ಲಾಕ್‌ಡೌನ್ ನಂತರ 'ತ್ರಿಬಲ್ ರೈಡಿಂಗ್' ಹೊರಟ ಗೋಲ್ಡನ್ ಸ್ಟಾರ್ ಗಣೇಶ್!

ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶಕ ಯೋಗರಾಜ್ ಭಟ್ ಅವರ "ಗಾಳಿಪಟ  2" ಹಾಗೂ ಸುನಿ ನಿರ್ದೇಶನದ "ಸಖತ್" ಸೇರಿದಂತೆ ಕೆಲ ಚಿತ್ರಗಳ ಶೂಟಿಂಗ್ ನ ವಿವಿಧ ಹಂತಗಳನ್ನು ಪೂರ್ಣಗೊಳಿಸಬೇಕಿದೆ.

Published: 16th September 2020 11:12 AM  |   Last Updated: 16th September 2020 01:20 PM   |  A+A-


ಗಣೇಶ್‌

Posted By : Raghavendra Adiga
Source : The New Indian Express

ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶಕ ಯೋಗರಾಜ್ ಭಟ್ ಅವರ "ಗಾಳಿಪಟ  2" ಹಾಗೂ ಸುನಿ ನಿರ್ದೇಶನದ "ಸಖತ್" ಸೇರಿದಂತೆ ಕೆಲ ಚಿತ್ರಗಳ ಶೂಟಿಂಗ್ ನ ವಿವಿಧ ಹಂತಗಳನ್ನು ಪೂರ್ಣಗೊಳಿಸಬೇಕಿದೆ. ಏತನ್ಮಧ್ಯೆ, ಅವರು ತಮ್ಮ ಹೊಸ ಯೋಜನೆಯಾಗಿರುವ "ತ್ರಿಬಲ್ ರೈಡಿಂಗ್"ಗಾಗಿ  ಶೂಟಿಂಗ್ ಪ್ರಾರಂಭಿಸಲು ನಿರ್ಧರಿಸಿದ್ದಾರೆ, ಇದು ಗಣೇಶ್ ಪಾಲಿಗೆ ಪೋಸ್ಟ್ ಲಾಕ್‌ಡೌನ್ ನ ಮೊದಲ ಶೂಟಿಂಗ್ ಆಗಿರಲಿದೆ. ವಿನೋದ್ ಪ್ರಭಾಕರ್ ಅಭಿನಯದ "ರಗಡ್"  ಮೂಲಕ ನಿರ್ದೇಶಕರ ಕ್ಯಾಪ್ ಧರಿಸಿದ್ದ ಮಹೇಶ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಅಕ್ಟೋಬರ್ ಎರಡನೇ ವಾರದಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಈ ಚಿತ್ರೀಕರಣಕ್ಕೆ ತಂಡವು ಸಜ್ಜಾಗುತ್ತಿದೆ, ಬೆಂಗಳೂರಿನ ನಂತರ  ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ಶೂಟಿಂಗ್ ನಡೆಯಲಿದ್ದು ಇದಕ್ಕಾಗಿ ಸ್ಥಳಗಳನ್ನು ಫೈನಲ್ ಮಾಡಲಾಗುತ್ತಿದೆ, "ತ್ರಿಬಲ್ ರೈಡಿಂಗ್" ಚಿತ್ರವು ಲ, ಆಕ್ಷನ್, ಥ್ರಿಲ್ ಹಾಗೂ ಕಾಮಿಡಿಗಳ ಮಿಶ್ರಣವಾಗಿ  ಫ್ಯಾಮಿಲಿ ಎಂಟರ್‌ಟೈನರ್ ಎಂದು ಹೇಳಲಾಗುತ್ತದೆ.

ರಾಮ್‌ಗೋಪಾಲ್ ಮತ್ತು ಅರುಣ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಗಣೇಶ್ ನಾಯಕಿಯರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ. ಚಿತ್ರಕ್ಕೆ ನಾಯಕಿಯರ ಆಯ್ಕೆ ಈಗಷ್ಟೇ ನಡೆಯುತ್ತಿದೆ. ಚಿತ್ರದಲ್ಲಿ ಸಾಧು ಕೋಕಿಲಾ , ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್, ಮತ್ತು ಹಿರಿಯ ನಟರಾದ ಉಮೇಶ್ ಮತ್ತು ಡಿಂಗ್ರಿ ನಾಗರಾಜ್ ಸಹ ಇದ್ದಾರೆ.  ಏತನ್ಮಧ್ಯೆ, ತೆಲುಗು ಚಲನಚಿತ್ರ ಮತ್ತು ಕೆಲವು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಸಂಗೀತ ನಿರ್ದೇಶಕ ಸಾಯಿ ಕಾರ್ತೀಕ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನಿಡಲಿದ್ದಾರೆ. ಛಾಯಾಗ್ರಹಣವು ಆನಂದ್  ಅವರದ್ದಾಗಿರುತ್ತದೆ. 

Stay up to date on all the latest ಸಿನಿಮಾ ಸುದ್ದಿ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp