ತನ್ನ ಸ್ವಂತ ಮನೆಯನ್ನೇ ದೋಚಿ ಪರಾರಿಯಾದ ತಮಿಳು ನಟಿ!
ವಿಚಿತ್ರ ಪ್ರಕರಣವೊಂದರಲ್ಲಿ ತನ್ನ ಪತಿಯ ಮನೆಯನ್ನೇ ದೋಚಿದ್ದ ಕಿರುತೆರೆ ನಟಿಯೊಬ್ಬಳಿಗಾಗಿ ಚೆನ್ನೈ ಪೋಲೀಸರು ಶೋಧ ನಡೆಸಿದ್ದಾರೆ. ತಮಿಳು ನಟ ಸುಚಿತ್ರಾ ಮತ್ತು ಅವರ ಪತಿ ತಮ್ಮ ಸ್ವಂತ ಮನೆಯನ್ನೇ ದೋಚಿದ ಪ್ರಕರಣದಲ್ಲಿ ಆರೋಪಿಗಳಗಿದ್ದಾರೆ.
Published: 17th September 2020 04:33 PM | Last Updated: 17th September 2020 04:33 PM | A+A A-

ನಟ ಸುಚಿತ್ರಾ
ಚೆನ್ನೈ: ವಿಚಿತ್ರ ಪ್ರಕರಣವೊಂದರಲ್ಲಿ ತನ್ನ ಪತಿಯ ಮನೆಯನ್ನೇ ದೋಚಿದ್ದ ಕಿರುತೆರೆ ನಟಿಯೊಬ್ಬಳಿಗಾಗಿ ಚೆನ್ನೈ ಪೋಲೀಸರು ಶೋಧ ನಡೆಸಿದ್ದಾರೆ. ತಮಿಳು ನಟ ಸುಚಿತ್ರಾ ಮತ್ತು ಅವರ ಪತಿ ತಮ್ಮ ಸ್ವಂತ ಮನೆಯನ್ನೇ ದೋಚಿದ ಪ್ರಕರಣದಲ್ಲಿ ಆರೋಪಿಗಳಗಿದ್ದಾರೆ.
ಮಾದ್ಯಮ ವರದಿಯ ಪ್ರಕಾರ, ಲಾಕ್‌ಡೌನ್ ಸಮಯದಲ್ಲಿ ಕಿರುತೆರೆ ನಟಿ ಸುಚಿತ್ರಾ ಮಣಿಕಂದನ್ ಎಂಬ ನಟನೊಂದಿಗೆ ವಿವಾಹವಾಗಿದ್ದರು. ದಂಪತಿಗಳು ನಿವಾಸವನ್ನು ತಲುಪಿದಾಗ , ಅವರ ಪೋಷಕರು ಮೊದಲು ಅವರ ಮದುವೆಯನ್ನು ಒಪ್ಪಿರಲಿಲ್ಲ. ಆದರೆ ನಂತರ ಸಮ್ಮತಿಸಿದ್ದರು. ಸುಚಿತ್ರಾ ಮನೆಯಲ್ಲಿರುವ ಎಲ್ಲಾ ಹಣ ಮತ್ತು ಆಭರಣಗಳನ್ನು ನೋಡಿ ಆಕರ್ಷಿತನಾಗಿದ್ದಾಳೆ. ಸಾಂಕ್ರಾಮಿಕ ರೋಗದ ಕಾರಂಅ ಇಬ್ಬರಿಗೂ ಕೆಲಸವಿಲ್ಲದೆ ಹಣದ ಮುಗ್ಗಟ್ಟು ಉಂಟಾಗಿತ್ತು. ಆ ಕಾರಣಕ್ಕಾಗಿ ಆ ದಂಪತಿ ತಮ್ಮ ಸ್ವಂತ ಮನೆಯನ್ನೇ ದರೋಡೆ ಮಾಡಲು ಯೋಜಿಸಿದ್ದರು.
ಯೋಜನೆಯ ಭಾಗವಾಗಿ, ಪತಿ ತನ್ನ ಸ್ವಂತ ಹೆತ್ತವರನ್ನು ದೋಚುವುದಕ್ಕಾಗಿ ಅಲ್ಲೇ ಉಳಿದಿದ್ದರೆ ಪತ್ನಿ ಸುಚಿತ್ರಾ ನಗರದ ಹೊರಗೆ ತನಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ಚೆನ್ನೈನಿಂದ ಹೊರಟಿದ್ದಾಳೆ. ಆ ನಂತರ ಪತಿ ಮಣಿಕಂದನ್ ಮನೆಯಲ್ಲಿದ್ದ ಎಲ್ಲಾ ಆಭರಣ, ಹಣವನ್ನು ತೆಗೆದುಕೊಂಡು ಮನೆಯಿಂದ ಪರಾರಿಯಾಗಿದ್ದಾನೆ.
ಮಣಿಕಂದನ್ ಅವರ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ ಮತ್ತು ದರೋಡೆ ಹಿಂದೆ ದಂಪತಿಗಳ ಕೈವಾಡವಿದೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಸಧ್ಯ ಪೋಲೀಸರು ಪತಿಯನ್ನು ಬಂಧಿಸಿದ್ದು ನಟಿ ಸುಚಿತ್ರಾ ಪರಾರಿಯಾಗಿದ್ದಾಳೆ. ಟಿವಿ ಶೋ ದೇವಮಗಲ್ ಪಾತ್ರದಿಂದ ಜನಪ್ರಿಯವಾಗಿದ್ದ ನಟಿ ಇದೀಗ "ಕಳ್ಳಿ: ಎಂಬ ಪಟ್ಟ ಹೊತ್ತು ಜೈಲು ಸೇರಬೇಕಾಗಿದೆ.