'ಭಗವಾನ್ ಶ್ರೀ ಕೃಷ್ಣ ಪರಮಾತ್ಮ'ನಿಗೆ ಜೊತೆಯಾದ ಅದಿತಿ ಪ್ರಭುದೇವ

ಧ್ರುವನ್ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ

Published: 28th October 2020 11:54 AM  |   Last Updated: 28th October 2020 01:10 PM   |  A+A-


Aditi prabhudeva

ಅದಿತಿ ಪ್ರಭುದೇವ

Posted By : Shilpa D
Source : The New Indian Express

ಧ್ರುವನ್ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ.

ಬಿಎನ್ ಪ್ರಸಾದ್ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದ್ದು, ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸರಳವಾಗಿ ಲಾಂಚ್ ಮಾಡಲಾಗಿತ್ತು. ವಿಜಯದಶಮಿಯಂದು ಮೂಹೂರ್ತ ನಡೆದಿದ್ದು ಅದಿತಿ ಪ್ರಭುದೇವ ನಟನೆಯ ಬಗ್ಗೆ ಚಿತ್ರತಂಡ ಸ್ಪಷ್ಟಪಡಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ ಕ್ಲಾಪ್ ಮಾಡಿದ್ದು, ಮೊದಲ ಶಾಟ್ ತೆಗೆಲಾಯಿತು, ಧ್ರುವನ್ ಮೊದಲ ಚಿತ್ರ ಪ್ರೇಮ ಕಥೆಯಿಂದ ಕೂಡಿದ್ದು, ನವೆಂಬರ್ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.

ಭಾರತಿ ಸಿನಿ ಕಂಬೈನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಭರತ್ ವಿಷ್ಣುಕಾಂತ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ ಸಂಗೀತವಿದ್ದು, ಆದ್ವಿಕ್ ಆರ್ಯ ಛಾಯಾಗ್ರಹಣವಿದೆ.

Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp