ಸ್ಯಾಂಡಲ್ ವುಡ್ ಜವಾಬ್ದಾರಿ ಒಬ್ಬರದ್ದಲ್ಲ, ಎಲ್ಲರಿಗೂ ಸೇರಿದ್ದು: ನಟ ಅನಿರುದ್ಧ್

ಸ್ಯಾಂಡಲ್ ವುಡ್ ನ ಜವಾಬ್ದಾರಿ ಯಾರೋ ಒಬ್ಬರದ್ದಲ್ಲ, ಎಲ್ಲರಿಗೂ ಸೇರಿದ್ದು ಎಂದು ನಟ ಅನಿರುದ್ಧ್ ಅಭಿಪ್ರಾಯಪಟ್ಟಿದ್ದಾರೆ.
ನಟ ಅನಿರುದ್ಧ್
ನಟ ಅನಿರುದ್ಧ್

ಸ್ಯಾಂಡಲ್ ವುಡ್ ನ ಜವಾಬ್ದಾರಿ ಯಾರೋ ಒಬ್ಬರದ್ದಲ್ಲ, ಎಲ್ಲರಿಗೂ ಸೇರಿದ್ದು ಎಂದು ನಟ ಅನಿರುದ್ಧ್ ಅಭಿಪ್ರಾಯಪಟ್ಟಿದ್ದಾರೆ.

ಚಂದನವನದಲ್ಲಿ ಡ್ರಗ್ಸ್ ಜಾಲ ಪ್ರಕರಣ ಕುರಿತು ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿ, ಪ್ರತಿಯೊಬ್ಬರು ಅವರವರ ಜೀವನಕ್ಕೆ ಅವರೇ ಲೀಡರ್. ರಾಜಕುಮಾರ್ ಅವರು, ಅಪ್ಪಾಜಿ, ಅಂಬರೀಶ್ ಸೇರಿದಂತೆ ಅನೇಕರು ನಮಗೆ ಬುನಾದಿ ಹಾಕಿಕೊಟ್ಟು ಹೀಗಿದ್ದಾರೆ. ಅವರ ಪರಿಶ್ರಮವನ್ನು ಅರ್ಥ ಮಾಡಿಕೊಂಡು ಜವಾಬ್ದಾರಿಯಿಂದ ಇರುವುದು ನಮ್ಮ ಧರ್ಮ, ಕರ್ತವ್ಯವಾಗಿದೆ. ನಾವು ಹಿರಿಯರನ್ನ ಸ್ಪೂರ್ತಿಯಾಗಿಟ್ಟುಕೊಂಡು ಬೆಳೆಯಬೇಕು. ನಮ್ಮನ್ನ ನೋಡಿ ಸಮಾಜ ಮತ್ತು ಮಕ್ಕಳು ಕಲಿಯುತ್ತಾರೆ. ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನ ಬಿಟ್ಟು ಹೋಗಬೇಕು. ಹಿರಿಯರು ಹಾಕಿದ ಬುನಾದಿಯನ್ನು ನಾವು ಕೆಡಿಸಬಾರದು. ಹಾಗಾಗಿ ಆ ಹಾದಿಯಲ್ಲಿ ನಾವು ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಿಸಿ ಮಾತನಾಡಿದ ಅನಿರುದ್ಧ್ ಡ್ರಗ್ಸ್  ಎನ್ನುವ ಪಿಡುಗು ಪ್ರಪಂಚದಾದ್ಯಂತ ಇದೆ. ಇದು ಕೇವಲ ಸ್ಯಾಂಡಲ್‌ ವುಡ್‌ ನಲ್ಲಿ ಮಾತ್ರ ಅಲ್ಲ. ಎಲ್ಲ‌ ರಂಗದಲ್ಲೂ ಇದೆ  ನಟಿ ರಾಗಿಣಿ ಬಂಧನ ಬಗೆಗೆ ಪ್ರತಿಕ್ರಯಿಸಿದ ನಟ ಕನ್ನಡ ಸಿನಿಮಾ ರಂಗದಲ್ಲಿ ಇಂತಹಾ ಬೆಳವಣಿಗೆ ನಡೆಯುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ.

ಇಂದು ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುವರ್ಧನ್  ಸ್ಮಾರಕ ಶಿಲಾನ್ಯಾಸಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆನ್ ಲೈನ್ ಮೂಲಕಚಾಲನೆ ಕೊಟ್ಟಿದ್ದಾರೆ. ಈ ವೇಳೆ  ಶಿಲಾನ್ಯಾಸಕ್ಕೂ ಮುನ್ನ ಪೂಜಾ ವಿಧಿವಿಧಾನ ನಡೆಸಲಾಗಿದ್ದು ಭಾರತಿ ವಿಷ್ಣುವರ್ಧನ್ ಹಾಗೂ ನಟ ಅನಿರುದ್ಧ್ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com