ಲಂಕೇಶನಾಗಿ ಆದಿಪುರುಷನ ಅಂಗಳಕ್ಕೆ ಎಂಟ್ರಿ ನೀಡಲಿದ್ದಾರೆ ಸೈಫ್!

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಆದಿಪುರುಷ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Published: 03rd September 2020 01:09 PM  |   Last Updated: 03rd September 2020 02:17 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಆದಿಪುರುಷ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಪ್ರಭಾತ್ ಪಾತ್ರಕ್ಕೆ ಎದುರಾಳಿಯಾಗಿರುವ ಈ ಪಾತ್ರದ ಹೆಸರು ಲಂಕೇಶ್. ಈ ಹಿಂದೆ ಓಂ ರಾವತ್ ನಿರ್ದೇಶನದ ತಾನಾಜೀ ಸಿನಿಮಾದಲ್ಲಿಯೂ ಸೈಫ್ ಖಳನಟನಾಗಿ ನಟಿಸಿದ್ದರು. 

ಕೆಲ ದಿನಗಳಿಂದಲೂ ಆದಿಪುರುಷ್ ಸಿನಿಮಾದಲ್ಲಿ ಸೈಫ್ ಖಳನಾಯಕನಾಗಿ ನಟಿಸುತ್ತಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಈ ಬಗ್ಗೆ ಚಿತ್ರ ತಂಡ ಯಾವುದೇ ಸ್ಪಷ್ಟನೆಗಳನ್ನು ನೀಡಿರಲಿಲ್ಲ. ಇದೀಗ ಓಂ ರಾವತ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ವೊಂದರನ್ನು ಹಂಚಿಕೊಂಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಓಂ ರಾವತ್ ಅವರು ಆದಿಪುರುಷ್ ಚಿತ್ರದ ಪೋಸ್ಟರ್ ನ್ನು ಹಂಚಿಕೊಂಡಿದ್ದು, ಪೋಸ್ಟರ್ ನಲ್ಲಿ ಸೈಫ್ ಅಲಿಖಾನ್ ಲಂಕೇಶನಾಗಿ ನಟಿಸುತ್ತಿದ್ದಾರೆಂಬ ಮಾಹಿತಿ ನೀಡಿತಿ ನೀಡಿದ್ದಾರೆ. 

7000 ವರ್ಷಗಳ ಹಿಂದೆ ವಿಶ್ವತ ಅತ್ಯಂತ ಬುದ್ಧಿವಂತ ರಾಕ್ಷಸ ಅಸ್ವಿತ್ವದಲ್ಲಿದ್ದ! #ಆದಿಪುರುಷ್' ಎಂದು ಟ್ವಿಟರ್ ನಲ್ಲಿ ಓಂ ರಾವತ್ ಅವರು ಬರೆದುಕೊಂಡಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp