'ರಾಬರ್ಟ್'ನಾಯಕಿ ಆಶಾ ಭಟ್ ಹುಟ್ಟುಹಬ್ಬ:ಫಸ್ಟ್ ಲುಕ್ ಬಿಡುಗಡೆ ಮಾಡಿದ ಚಿತ್ರತಂಡ

ದರ್ಶನ್ ಅವರ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಅವರ ಲುಕ್ ಬಿಡುಗಡೆಯಾಗಿದೆ. ಇಂದು ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದೆ.

Published: 05th September 2020 10:31 AM  |   Last Updated: 05th September 2020 10:42 AM   |  A+A-


Asha Bhat and Darshan

ಆಶಾ ಭಟ್, ದರ್ಶನ್

Posted By : sumana
Source : The New Indian Express

ದರ್ಶನ್ ಅವರ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಅವರ ಲುಕ್ ಬಿಡುಗಡೆಯಾಗಿದೆ. ಇಂದು ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದೆ.

ಮಾಡೆಲ್ ಆಗಿ ನಂತರ ಚಿತ್ರದ ನಾಯಕಿಯಾಗಿ ಹಿಂದಿಯ ಜಂಗ್ಲಿ ಮೂಲಕ ಪಾದಾರ್ಪಣೆ ಮಾಡಿದ ಆಶಾ ಭಟ್ ರಾಬರ್ಟ್ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

ವಿದೇಶದಿಂದ ಬಂದ ಹುಡುಗಿ ಅಮೃತ ಪಾತ್ರದಲ್ಲಿ ಆಶಾ ಭಟ್ ರಾಬರ್ಟ್ ನಲ್ಲಿ ನಟಿಸುತ್ತಿದ್ದಾರಂತೆ. ಮೂಲತಃ ಶಿವಮೊಗ್ಗದವರಾದ ಆಶಾ ಭಟ್ ಪ್ರಸ್ತುತ ಕಾರ್ಯನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದಾರೆ.

ಕಳೆದ ವರ್ಷ ನನ್ನ ಹುಟ್ಟುಹಬ್ಬದ ಸಮಯದಲ್ಲಿ ಚಿತ್ರದ ಶೂಟಿಂಗ್ ಆರಂಭವಾಯಿತು. ಚಿತ್ರಕ್ಕೆ ಸಾಕಷ್ಟು ಜನರು ಕಾಯುತ್ತಿದ್ದಾರೆ, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವುದು ಖುಷಿ ತರುತ್ತಿದೆ. ಇಂದು ನನ್ನ ಹುಟ್ಟುಹಬ್ಬಕ್ಕೆ ಚಿತ್ರತಂಡ ಈ ರೀತಿ ಗಿಫ್ಟ್ ನೀಡುತ್ತಿರುವುದು ನನಗೆ ಸಹಜವಾಗಿಯೇ ಖುಷಿ, ಹೆಮ್ಮೆ ತಂದಿದೆ. ನಾನು ಉತ್ತಮ ತಂಡದೊಂದಿಗೆ ಕೆಲಸ ಮಾಡಿದ್ದೇನೆ ಎನ್ನುತ್ತಾರೆ.

ಕೋವಿಡ್ ನಂತರ ಪೂರ್ಣ ಪ್ರಮಾಣದಲ್ಲಿ ಚಿತ್ರೋದ್ಯಮ ಚಟುವಟಿಕೆಗಳು ಆರಂಭವಾಗಬೇಕೆಂದು ಕಾಯುತ್ತಿರುವ ಆಶಾ ಭಟ್ ಸದ್ಯ ಬೇರೆ ಕಥೆಗಳನ್ನು, ವೆಬ್ ಸಿರೀಸ್ ಕೇಳುವುದಲ್ಲಿ, ಆಯ್ಕೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಕನ್ನಡದಲ್ಲಿ ಚಿತ್ರಗಳ ಶೂಟಿಂಗ್ ಆರಂಭವಾಗಿದೆಯಾದರೂ ಇನ್ನೂ ಮುಂಬೈಯಲ್ಲಿ ಬಾಲಿವುಡ್ ನಲ್ಲಿ ಆರಂಭವಾಗಿಲ್ಲ. ಈ ಸಮಯದಲ್ಲಿ ಸಾಕಷ್ಟು ನಿರ್ದೇಶಕರು, ಸಂಭಾಷಣೆಕಾರರು, ಕಥೆಗಾರರು ಬರವಣಿಗೆಯಲ್ಲಿ ನಿರತರಾಗಿದ್ದರು. ನಾನು ಸಾಕಷ್ಟು ಕಥೆ ಕೇಳಿದ್ದೇನೆ, ಆದರೆ ಯಾವುದೂ ಅಂತಿಮವಾಗಿಲ್ಲ ಎಂದರು. ಆನ್ ಲೈನ್ ನಲ್ಲಿ ಆಕ್ಟಿಂಗ್ ತರಗತಿಯನ್ನು ಸಹ ಆಶಾ ಭಟ್ ತೊಡಗಿಸಿಕೊಂಡಿದ್ದಾರಂತೆ.

ಉಮಾಪತಿ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ರಾಬರ್ಟ್ ನಲ್ಲಿ ಜಗಪತಿ ಬಾಬು, ದೇವರಾಜ್, ವಿನೋದ್ ಪ್ರಭಾಕರ್, ಸೋನಲ್ ಮೊಂಟೆರೊ, ರವಿ ಕಿಶನ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ ಮೊದಲಾದವರು ಅಭಿನಯಿಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp