ಟಾಲಿವುಡ್ ನಲ್ಲೂ ನಶೆಯ ಘಾಟು: ಭದ್ರತೆ ಕೊಟ್ಟರೆ ಮಾಹಿತಿ ಕೊಡ್ತಾರಂತೆ ನಟಿ ಶ್ರೀರೆಡ್ಡಿ!

ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಟಾಲಿವುಡ್ ನಟಿ ಶ್ರೀರೆಡ್ಡಿ ಇದೀಗ ಡ್ರಗ್ಸ್ ಜಾಲದ ಕುರಿತು ಬಾಂಬ್ ಸಿಡಿಸಿದ್ದಾರೆ.
ಶ್ರೀರೆಡ್ಡಿ
ಶ್ರೀರೆಡ್ಡಿ

ಹೈದರಾಬಾದ್: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಟಾಲಿವುಡ್ ನಟಿ ಶ್ರೀರೆಡ್ಡಿ ಇದೀಗ ಡ್ರಗ್ಸ್ ಜಾಲದ ಕುರಿತು ಬಾಂಬ್ ಸಿಡಿಸಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪ್ರಗತಿಯಲ್ಲಿದ್ದರೆ, ಅತ್ತ ನಟಿ ಶ್ರೀರೆಡ್ಡಿ ತೆಲುಗು ಚಿತ್ರರಂಗದಲ್ಲೂ ನಶೆಯ ಘಾಟು ಬಡಿಯುತ್ತಿದೆ ಎಂದಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ 8 ನಿಮಿಷಗಳ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ ನಟಿ ಶ್ರೀರೆಡ್ಡಿ, ನನಗೆ ಭದ್ರತೆ ನೀಡಿದರೆ ಯಾವ ಯಾವ ನಟ ನಟಿಯರು ಡ್ರಗ್ಸ್ ಸೇವಿಸುತ್ತಾರೆ. ಯಾರ್ಯಾರು ಮಾದಕ ವಸ್ತು ಜಾಲದಲ್ಲಿದ್ದಾರೆ ಎಂಬ ಪಟ್ಟಿ ಕೊಡ್ತೀನಿ. ದೊಡ್ಡ ದೊಡ್ಡ ನಟರ ಮನೆಯಲ್ಲಿ ನಡೆಯುವ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು ಆಗುತ್ತದೆ ಎಂದು ಹೇಳಿದ್ದಾರೆ.

ಸ್ಟಾರ್ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೇ ಆಗುತ್ತಿದ್ದು ಅವರೆಲ್ಲಾ ರೇವ್ ಪಾರ್ಟಿ ಕೂಡ ಮಾಡುತ್ತಾರೆ ಎಂದು ಆರೋಪಿಸಿರುವ ನಟಿ, ರಕುಲ್‌ ಪ್ರೀತ್‌ ಸಿಂಗ್‌ರನ್ನು ಬಂಧಿಸಿದರೆ ನಿಮಗೆ ಎಲ್ಲಾ ಮಾಹಿತಿ ಸಿಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com