಗತಾಯ ನಿಮ್ಮನ್ನು ಮನರಂಜಿಸುತ್ತೇವೆ. ನಿಮ್ಮ ಎಲ್ಲರ ಆಶೀರ್ವಾದ ಮತ್ತು ಬೆಂಬಲ ಯಾವಾಗಲೂ  ಬೇಕು. ಚಿತ್ರದ ಫಸ್ಟ್ ಲುಕ್ ಮತ್ತು ಅಧಿಕೃತ ಲೋಗೊ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದಾರೆ.

ಮುಂದಿನ ಚಿತ್ರವು ನೈಜ ಕಥೆಯಾಧಾರಿತವಾಗಿರಲಿದ್ದು, ನಿರ್ದೇಶಕ ಕುಮರೇಶ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಪ್ರೀತಿ ಮತ್ತು ರೋಚಕತೆಯ ಅಂಶಗಳನ್ನು ಹೊಂದಿರುವ ಕ್ರಿಯಾ ಆಧಾರಿತ ಕಥಾವಸ್ತುವಾಗಿದೆ. ಈ ಪಾತ್ರಕ್ಕಾಗಿ ನಟ ರಾಜವರ್ಧನ್ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ಆ  ಬದಲಾವಣೆ ಏನು ಎಂಬುದನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ. 

Stay up to date on all the latest ಸಿನಿಮಾ ಸುದ್ದಿ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp