ಲಾಫಿಂಗ್ ಬುದ್ಧನಾಗಲು ಹೊರಟಿದ್ದಾರೆ ಪ್ರಮೋದ್ ಶೆಟ್ಟಿ

ಲಾಫಿಂಗ್ ಬುದ್ದ ನಗುವಿನ ಸಂಕೇತ, ರಿಷಬ್ ಶೆಟ್ಟಿ ನಾಲ್ಕನೇ ನಿರ್ಮಾಣದ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಪೂರ್ಣ ಪ್ರಮಾಣದಲ್ಲಿ ನಾಯಕನಾಗಲಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಭರತ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.

Published: 01st September 2020 12:16 PM  |   Last Updated: 01st September 2020 12:16 PM   |  A+A-


pramod shetty

ಪ್ರಮೋದ್ ಶೆಟ್ಟಿ

Posted By : Shilpa D
Source : The New Indian Express

ಲಾಫಿಂಗ್ ಬುದ್ದ ನಗುವಿನ ಸಂಕೇತ, ರಿಷಬ್ ಶೆಟ್ಟಿ ನಾಲ್ಕನೇ ನಿರ್ಮಾಣದ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಪೂರ್ಣ ಪ್ರಮಾಣದಲ್ಲಿ ನಾಯಕನಾಗಲಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಭರತ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.

ರಕ್ಷಿತ್‌ ಶೆಟ್ಟಿ ಮತ್ತು ರಿಷಬ್‌ ಶೆಟ್ಟಿಯವರ ಯಾವುದೇ ಸಿನಿಮಾ ಮಾಡಿದರೂ ಅದರಲ್ಲಿ ಪ್ರಮೋದ್‌ ಇದ್ದೇ ಇರುತ್ತಿದ್ದರು. ಈಗ ಅವರು ನಾಯಕರಾಗಿ ನಟಿಸುತ್ತಿರುವ ಮೊದಲ ಸಿನಿಮಾವನ್ನು ಗೆಳೆಯ ರಿಷಬ್‌ ಶೆಟ್ಟಿಯವರೇ ನಿರ್ಮಾಣ ಮಾಡುತ್ತಿದ್ದಾರೆ. 'ಲಾಫಿಂಗ್‌ ಬುದ್ಧ' ಶೀರ್ಷಿಕೆಯ ಈ ಚಿತ್ರಕ್ಕೆ ಭರತ್‌ ರಾಜ್‌ ನಿರ್ದೇಶಕರು. ಇದು ಅವರ ನಿರ್ದೇಶನದ ಮೊದಲ ಚಿತ್ರ.

'ನಾನು ಕಥೆ ಬರೆಯುವಾಗಲೇ ಅವರನ್ನು ತಲೆಯಲ್ಲಿ ಇಟ್ಟುಕೊಂಡು ಕಥೆ ಬರೆದಿದ್ದೆ. ಒಬ್ಬ ತೂಕದ ಪೊಲೀಸ್‌ ಕಾನ್‌ಸ್ಟೇಬಲ್‌ ವ್ಯಕ್ತಿಯ ಜೀವನದಲ್ಲಿ ನಡೆಯುವ ಕಥೆ ಮತ್ತು ಅದರ ತಿರುವುಗಳನ್ನು ಇಲ್ಲಿ ತೋರಿಸುತ್ತೇವೆ. ಕಾಮಿಡಿ ಜತೆಗೆ ಭಾವನಾತ್ಮಕ ಕಂಟೆಂಟ್‌ ಅನ್ನು ಸಿನಿಮಾದಲ್ಲಿ ತೋರಿಸಲಿದ್ದೇವೆ' ಎಂದು ಹೇಳುತ್ತಾರೆ ನಿರ್ದೇಶಕ ಭರತ್‌ ರಾಜ್‌.

'ಭರತ್‌ ನನ್ನ ಜತೆ ಸರ್ಕಾರಿ ಶಾಲೆ ಸಿನಿಮಾಗೆ ಕೆಲಸ ಮಾಡಿದ್ದರು. ಒಳ್ಳೊಳ್ಳೆ ಲೈನ್‌ಗಳನ್ನು ಹೇಳುತ್ತಿದ್ದರು. ಆಗ ಈ 'ಲಾಫಿಂಗ್‌ ಬುದ್ಧ' ಕಥೆಯನ್ನು ಹೇಳಿದಾಗ ತುಂಬಾ ಇಂಟ್ರಸ್ಟಿಂಗ್‌ ಲೈನ್‌ ಎನಿಸಿತು. ಪ್ರಮೋದ್‌ ಮತ್ತು ನಾನು ಕಾಲೇಜು ದಿನಗಳಿಂದಲೂ ಒಟ್ಟಿಗೆ ಇದ್ದವರು. ನಾಟಕಗಳಲ್ಲಿ ಕೆಲಸ ಮಾಡಿದ್ದೇವೆ. ಹಾಗಂತ ಈ ಸಿನಿಮಾವನ್ನು ಸುಮ್ಮನೆ ಮಾಡುತ್ತಿಲ್ಲ. ನಿರ್ದೇಶಕರು ಪ್ರಮೋದ್‌ ಅವರು ಈ ಪಾತ್ರಕ್ಕೆ ಸೂಕ್ತರಾಗುತ್ತಾರೆ ಎಂಬ ಕಾರಣಕ್ಕೆ ಅವರನ್ನೇ ನಾಯಕರನ್ನಾಗಿಸಿದ್ದೇವೆ. ನನ್ನ ಜತೆ ವಿಕಾಸ್‌ ಮತ್ತು ಶ್ರೀಕಾಂತ್‌ ಸಹ ಚಿತ್ರದಲ್ಲಿ ಪಾಲುದಾರರಾಗಿದ್ದಾರೆ' ಎನ್ನುತ್ತಾರೆ ರಿಷಭ್‌ ಶೆಟ್ಟಿ.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp