ಟೊರೆಂಟೋ ಚಲನಚಿತ್ರೋತ್ಸವ: ಮೀರಾ ನಾಯರ್ ಗೆ 'ಟಿಐಎಫ್ಎಫ್' ಪ್ರಶಸ್ತಿ ಗರಿ

ಪ್ರಸಿದ್ಧ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರು 2020 ರ ಟೊರೊಂಟೊ ಚಲನಚಿತ್ರೋತ್ಸವದ ಟಿಐಎಫ್ಎಫ್ ಗೌರವ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇವರು ನಟರಾದ ಕೇಟ್ ವಿನ್ಸ್ಲೆಟ್ ಮತ್ತು ಆಂಥೋನಿ ಹಾಪ್ಕಿನ್ಸ್ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

Published: 16th September 2020 12:12 PM  |   Last Updated: 16th September 2020 12:12 PM   |  A+A-


ಮೀರಾ ನಾಯರ್

Posted By : Raghavendra Adiga
Source : UNI

ಪ್ರಸಿದ್ಧ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರು 2020 ರ ಟೊರೊಂಟೊ ಚಲನಚಿತ್ರೋತ್ಸವದ ಟಿಐಎಫ್ಎಫ್ ಗೌರವ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇವರು ನಟರಾದ ಕೇಟ್ ವಿನ್ಸ್ಲೆಟ್ ಮತ್ತು ಆಂಥೋನಿ ಹಾಪ್ಕಿನ್ಸ್ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ವಿಕ್ರಮ್ ಸೇಠ್ ಅವರ 'ಎ ಸೂಟಬಲ್ ಬಾಯ್' ಚಿತ್ರದ ನಾಯರ್ ಅವರ ಕಿರುತೆರೆ ರೂಪಾಂತರದಲ್ಲಿ ಕೇಂದ್ರ ಪಾತ್ರಗಳಲ್ಲಿ ಒಬ್ಬರಾಗಿ ನಟಿ ಟಬು ಪಾತ್ರವಹಿಸಿದ್ದು ಅವರು  ಈ ಪ್ರಶಸ್ತಿಯನ್ನು ಭಾರತೀಯ-ಅಮೇರಿಕನ್ ನಿರ್ದೇಶಕರಿಗೆ ನೀಡಿದರು. 

ಐಎಫ್ಎಫ್ ಟ್ರಿಬ್ಯೂಟ್ ಅವಾರ್ಡ್ಸ್ ಚಲನಚಿತ್ರೋದ್ಯಮಕ್ಕೆ ಅತ್ಯುತ್ತಮ ಕೊಡುಗೆ ಕೊಟ್ಟವರಿಗೆ ಅವರ ಸಾಧನೆಗಳನ್ನು ಗೌರವಿಸಿ ನೀಡಲಾಗುತ್ತದೆ. "ಈ ವರ್ಷಮೀರಾ ಅವರ ಆಯ್ಕೆ ಸರಿಯಾಗಿದೆ. " ಎಂದು  ಟಬು ಹೇಳಿದರು. "ಮೀರಾ ತನ್ನ 'ಸಲಾಮ್ ಬಾಂಬೆ!' ಚಿತ್ರದ ಆದಾಯದಿಂದ ಸಲಾಮ್ ಬಾಲಕ್  ಟ್ರಸ್ಟ್ ಅನ್ನು ಸ್ಥಾಪಿಸಿದರು. ಸಲಾಮ್ ಬಾಲಕ್ ಟ್ರಸ್ಟ್ ಪ್ರತಿದಿನ 5,000 (ದೀನದಲಿತ) ಮಕ್ಕಳಿಗೆ ಸೇವೆ ಸಲ್ಲಿಸುತ್ತಿದೆ" ಎಂದು ಅವರು ಹೇಳಿದರು.

"ಸಲಾಮ್ ಬಾಂಬೆ!", "ಮಾನ್ಸೂನ್ ವೆಡ್ಡಿಂಗ್", "ದಿ ನೇಮ್‌ಸೇಕ್", "ಕ್ಯಾಟ್ವೆ ರಾಣಿ" ಮತ್ತು ತೀರಾ ಇತ್ತೀಚಿನ 'ಎ ಸೂಟಬಲ್ ಬಾಯ್' ಮುಂತಾದ ಚಲನಚಿತ್ರ ಸೇರಿದಂತೆ ಮೀರಾ ಚಿತ್ರೋದ್ಯಮದಲ್ಲಿ ಅತ್ಯುನ್ನತ ಗುಣಮಟ್ಟದ ಚಿತ್ರಗಳಿಗೆ ಹೆಸರಾಗಿದ್ದಾರೆ.

"ನನಗೆ ಪ್ರಶಸ್ತಿ ನೀಡಿದ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿಗೆ ನಿಜವಾಗಿಯೂ ಧನ್ಯವಾದ ಹೇಳುತ್ತೇನೆ" ಎಂದು ಮೀರಾ ನಾಯರ್ ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp