ಎಂ.ಜಿ. ಶ್ರೀನಿವಾಸ್ ನಿರ್ದೇಶನದ 'ಓಲ್ಡ್ ಮಾಂಕ್'‌ನ ತೆಲುಗು ರಿಮೇಕ್ ಮತ್ತು ಡಬ್ಬಿಂಗ್ ಹಕ್ಕು ಮಾರಾಟ

ರೋಮ್ಯಾಂಟಿಂಕ್ ಕಾಮಿಡಿ ಸಿನಿಮಾ ಓಲ್ಡ್ ಮಾಂಕ್ ಶೂಟಿಂಗ್ ಇನ್ನೂ ಪೂರ್ಣವಾಗಿಲ್ಲ, ಈಗಾಗಲೇ ಮತ್ತೊಂದು ಭಾಷೆಯಲ್ಲಿ ರಿಮೇಕ್ ಗೆ ಬೇಡಿಕೆ ಬಂದಿದೆ.
ಶ್ರೀನಿವಾಸ್
ಶ್ರೀನಿವಾಸ್

ಬೆಂಗಳೂರು: ರೋಮ್ಯಾಂಟಿಂಕ್ ಕಾಮಿಡಿ ಸಿನಿಮಾ ಓಲ್ಡ್ ಮಾಂಕ್ ಶೂಟಿಂಗ್ ಇನ್ನೂ ಪೂರ್ಣವಾಗಿಲ್ಲ, ಈಗಾಗಲೇ ಮತ್ತೊಂದು ಭಾಷೆಯಲ್ಲಿ ರಿಮೇಕ್ ಗೆ ಬೇಡಿಕೆ ಬಂದಿದೆ.

ತೆಲುಗು ರಿಮೇಕ್ ಮತ್ತು ಡಬ್ಬಿಂಗ್ ಹಕ್ಕನ್ನು ರವಿ ಕಶ್ಯಪ್ ಖರೀದಿಸಿದ್ದಾರೆ. ಕನ್ನಡದಲ್ಲಿ ಸಿನಿಮಾ ಇನ್ನೂ ರಿಲೀಸ್ ಆಗಬೇಕಾಗಿದೆ. ಓಲ್ಡ್ ಮಾಂಕ್ ಸಿನಿಮಾವನ್ನು ಎಂ ಜಿ ಶ್ರೀನಿವಾಸ್ ನಿರ್ದೇಶಿಸಿ ನಟಿಸಿದ್ದಾರೆ. ಅದಿತಿ ಪ್ರಭುದೇವ ಮತ್ತು ಸುದೇವ್ ನಾಯರ್ ಮತ್ತು ಎಸ್.ನಾರಾಯಣ್, ಸಿಹಿಕಹಿ ಚಂದ್ರು, ಮತ್ತಿತರರು ನಟಿಸಿದ್ದಾರೆ. 

ಈ ಹಿಂದೆ ಬೀರ್ ಬಲ್ ಮತ್ತು ವಜ್ರಮುನಿ ಕೇಸ್ ನಂ 1 ಸಿನಿಮಾದಲ್ಲಿ ಶ್ರೀನಿವಾಸ್ ಕಾಣಿಸಿಕೊಂಡಿದ್ದರು. ಸದ್ಯ ತೆಲುಗಿನ ತಿಮ್ಮರಸು ಮತ್ತು ಓಲ್ಡ್ ಮಾಂಕ್ ಮುಂದಿನ ಸಿನಿಮಾಗಳಾಗಿವೆ. ಶೌರಭ್ -ವೈಭವ್ ಸಂಗೀತ ನೀಡಿದ್ದು, ಭರತ್ ಪರಶುರಾಮ್ ಛಾಯಾಗ್ರಾಹಣವಿದೆ, ರೇಡಿಯೋ ಜಾಕಿಯಾಗಿದ್ದ ಶ್ರೀನಿವಾಸ್ ನಿರ್ದೇಶಕರಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com