ಅದಿತಿ ಪ್ರಭುದೇವ ಮೊದಲ ಮ್ಯೂಸಿಕ್ ಆಲ್ಬಂ 'ಪರ್ಫೆಕ್ಟ್ ಗರ್ಲ್' ಅಕ್ಟೋಬರ್ 1ರಂದು ಬಿಡುಗಡೆ

ನಟಿ ಅದಿತಿ ಪ್ರಭುದೇವ ಅವರ ಮೊದಲ ಮ್ಯೂಸಿಕ್ ಆಲ್ಬಂ ಪರ್ಫೆಕ್ಟ್ ಗರ್ಲ್ ಅಕ್ಟೋಬರ್ 1ಕ್ಕೆ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಟಿ ವಿ ಧಾರವಾಹಿ ನಾಗಕನ್ನಿಕೆ ನಂತರ ಬೆಳ್ಳಿತೆರೆಗೆ ಬಂದ ಅದಿತಿ ಪ್ರಭುದೇವ ಅವರ ಮೊದಲ ಮ್ಯೂಸಿಕ್ ವಿಡಿಯೊವಿದು.
ಅದಿತಿ ಪ್ರಭುದೇವ್

ಇದಕ್ಕೆ ಹೊಸಪ್ರತಿಭೆ ಅಭಿ ಮುಲ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರೇ ಸಾಹಿತ್ಯ ಬರೆದು ನಿರ್ಮಾಣ ಕೂಡ ಮಾಡಿದ್ದಾರೆ. ವಿಡಿಯೊದಲ್ಲಿ ಅವರು ಸಹ ಅದಿತಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣವಾಗಿದೆ. ಕೊರಿಯೊಗ್ರಫಿ ಅಭಿಷೇಕ್ ಮಲ್ನಾಡ್ ಅವರದ್ದು. ಶಿವಸೇನಾ ಕ್ಯಾಮರಾ, ಹಿನ್ನೆಲೆ ಸಂಗೀತ ಬಸ್ಸಿಕ್ಸ್ ಅವರದ್ದು. ಚಂದನ್ ಗೌಡ ಅವರು ಅದಿತಿಯವರ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ಮಹೇಶ್ ಎಸ್ ಸಂಕಲನ ನೀಡಿದ್ದಾರೆ.

ಅದಿತಿ ಪ್ರಭುದೇವ ಇತ್ತೀಚೆಗೆ ನಟಿಸಿದ್ದ ಕೊನೆಯ ಚಿತ್ರ ಬ್ರಹ್ಮಚಾDರಿ. ಇದೀಗ ಅವರ ಬಳಿ ವಿಜಯ್ ಪ್ರಸಾದ್ ಅವರ ತೋತಾಪುರಿ, ಎಂ ಜಿ ಶ್ರೀನಿವಾಸ್ ಅವರ ಓಲ್ಡ್ ಮಾಂಕ್, ಅಭಿಷೇಕ್ ಶೆಟ್ಟಿಯವರ ಗಜಾನನ ಮತ್ತು ಗ್ಯಾಂಗ್ ಚಿತ್ರಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com