ಮೂರು ದಶಕದ ನಂತರ ವೆನಿಸ್ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರ 'ದಿ ಡಿಸೆಪಲ್'ಗೆ ಪ್ರತಿಷ್ಠಿತ FIPRESCI ಪ್ರಶಸ್ತಿ

ಚೈತನ್ಯ ತಮ್ಹಾನೆ ಅವರ "ದಿ ಡಿಸೆಪಲ್" 2020 ರ ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಫಿಪ್ರೆಸ್ಕಿ ಪ್ರಶಸ್ತಿ (FIPRESCI award) ಗಳಿಸಿಕೊಂಡಿದೆ. 
'ದಿ ಡಿಸೆಪಲ್'
'ದಿ ಡಿಸೆಪಲ್'

ನವದೆಹಲಿ: ಚೈತನ್ಯ ತಮ್ಹಾನೆ ಅವರ "ದಿ ಡಿಸೆಪಲ್" 2020 ರ ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಫಿಪ್ರೆಸ್ಕಿ ಪ್ರಶಸ್ತಿ (FIPRESCI award) ಗಳಿಸಿಕೊಂಡಿದೆ. 

ಶಾಸ್ತ್ರೀಯ ಸಂಗೀತಗಾರರ ಜಗತ್ತನ್ನು ಯಶಸ್ಸಿನ ಅಂಚಿನಲ್ಲಿ ನೋಡುವ ಈ ಚಿತ್ರವು ಕಳೆದ ವಾರ ಬಿಯೆನೆಲ್‌ನಲ್ಲಿ ತನ್ನ ಪ್ರಥಮ ಪ್ರದರ್ಶನವನ್ನು ಕಂಡಿತ್ತು. ಮತ್ತು ವಿಮರ್ಶಕರಿಂದ ಅದ್ಭುತ ವಿಮರ್ಶೆಗಳನ್ನು ಪಡೆದಿತ್ತು.

ದಿ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಕ್ರಿಟಿಕ್ಸ್ ಫೆಡರೇಶನ್ ಇಂಟರ್ನ್ಯಾಷನಲ್ ಡೆ ಲಾ ಪ್ರೆಸ್ ಸಿನೆಮಾಟೋಗ್ರಾಫಿಕ್ಗ ನ ಈ ಪ್ರಶಸ್ತಿ, ಚಲನಚಿತ್ರ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಜೊತೆಗೆ ವೃತ್ತಿಪರ ಹಿತಾಸಕ್ತಿಗಳನ್ನು ಕಾಪಾಡುವ ಗುರಿಯನ್ನು ಹೊಂದಿದೆ. 1930 ರಲ್ಲಿ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ರೂಪುಗೊಂಡ ಈ ಸಂಸ್ಥೆಯು ವೃತ್ತಿಪರ ಚಲನಚಿತ್ರ ವಿಮರ್ಶಕರು ಮತ್ತು ವಿಶ್ವದಾದ್ಯಂತದ ಚಲನಚಿತ್ರ ಪತ್ರಕರ್ತರನ್ನು ತನ್ನ ಸದಸ್ಯರನ್ನಾಗಿ ಹೊಂದಿದೆ

ಇದಕ್ಕೆ ಮುನ್ನ 1990 ರಲ್ಲಿ ಅಡೂರ್ ಗೋಪಾಲಕೃಷ್ಣನ್ ನಿರ್ದೇಶಿಸಿದ "ಮಥಿಲುಕಲ್" ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ ಭಾರತೀಯ ಚಿತ್ರವಾಗಿತ್ತು. ಇದೀಗ ಬರೋಬ್ಬರಿ ಮೂರು ದಶಕಗಳ ನಂತರ ಮತ್ತೊಮ್ಮೆ ಬಾರತೀಯ ಚಿತ್ರಕ್ಕೆ ಈ ಪ್ರಶಸ್ತಿ ಒಲಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com