ಗಾಂಜಾ ಸೇವನೆ ಕಾನೂನುಬದ್ಧವಾದರೆ ಅಪರಾಧ ಪ್ರಮಾಣ ಇಳಿಮುಖವಾಗುತ್ತೆ: ನಟಿ ನಿವೇದಿತಾ

ಡ್ರಗ್ಸ್ ಮಾಫಿಯಾಗೂ ಸ್ಯಾಂಡಲ್ ವುಡ್ ಗೂ ನಂಟಿರುವ ಸುದ್ದಿ ಹೊರಬಂದ ಬಳಿಕ, ಅನೇಕ ನಟ, ನಟಿಯರು ತಮ್ಮದೇ ಆದ ಹೇಳಿಕೆ, ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ನಿವೇದಿತಾ
ನಿವೇದಿತಾ

ಬೆಂಗಳೂರು: ಡ್ರಗ್ಸ್ ಮಾಫಿಯಾಗೂ ಸ್ಯಾಂಡಲ್ ವುಡ್ ಗೂ ನಂಟಿರುವ ಸುದ್ದಿ ಹೊರಬಂದ ಬಳಿಕ, ಅನೇಕ ನಟ, ನಟಿಯರು ತಮ್ಮದೇ ಆದ ಹೇಳಿಕೆ, ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಜಾಲದ ಬಗ್ಗೆ ತನಗೇನೂ ಗೊತ್ತಿಲ್ಲ. ಅವರವರ ಬದುಕು ಅವರ ಕೈಯಲ್ಲೇ ಇರುತ್ತದೆ ಎಂದು ರಚಿತಾ ರಾಮ್ ಹೇಳಿದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ನಟಿ ತಾರಾ ಅನುರಾಧ ಒತ್ತಾಯಿಸಿದ್ದಾರೆ.

ಶಿವವನ್ನು ಪೂಜಿಸುವ ದೇಶದಲ್ಲಿ ಅವನ ಮೆಚ್ಚಿನ ಗಾಂಜಾಗೆ ನಿಷೇಧವೇಕೆ? ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ನಟಿ ನಿವೇದಿತಾ ಗಾಂಜಾ ಸೇವನೆಯನ್ನು ಕಾನೂನುಬದ್ಧಗೊಳಿಸಿದರೆ ದೇಶದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. 

ಗಾಂಜಾ ಸೇವನೆ ನನ್ನ ಅನುಭವಕ್ಕೆ ಬಂದಿಲ್ಲ. ಡ್ರಗ್ಸ್ ಸೇವಿಸಿ ಶೂಟಿಂಗ್ ಗೆ ಬಂದು ಕೆಲಸ ಮಾಡುವುದು ತುಂಬಾ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕೆಲಸ ಮುಗಿದ ನಂತರ ಮಾಡಬಹುದೇನೋ? ನಮ್ಮ ಚಿತ್ರರಂಗದಲ್ಲಿ ಮದ್ಯಪಾನ ಸೇವನೆ ಜಾಸ್ತಿ ಇದೆ. ಅದೇ ರೀತಿ ಕೆಲವರು ಡ್ರಗ್ಸ್ ಮಾಫಿಯಾದಲ್ಲಿ ಇರಬಹುದೇನೋ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com