ದೊಡ್ಡ ರಾಜಕಾರಣಿಗಳ ಸಖ್ಯವಿರುವುದಾಗಿ ಹೇಳಿ ದಾಳಿ ವೇಳೆ ಸಂಜನಾರಿಂದ ಸಿಸಿಬಿ ಪೊಲೀಸರಿಗೆ ಬೆದರಿಕೆ

ಮಂಗಳವಾರ ಬೆಳಗ್ಗೆ ಸಿಸಿಬಿ ಪೊಲೀಸರ ತಂಡ ನಟಿ ಸಂಜನಾ ಮನೆಯನ್ನು ರೇಡ್ ಮಾಡುವ ವೇಳೆ ಆಕೆ  ಪೊಲೀಸರ ಬಳಿ ಕೆಲವು ದೊಡ್ಡ ರಾಜಕಾರಣಿಗಳ ಹೆಸರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ
ಸಂಜನಾ
ಸಂಜನಾ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರನ್ನು  5 ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ತೆಗೆದುಕೊಳ್ಳುವಂತೆ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ  ಆದೇಶ ನೀಡಿದೆ.

ಮಂಗಳವಾರ ಬೆಳಗ್ಗೆ ಸಿಸಿಬಿ ಪೊಲೀಸರ ತಂಡ ನಟಿ ಸಂಜನಾ ಮನೆಯನ್ನು ರೇಡ್ ಮಾಡುವ ವೇಳೆ ಆಕೆ  ಪೊಲೀಸರ ಬಳಿ ಕೆಲವು ದೊಡ್ಡ ರಾಜಕಾರಣಿಗಳ ಹೆಸರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಸಂಜನಾರ ಇಂದಿರಾನಗರದ ಮನೆಗೆ ತೆರಳಿದ ಸಿಸಿಬಿ ಪೊಲೀಸರ ಮುಂದೆ ಏಕೆ ಬಂದಿದ್ದೀರಿ, ನಾನು ತಪ್ಪು ಮಾಡಿಲ್ಲ ಎಂದು ರಂಪಾಟ ಮಾಡಿದ್ದಾರೆ, ನಂತರ ಸೆರ್ಚ್ ವಾರೆಂಟ್ ತೋರಿಸಿದ ಮೇಲೆ ಮನೆಯನ್ನು ಶೋಧ ಮಾಡಲು ಸಂಜನಾ ಅವಕಾಶ ನೀಡಿದ್ದಾರೆ..

ನನ್ನನ್ನು ಈ ಕೇಸ್ ನಲ್ಲಿ ಟಾರ್ಗೆಟ್ ಮಾಡಲಾಗಿದೆ, ನನಗೆ ಬಹಳ ರಾಜಕಾರಣಿಗಳು ಗೊತ್ತು,  ಅವರ ಜೊತೆ ನನಗೆ ತುಂಬಾ ಆಪ್ತತೆಯಿದೆ ಎಂದು ಹೇಳಿಕೊಳ್ಳುವ ಮೂಲಕ ನಮಗೆ ಬೆದರಿಕೆ ಹಾಕಲು ಪ್ರಯತ್ನಿಸಿದರು, ಆದರೆ ಅದ್ಯಾವುದಕ್ಕೂ ಕೇರ್ ಮಾಡದೇ ನಾವು ನಮ್ಮ ಕರ್ತವ್ಯ ನಿರ್ವಹಿಸಿದೆವು ಎಂದು ಮೂಲಗಳು ತಿಳಿಸಿವೆ.

ನಾವು ಆಕೆಯ ಮನೆಯನ್ನು ಶೋಧ ಮಾಡುವಾಗ ಸಂಜನಾ ತಮ್ಮ ವಕೀಲರನ್ನು ಸಂಪರ್ಕಿಸಿದರು, ನಮ್ಮ ಕೆಲಸ ಮುಗಿದ ಮೇಲೆ ಆಕೆಯನ್ನು ನಾವು ಸಿಸಿಬಿ ಮುಖ್ಯ ಕಚೇರಿಗೆ ಕರೆದುಕೊಂಡು ಹೋದೆವು ಎಂದು ಅಲ್ಲಿ ಹಿರಿಯ ಅಧಿಕಾರಿಗಳು ಅವರ ವಿಚಾರಣೆ ನಡೆಸಿದರು.

ಡ್ರಗ್ಸ್ ದಂಧೆಯಲ್ಲಿ ನನ್ನ ಪಾತ್ರವಿಲ್ಲ, ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಆತ್ಮ ವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದ ಸಂಜನಾ ಅಧಿಕಾರಿಗಳು ಸಾಕ್ಷಿ ತೋರಿದ ಮೇಲೆ ತೆಪ್ಪಗಾದರು ಎಂದು ಮೂಲಗಳು ತಿಳಿಸಿವೆ,  ವಿಚಾರಣೆ ವೇಳೆ ಆಕೆ ಕೆಲವರ ಹೆಸರನ್ನು ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ, ನಂತರ ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ, ನಟಿ ರಾಗಿಣಿ ಕೂಡ ಅಲ್ಲಿಯೇ ಇದ್ದಾರೆ, ಹೀಗಾಗಿ ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com