'777 ಚಾರ್ಲಿ' ಚಿತ್ರದ ಶೂಟಿಂಗ್ ಗೆ ಸಿದ್ದರಾಗಿರುವ ನಿರ್ದೇಶಕ ಕಿರಣ್ ರಾಜ್

ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನೆಮಾವನ್ನು ಕಿರಣ್ ರಾಜ್ ಕೆ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಲ್ಯಾಬ್ರಡಾರ್ ನಾಯಿ ಕೂಡ ಒಂದು ಪ್ರಮುಖ ಪಾತ್ರ, ಹೀಗಾಗಿ ನಿರ್ದೇಶಕರು ಮತ್ತು ನಟ ರಕ್ಷಿತ್ ಶೆಟ್ಟಿ ಲ್ಯಾಬ್ರಡಾರ್ ನಾಯಿಯ ಜೊತೆಗೆ ಸದ್ಯ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ.
777 ಚಾರ್ಲಿ ಚಿತ್ರದ ದೃಶ್ಯ, ನಿರ್ದೇಶಕ ಕಿರಣ್ ರಾಜ್

ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರದ ಶೂಟಿಂಗ್ ಪುನರಾರಂಭವಾಗಲಿದ್ದು ಕಥೆ ಸಿದ್ದವಾಗಿದೆ, ಕಲಾವಿದರ ರಿಹರ್ಸಲ್ ನಲ್ಲಿ ಬ್ಯುಸಿಯಾಗಿದ್ದೇವೆ ಎಂದು ನಿರ್ದೇಶಕ ಕಿರಣ್ ರಾಜ್ ಹೇಳುತ್ತಾರೆ.ಕೊರೋನಾ ಸಂದರ್ಭದಲ್ಲಿ ಸರ್ಕಾರದ ನಿಯಮವನ್ನು ಪಾಲಿಸಿಕೊಂಡು ಚಿತ್ರತಂಡ ಬೆಂಗಳೂರಿನಲ್ಲಿ ಒಳಾಂಗಣ ಶೂಟಿಂಗ್ ಪ್ರಾರಂಭಿಸಲಿದೆ.ನೆಲಮಂಗಲ ಹತ್ತಿರ ಸೆಟ್ ಹಾಕಲಾಗುತ್ತದೆ.

ಇನ್ನು 30 ದಿನದ ಶೂಟಿಂಗ್ ಬಾಕಿಯಿದೆ. ಬೆಂಗಳೂರಿನಲ್ಲಿ 6 ದಿನ, ಕೊಡೈಕನಾಲ್ ನಲ್ಲಿ ಕೆಲವು ಭಾಗ, ನಂತರ ಚಂಡೀಘಡ, ಹಿಮಾಚಲ ಪ್ರದೇಶ, ಕಾಶ್ಮೀರಗಳಲ್ಲಿ ಸಹ ಶೂಟಿಂಗ್ ನಡೆಯಲಿದೆ. ಕೊರೋನಾದಿಂದಾಗಿ ಶೂಟಿಂಗ್ ವಿಳಂಬವಾಗಿ ಚಿತ್ರಕ್ಕೆ ತೊಂದರೆಯಾಗಿದೆ ನಿಜ. ಆದರೆ ಚಿತ್ರಕ್ಕೆ ಬೇಕಾಗಿ ನಾವು ಸೂಕ್ತ ಹವಾಮಾನಕ್ಕಾಗಿ ಕೂಡ ಕಾಯಬೇಕಾಗಿದೆ. ನವೆಂಬರ್ ನಲ್ಲಿ ಮಂಜಿನ ಹನಿಗಾಗಿ ಉತ್ತರ ಭಾರತಕ್ಕೆ ಹೋಗಲಿದ್ದು ನಮ್ಮ ಕಥೆಗೆ ಅಲ್ಲಿ ಸೂಕ್ತ ವಾತಾವರಣ ಸಿಗಲಿದೆ. ಡಿಸೆಂಬರ್ ಹೊತ್ತಿಗೆ ಶೂಟಿಂಗ್ ಮುಗಿಸುವ ಯೋಜನೆಯಿದೆ ಎಂದು ನಿರ್ದೇಶಕ ಕಿರಣ್ ರಾಜ್ ಹೇಳುತ್ತಾರೆ. ಚಿತ್ರದ ಮೊದಲಾರ್ಧದ ಡಬ್ಬಿಂಗ್, ರೆಕಾರ್ಡಿಂಗ್, ಸೌಂಡ್ ಎಫೆಕ್ಟ್ ಎಲ್ಲವೂ ಮುಗಿದಿದೆಯಂತೆ.

777 ಚಾರ್ಲಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯವರದ್ದು ಧರ್ಮ ಪಾತ್ರ. ಸಂಗೀತ ಶೃಂಗೇರಿ ಮತ್ತು ರಾಜ್ ಬಿ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಪುಷ್ಕರ್ ಫಿಲ್ಮ್ಸ್ ಜೊತೆಗೆ ರಕ್ಷಿತ್ ಶೆಟ್ಟಿ ಮತ್ತು ಜಿ ಎಸ್ ಗುಪ್ತಾ ಬಂಡವಾಳ ಹಾಕುತ್ತಿದ್ದಾರೆ. ನೊಬಿನ್ ಪೌಲ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮತ್ತು ಪ್ರತೀಕ್ ಶೆಟ್ಟಿ ಸಂಕಲನವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com