ಥಿಯೇಟರ್ ಗಳಲ್ಲಿ ಮತ್ತೆ ಕಮಾಲ್ ಮಾಡಲು ಬರುತ್ತಿದೆ ರಂಗಿತರಂಗ: ಅಕ್ಟೋಬರ್ 30 ರಂದು ರಿ ರಿಲೀಸ್

ಅಕ್ಟೋಬರ್ 30 ರಂದು ರಾಜ್ಯಾದ್ಯಂತ 20 ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಆಗಲಿದ್ದು, ನಿರ್ಮಾಪಕ ಎಚ್ ಕೆ ಪ್ರಕಾಶ್ ಅವರ ಪ್ರಯತ್ನದಿಂದ ನವೆಂಬರ್ 1 ರಂದು ರಾಜ್ಯದ ಥಿಯೇಟರ್ ಗಳಲ್ಲಿ ಮತ್ತೆ ರಂಗಿತರಂಗ ನೋಡಬಹುದಾಗಿದೆ.
ರಂಗಿತರಂಗ
ರಂಗಿತರಂಗ

ಅನೂಪ್ ಭಂಡಾರಿ ಚೊಚ್ಚಲ ನಿರ್ದೇಶನದ ರಂಗಿತರಂಗ ಸಿನಿಮಾ ಅಕ್ಟೋಬರ್ 30 ರಂದು ರಿ ರಿಲೀಸ್ ಆಗಲಿದೆ.

ಮಿಸ್ಟ್ರಿ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾದಲ್ಲಿ  ನಿರೂಪ್ ಭಂಡಾರಿ, ಆವಂತಿಕ ಶೆಟ್ಟಿ ಮತ್ತು ರಾಧಿಕಾ ನಾರಾಯಣ್ ಹಾಗೂ ಸಾಯಿಕುಮಾರ್ ನಟಿಸಿದ್ದರು.

ಅಕ್ಟೋಬರ್ 30 ರಂದು ರಾಜ್ಯಾದ್ಯಂತ 20 ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಆಗಲಿದ್ದು, ನಿರ್ಮಾಪಕ ಎಚ್ ಕೆ ಪ್ರಕಾಶ್ ಅವರ ಪ್ರಯತ್ನದಿಂದ ನವೆಂಬರ್ 1 ರಂದು ರಾಜ್ಯದ ಥಿಯೇಟರ್ ಗಳಲ್ಲಿ ಮತ್ತೆ ರಂಗಿತರಂಗ ನೋಡಬಹುದಾಗಿದೆ.

2015 ರಲ್ಲಿ ರಿಲೀಸ್ ಆಗಿದ್ದ ರಂಗಿತರಂಗ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಯಶಸ್ಸು ಕಂಡಿತ್ತು. ಉದಯ ಟಿವಿಗೆ ಸ್ಯಾಟಲೈಟ್ ಹಕ್ಕು ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಿರಲಿಲ್ಲ, ಹಾಗಾಗಿ ಮತ್ತೆ ಬೆಳ್ಳಿತೆರೆಗೆ ಅಪ್ಪಳಿಸಲು ಇದು ಸರಿಯಾದ ಸಮಯ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದರು. ಅನೂಪ್ ಭಂಡಾರಿ ಹಿನ್ನೆಲೆ ಸಂಗೀತ ಮತ್ತು ಸಾಹಿತ್ಯ ಬರೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com