ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ರಾಗಿಣಿ, ಸಂಜನಾಗೆ ಇನ್ನೆರಡು ದಿನ ಜೈಲೇ ಗತಿ
ಸ್ಯಾಂಡಲ್ ವುಡ್ ನಲ್ಲಿ ನಶೆಯ ಜಾಲಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಇನ್ನೂ ಎರಡು ದಿನ ಜೈಲೇ ಗತಿಯಾಗಿದೆ.
Published: 19th September 2020 12:32 PM | Last Updated: 19th September 2020 12:32 PM | A+A A-

ರಾಗಿಣಿ ದ್ವಿವೇದಿ ಸಂಜನಾ ಗಲ್ರಾನಿ
ಸ್ಯಾಂಡಲ್ ವುಡ್ ನಲ್ಲಿ ನಶೆಯ ಜಾಲಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ಇನ್ನೂ ಎರಡು ದಿನ ಜೈಲೇ ಗತಿಯಾಗಿದೆ.
ನಟಿಯರ ಜಾಮೀನು ಅರ್ಜಿ ವಿಚಾರಣೆಯನ್ನು 33ನೇ ಸೆಷನ್ಸ್ ನ್ಯಾಯಾಲಯ ಎರಡು ದಿನಕ್ಕೆ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಕೆಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಮಯ ಕೇಳಿದ್ದ ಹಿನ್ನೆಲೆ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 21ಕ್ಕೆ ಮುಂದೂಡಿದೆ.
ಇದಲ್ಲದೆ ಪ್ರಕರಣದ ಆರೋಪಿ ನಂ. 1 ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಅವರ ವೊಚಾರಣೆಯೂ ಸಹ ಮುಂದೂಡಿಕೆಯಾಗಿದೆ.’
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಇಂದು ಒಟ್ಟು ಐದು ಆರೋಪಿಗಳ ಜಾಮೀನಿನ ವಿಚಾರಣೆ ಇತ್ತು. ಇದರಲ್ಲಿ ಕೆಲವರು ಜೈಲಿನಲ್ಲಿದ್ದರೆ ಇನ್ನೂ ಕೆಲವರು ಸಿಸಿಬಿ ಕಸ್ಟಡಿಯಲ್ಲಿದ್ದಾರೆ.