ನಿಖಿಲ್ ಕುಮಾರ್ ಮುಂದಿನ ಚಿತ್ರ ಕ್ರೀಡಾಧಾರಿತ 'ರೈಡರ್'

ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಚಿತ್ರ ರೈಡರ್. ಆಕ್ಷನ್ ಆಧಾರಿತ ಮೋಷನ್ ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿದೆ. ಕ್ರೀಢಾಧಾರಿತ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ.

Published: 12th September 2020 10:33 AM  |   Last Updated: 12th September 2020 10:37 AM   |  A+A-


Nikhil Kumaraswamy

ನಿಖಿಲ್ ಕುಮಾರಸ್ವಾಮಿ

Posted By : Sumana Upadhyaya
Source : The New Indian Express

ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಚಿತ್ರ ರೈಡರ್. ಆಕ್ಷನ್ ಆಧಾರಿತ ಮೋಷನ್ ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿದೆ. ಕ್ರೀಢಾಧಾರಿತ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ.

ಇವರು ಈ ಹಿಂದೆ ಒಕ್ಕ ಲೈಲಾ ಕೊಸಮ್ ಮತ್ತು ಗುಂಡೆ ಜಾರಿ ಗಲ್ಲಂತಯ್ಯಿಂಡ ಚಿತ್ರಗಳನ್ನು ನಿರ್ದೇಶಿಸಿ ಇದೀಗ ನಿಖಿಲ್ ಕುಮಾರಸ್ವಾಮಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಈಗಾಗಲೇ ಚಿತ್ರದ ಶೇಕಡಾ 60 ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಕೋವಿಡ್ ಸಮಸ್ಯೆಯಿಲ್ಲದಿದ್ದರೆ ಈಗಾಗಲೇ ಚಿತ್ರ ತೆರೆಗೆ ಬರಬೇಕಾಗಿತ್ತು, ಇನ್ನು ಸೂಕ್ತ ಸಮಯಕ್ಕೆ ತೆರೆಗೆ ತರುತ್ತಾರೆ ಎನ್ನುತ್ತಾರೆ ನಿಖಿಲ್ ಕುಮಾರಸ್ವಾಮಿ.

ಚಿತ್ರತಂಡ ಇನ್ನು 32 ದಿನಗಳ ಶೂಟಿಂಗ್ ಉಳಿಸಿಕೊಂಡಿದೆ. ಕೋವಿಡ್-19 ಪರಿಸ್ಥಿತಿ ನೋಡಿಕೊಂಡು ನಿಖಿಲ್ ಶೂಟಿಂಗ್ ಗೆ ಹೋಗಲಿದ್ದಾರೆ.

ರೈಡರ್ ಒಂದು ನಿಜ ಜೀವನದಿಂದ ಸ್ಪೂರ್ತಿ ಪಡೆದುಕೊಂಡ ಚಿತ್ರವಂತೆ. ಹಲವು ಕಮರ್ಷಿಯಲ್ ವಿಷಯಗಳ ಜೊತೆ ಚಿತ್ರ ಚೆನ್ನಾಗಿ ಮೂಡಿಬರಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಇಲ್ಲಿ ನಾಯಕ ಬಾಸ್ಕೆಟ್ ಬಾಲ್ ಆಟಗಾರ ಎನ್ನುತ್ತಾರೆ ನಿರ್ದೇಶಕರು.

ಲಹರಿ ಮ್ಯೂಸಿಕ್ ಟಿ ಸಿರೀಸ್ ಜಂಟಿಯಾಗಿ ಚಿತ್ರ ತಯಾರಿಸುತ್ತಿದೆ. ಕಶ್ಮೀರ ಪರದೇಶಿ ಎಂಬ ನಟಿ ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಪದ ಎರಡನೇ ನಾಯಕಿ. ದತ್ತಣ್ಣ, ಅಚ್ಯುತ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ರಾಜೇಶ್ ನಟರಂಗ, ಶೋಭರಾಜ್, ನಿಹಾರಿಕ ಮತ್ತು ಅನುಶಾ ಕೂಡ ಚಿತ್ರದಲ್ಲಿದ್ದಾರೆ.

ಅರ್ಜುನ್ ಜನ್ಯ ಸಂಗೀತ, ಶ್ರೀಶ ಕುಡುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ.

Stay up to date on all the latest ಸಿನಿಮಾ ಸುದ್ದಿ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp