ಕಿರುಚಿತ್ರ ಜಗತ್ತಿನಲ್ಲಿ ಕನ್ನಡಿಗನ ಹೊಸ ಹೆಜ್ಜೆ: ಮಿಸೆಸ್ ನಂಬಿಯಾರ್ - ಮೋರ್ ದೆನ್ ‘ಜಸ್ಟ್’ಅ ಟೀಚರ್"

ನಿರ್ದೇಶಕ ಪ್ರತೀಕ್ ಪ್ರಜೋಶ್ ಅವರ "ಚಿತ್ರ ಮಿಸೆಸ್ ನಂಬಿಯಾರ್ - ಮೋರ್ ದೆನ್‘ಜಸ್ಟ್’ ಅ ಟೀಚರ್" ಕಿರುಚಿತ್ರವು  ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆಯಾಗಿ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಕಾಣುತ್ತಿದೆ. 25 ನಿಮಿಷಗಳ ಈ ಕಿರುಚಿತ್ರ ಒಟಿಟಿ ವೇದಿಕೆಯಾದ Cinemapreneurನಲ್ಲಿ ತೆರೆ ಕಂಡಿದೆ.
ಕಿರುಚಿತ್ರ ಜಗತ್ತಿನಲ್ಲಿ ಕನ್ನಡಿಗನ ಹೊಸ ಹೆಜ್ಜೆ: ಮಿಸೆಸ್ ನಂಬಿಯಾರ್ - ಮೋರ್ ದೆನ್ ‘ಜಸ್ಟ್’ಅ ಟೀಚರ್"

ನಿರ್ದೇಶಕ ಪ್ರತೀಕ್ ಪ್ರಜೋಶ್ ಅವರ "ಚಿತ್ರ ಮಿಸೆಸ್ ನಂಬಿಯಾರ್ - ಮೋರ್ ದೆನ್‘ಜಸ್ಟ್’ ಅ ಟೀಚರ್" ಕಿರುಚಿತ್ರವು  ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆಯಾಗಿ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಕಾಣುತ್ತಿದೆ. 25 ನಿಮಿಷಗಳ ಈ ಕಿರುಚಿತ್ರ ಒಟಿಟಿ ವೇದಿಕೆಯಾದ Cinemapreneurನಲ್ಲಿ ತೆರೆ ಕಂಡಿದೆ.

ಬೆಂಗಳೂರು ಮೂಲದ ಮತ್ತು ಪ್ರಸ್ತುತ ಮುಂಬೈನಲ್ಲಿ ವಾಸಿಸುತ್ತಿರುವ ಪ್ರಜೋಶ್ ಅವರಿಗೆ ನಂಬಿಯಾರ್ ಅವರ ಪಾತ್ರ ಆಸಕ್ತಿ ಹುಟ್ಟಿಸಿದೆ. ಏಕೆಂದರೆ ಅವರು ತಮ್ಮ ಕಾಲಕ್ಕಿಂತ ಹೆಚ್ಚಿನದನ್ನು ಯೋಚಿಸುತ್ತಿದ್ದರು. "ಆಕೆ ಯಾವಾಗಲೂ ಸಾಂಪ್ರದಾಯಿಕ ಮಾರ್ಗವನ್ನು ಮುರಿದು ಹೊಸ ದಾರಿ ಹುಡುಕುವವವ್ರು. ಅವರು 1925 ರಲ್ಲಿ ಜನಿಸಿದರು, ಆ ಸಮಯದಲ್ಲಿ ಹೆಣ್ಣು ಮಕ್ಕಳ್ಲಿಗೆ ಗೆ ಶಿಕ್ಷಣವು ಆದ್ಯತೆಯಾಗಿರಲಿಲ್ಲ ಅಥವಾ ಅಪ್ರಸ್ತುತವಾಗಿತ್ತು. ಆದರೆ ಅವರು ಕೇವಲ ಶಿಕ್ಷಣದ ಮಹತ್ವವನ್ನು ಅರ್ಥಮಾಡಿಕೊಂಡಿಲ್ಲ, ಬದಲಿಗೆ ನರು ಅದರ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವಂತೆ ಮಾಡಿದ್ದರು. ರೆ ”ಎಂದು ಪ್ರಜೋಶ್ ಹೇಳುತ್ತಾರೆ, ಕಳೆದ 70 ವರ್ಷಗಳಲ್ಲಿ ತಾನು ಸಾವಿರಾರು ವಿದ್ಯಾರ್ಥಿಗಳನ್ನು ಕಂಡಿದ್ದೇನೆ.  ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ. ಆದರೆ ಕ್ಯಾಲಿಕಟ್ ನಲ್ಲಿ ವಾಸಿಸುವ 95 ವರ್ಷದ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತ ಶಿಕ್ಷಕನೊಂದಿಗೆ ಅವರು ದೂರದ ಸಂಬಂಧ ಹೊಂದಿದ್ದರಿಂದ ಈ ಕಥೆಯು ಅವರಿಗೆ ವಿಶೇಷ ಎಂದೆನಿಸಿದೆ.

"ನಾನು ಅವರೊಂದಿಗೆ ವೈಯಕ್ತಿಕ ಸಂಪರ್ಕವನ್ನು ಸಾಧಿಸಿದ್ದರಿಂದ ಅದರ ಭಾವನಾತ್ಮಕ ಕಥೆಯನ್ನು ಚಿತ್ರವಾಗಿಸುವಲ್ಲಿ ನನಗೆ ಸುಲಭವಾಗಿದೆ. ಆಕೆ  ರಿಕ್ಷಾ ಅಥವಾ ಕ್ಯಾಬ್ ಸವಾರಿ ಮಾಡುವಾಗಲೆಲ್ಲಾ, ಚಾಲಕ ಅವರ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿರುತ್ತಿದ್ದ. ಅವರು ಆಕೆಯಿಂಡ ಬಾಡಿಗೆ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಆದರೆ ಅವರೆಂದೂ ಇದರ ಲಾಭ ಪಡೆದುಕೊಳ್ಳಲಿಲ್ಲ."ನನಗೆ ಅವರ ಪರಿಚಯವಾಗದಿದ್ದರೆ ಈ ಕಥೆ ನನ್ನಿಂದ ಮೂಡಿಬರುವ್ದು ಸಾಧ್ಯವಿರಲಿಲ್ಲ." ಎಂದು ಪ್ರಜೋಶ್ ಹೇಳುತ್ತಾರೆ, ಲಾಕ್‌ಡೌನ್‌ಗೆ ಮುಂಚಿತವಾಗಿ ಇಡೀ ಚಲನಚಿತ್ರವನ್ನು "ಅದೃಷ್ಟವಶಾತ್" ಚಿತ್ರೀಕರಿಸಲಾಗಿದೆ ಮತ್ತು  ಬೆಂಗಳೂರಿನಲ್ಲಿ ಇದರ ಎಡಿಟಿಂಗ್ ನಡೆದಿತ್ತು. 

2015 ರಲ್ಲಿ ಸ್ವತಂತ್ರ ಚಲನಚಿತ್ರ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಪ್ರಜೋಶ್, ತಮ್ಮ ಮೊದಲ ಚಲನಚಿತ್ರವಾದ "ಓನ್ಲಿ ಸಂಟೈಮ್ಸ್ ಅ ಗಾಡ್" ಆಗಿದ್ದು ಇದು ಥೇಯಂ ಸಾಂಪ್ರದಾಯಿಕ ಧಾರ್ಮಿಕ ಕಲಾ ಪ್ರಕಾರವನ್ನು ಆಧರಿಸಿದೆ, 

ಸ್ವತಂತ್ರ ನಿರ್ದೇಶಕರ ಸಮಸ್ಯೆ ಬಗ್ಗೆ ಮಾತನಾಡಿದ  ಪ್ರಜೋಶ್, ಹಣಕಾಸಿನ ನೆರವಿಗಿಂತ  ಹೆಚ್ಚಾಗಿ, ಅವರಿಗೆ ಮೀಸಲಾಗಿರುವ ವೇದಿಕೆ ಅವರಿಗಿಲ್ಲ. “ಒಟಿಟಿ ಪ್ಲಾಟ್‌ಫಾರ್ಮ್‌ಗಳ ಹಿಂದಿನ ಮುಖ್ಯ ಕಾರಣವೆಂದರೆ ಈ ರೀತಿಯ ಚಲನಚಿತ್ರಗಳನ್ನು ಹೆಚ್ಚಿಸುವುದು, ಅವುಗಳು ಸ್ಟಾರ್  ಗಳನ್ನು ನೆಚ್ಚಿಕೊಳ್ಳುವುದುಇಲ್ಲ.  ಅಸಾಂಪ್ರದಾಯಿಕ ವಿಷಯವನ್ನು ಹೊಂದಿರುತ್ತದೆ. ಇದರಿಂದಾಗಿ ಉತ್ತಮ ವಿಷಯ ಎಂದೂ ನಷ್ಟವಾಗುವುದಿಲ್ಲ" ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com