ರಾಬರ್ಟ್ ಚಿತ್ರದ ಬಗ್ಗೆ ಅಭಿಮಾನಿಗಳ ಕಾತುರ ನೋಡಿ ಸಂತೋಷವಾಗುತ್ತಿದೆ- ಆಶಾ ಭಟ್ 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ಹಿರೋಯಿನ್ನ್ನು ಕುತೂಹಲಕಾರಿಯಾಗಿ ಚಿತ್ರ ತಂಡ ಪರಿಚಯಿಸಿದೆ. ಆಶಾ ಭಟ್ ಈ ಚಿತ್ರದ ಹಿರೋಯಿನ್ ಆಗಿದ್ದು, ಇಂದು ಆಕೆಯ ಹುಟ್ಟುಹಬ್ಬ ಜೊತೆಗೆ  ಆಕೆಯ ಫಸ್ಟ್ ಲುಕ್ ಬಿಡುಗಡೆಯಾಗಿದೆ.

Published: 05th September 2020 11:05 AM  |   Last Updated: 05th September 2020 12:15 PM   |  A+A-


Robert_hero_heroien1

ದರ್ಶನ್, ಆಶಾ ಭಟ್

Posted By : Nagaraja AB
Source : The New Indian Express

ಬೆಂಗಳೂರು:ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ಹಿರೋಯಿನ್ನ್ನು ಕುತೂಹಲಕಾರಿಯಾಗಿ ಚಿತ್ರ ತಂಡ ಪರಿಚಯಿಸಿದೆ. ಆಶಾ ಭಟ್ ಈ ಚಿತ್ರದ ಹಿರೋಯಿನ್ ಆಗಿದ್ದು, ಇಂದು ಆಕೆಯ ಹುಟ್ಟುಹಬ್ಬ ಜೊತೆಗೆ ಆಕೆಯ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಜಂಗ್ಲಿ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ವೃತ್ತಿ ಜೀವನ ಆರಂಭಿಸಿರುವ ಮಾಡೆಲ್, ಹಿರೋಯಿನ್ ಆಗಿರುವ ಆಶಾ ಭಟ್ , ರಾಬರ್ಟ್ 
ಚಿತ್ರದ ಮೂಲಕ ಚೊಚ್ಚಲ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದರ್ಶನ್ ಜೊತೆಗೆ ನಾಯಕಿಯಾಗಿ ಈ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ವಿದೇಶದ ಬರುವ ಅಮೂರ್ತ ಪಾತ್ರದಲ್ಲಿ ಆಶಾ ಭಟ್ ಕಾಣಿಸಿಕೊಳ್ಳಲಿದ್ದು, ಸಂಸ್ಕೃತಿ ಘರ್ಷಣೆಯನ್ನು ನೋಡಬಹುದಾಗಿದೆ ಎಂದು ನಿರ್ದೇಶಕ ತರುಣ್ ಕಿಶೋರ್ ಹೇಳಿದ್ದಾರೆ.

ಮೂಲತ: ಶಿವಮೊಗ್ಗದ ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ,ಚಿತ್ರತಂಡದಿಂದ ಕುತೂಹಲಕಾರಿಯಾಗಿ ತಮ್ಮನ್ನು ಸೇರಿಸಿಕೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕನ್ನಡ ಚಿತ್ರೋದ್ಯಮದಲ್ಲಿ ಅಷ್ಟಾಗಿ ಯಾರೂ ಗೊತ್ತಿಲ್ಲ, ದರ್ಶನ್ ಅಭಿಮಾನಿಗಳಲ್ಲಿ ಈ ಚಿತ್ರ ಸೃಷ್ಟಿಸಿರುವ ಕ್ರೇಜ್ ಥ್ರೀಲ್ ಉಂಟು ಮಾಡಿದೆ.ಒಳ್ಳೆಯ  ತಂಡದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಆಶಾ ಭಟ್ ಹೇಳಿದ್ದಾರೆ.

ದರ್ಶನ್, ಆಶಾ ಭಟ್ ಹೊರತುಪಡಿಸಿದಂತೆ ಜಗಪತಿಬಾಬು ಪ್ರಮುಖ ಖಳನಟನಾಗಿ ಚಿತ್ರದಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ದೇವರಾಜ್, ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೋ, ರವಿ ಕಿಶನ್, ಚಿಕ್ಕಣ್ಣ, ಕೆ,ಆರ್. ಪೇಟೆ ಶಿವರಾಜ್ ಮತ್ತಿತರರ ತಾರಾಗಣವಿದೆ.

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ  ಕೆಳೆದ ಕೆಲವು ದಿನಗಳಿಂದಲೂ ಮನೆಯಲ್ಲಿ ಪುಸ್ತಕ ಓದುವುದು, ಸಿನಿಮಾ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿರುವ ಆಶಾ ಭಟ್, ಎಲ್ಲಾ ಗಮನವನ್ನು ರಾಬರ್ಟ್ ಚಿತ್ರದ ಕಡೆ ಹರಿಸಿದ್ದೇನೆ.ಮುಂದಿನ ಚಿತ್ರಗಳ ಬಗ್ಗೆ ಮಾತನಾಡಲು ಕೆಲ ಕಾಲ ಕಾಯಬೇಕಾಗುತ್ತದೆ ಎಂದು ಆಶಾ ಭಟ್ ತಿಳಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp