‘ಡಾರ್ಕ್ ಫ್ಯಾಂಟಸಿ’ ಟೀಸರ್ ರಿಲೀಸ್

ಡಾರ್ಕ್ ಫ್ಯಾಂಟಸಿಯ ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಚಿತ್ರತಂಡ ಅನಾವರಣಗೊಳಿಸಿದೆ. ಹಣದ ಸುತ್ತ ನಡೆಯುವ ಕತೆ ಇದಾಗಿದೆ.
ಡಾರ್ಕ್ ಫ್ಯಾಂಟಸಿ
ಡಾರ್ಕ್ ಫ್ಯಾಂಟಸಿ

ಬೆಂಗಳೂರು: ಡಾರ್ಕ್ ಫ್ಯಾಂಟಸಿಯ ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಚಿತ್ರತಂಡ ಅನಾವರಣಗೊಳಿಸಿದೆ. ಹಣದ ಸುತ್ತ ನಡೆಯುವ ಕತೆ ಇದಾಗಿದೆ.

ರಾಘವೇಂದ್ರ ರಾಜ್ ಕುಮಾರ್ ನಟನೆಯ ʻಆಡಿಸಿದಾತʼ ಚಿತ್ರವನ್ನು ನಿರ್ದೇಶಿಸಿದ್ದ ಫಣೀಶ್ ಭಾರಧ್ವಾಜ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಡುಮಾಮಿಡೇಶ್ವರಿ ವೈಶ್ಣೋದೇವಿ ಸಿನಿ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ಸಸ್ಪೆನ್ಸ್, ಥ್ರಿಲ್ಲರ್ ಜಾನರಿನ ಈ ಚಿತ್ರ  ಕೊರೋನಾ ಲಾಕ್ ಡೌನ್ ಗೆ ಮೊದಲೇ ಶೇ 60ರಷ್ಟು ಚಿತ್ರೀಕರಣ ಮುಗಿಸಿತ್ತು. 

ಚಿತ್ರಕ್ಕೆ ನಾಗರಾಜ್.ವಿ, ನಿತಿನ್ ಆರ್.ವಿ ಬಂಡವಾಳ ಹೂಡಿದ್ದು, ತುಳಸಿರಾಮ್ ರಾಜು ಸಂಕಲನ ಮತ್ತು ಆನಂದ ಇಲ್ಲರಾಜ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀ ಮತ್ತು ಖ್ಯಾತ ನಟ ಬಾಲರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com