'ಬ್ರಹ್ಮಗಂಟು' ಗೀತಾಗೆ ಡ್ರಗ್ಸ್ ನಂಟು?; 'ಗಟ್ಟಿ ಮೇಳ' ವಿಕ್ರಾಂತ್ ವಿಚಾರಣೆ

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ತನಿಖೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಸಿಸಿಬಿ ಜೊತೆಗೆ ಆಂತರಿಕ ಭದ್ರತಾ ವಿಭಾಗ ಡ್ರಗ್ ಮಾಫಿಯಾದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳುವಲ್ಲಿ ಭಾರೀ ಪ್ರಯತ್ನ ಮಾಡುತ್ತಿದೆ. 
ಗೀತಾ ಭಟ್ ಮತ್ತು ಅಭಿಷೇಕ್ ದಾಸ್
ಗೀತಾ ಭಟ್ ಮತ್ತು ಅಭಿಷೇಕ್ ದಾಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ತನಿಖೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಸಿಸಿಬಿ ಜೊತೆಗೆ ಆಂತರಿಕ ಭದ್ರತಾ ವಿಭಾಗ ಡ್ರಗ್ ಮಾಫಿಯಾದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳುವಲ್ಲಿ ಭಾರೀ ಪ್ರಯತ್ನ ಮಾಡುತ್ತಿದೆ. 

ಬ್ರಹ್ಮಗಂಟು ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಅವರಿಗೂ ಕೂಡ ನೋಟಿಸ್ ತಲುಪಿದೆ. ಅಭಿಷೇಕ್ ಹಾಗೂ ಗೀತಾ ಭಟ್ ಅವರಿಗೂ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು. ಅದರನ್ವಯ ಇಬ್ಬರೂ ಶಾಂತಿನಗರದಲ್ಲಿರುವ ಐಎಸ್‌ಡಿ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದಾರೆ. ಎಸ್ಪಿ ನೇತೃತ್ವದ ತಂಡ ವಿಚಾರಣೆ ನಡೆಸಿದೆ.

ವಿಚಾರಣೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಗೀತಾ ಭಟ್ ‘ನಾನು ಯಾವುದೇ ಇಲ್ಲೀಗಲ್ ಕೆಲಸ ಮಾಡಿಲ್ಲ’. ಎಂದು ಕಿಡಿಕಾರಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ 19ನೇ ತಾರೀಖು ನನಗೆ ಐಎಸ್​ಡಿ ಯಿಂದ ನನಗೆ ನೋಟಿಸ್ ಬಂಧಿದೆ. ಅಧಿಕಾರಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟು ಅವರಿಗರ ಸಹಕಾರ ನೀಡುತ್ತೇನೆ. ಎಂದಿದ್ದಾರೆ.

ಸ್ಯಾಂಡಲ್ ವುಡ್​ ನಲ್ಲಿ ಡ್ರಗ್ಸ್ ಮಾಫಿಯಾ ಇರಬಹುದ ಆದರೆ ನನಗೆ ಗೊತ್ತಿಲ್ಲ. ನಾನು ನನ್ನ ಪಾಡಿಗೆ ಕೆಲಸ ಮುಗಿಸಿಕೊಂಡು ಬರುತ್ತೇನೆ. ನಾನು ಯಾವುದೇ ಇಲ್ಲೀಗಲ್ ಕೆಲಸ ಮಾಡಿಲ್ಲ. ಈಗ ಧೈರ್ಯವಾಗಿಯೇ ವಿಚಾರಣೆಗೆ ಹೋಗಿ ಬರುತ್ತೇನೆ. ಅವರು ಏನು ವಿಚಾರಣೆ ಮಾಡುತ್ತಾರೋ ಅದಕ್ಕೆ ಉತ್ತರ ಕೊಟ್ಟು ಬರುತ್ತೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com