ವಿಶಾಲ್
ವಿಶಾಲ್

ನಟ ವಿಶಾಲ್ ಗೆ ಮದ್ರಾಸ್ ಹೈಕೋರ್ಟ್ ನೋಟಿಸ್!

ನಟ ವಿಶಾಲ್ ರ ಮುಂಬರುವ ಚಿತ್ರ ಚಕ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡದಂತೆ ತಡೆಯುವಂತೆ ಚಲನಚಿತ್ರ ನಿರ್ಮಾಣ ಸಂಸ್ಥೆ ಟ್ರೈಡೆಂಟ್ ಆರ್ಟ್ಸ್ ಸಲ್ಲಿಸಿದ್ದ ಅರ್ಜಿ ಸಂಬಂಧ ನಟ ವಿಶಾಲ್ ಮತ್ತು ನಿರ್ದೇಶಕ ಎಂ ಆನಂದನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. 

ಚೆನ್ನೈ: ನಟ ವಿಶಾಲ್ ರ ಮುಂಬರುವ ಚಿತ್ರ ಚಕ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡದಂತೆ ತಡೆಯುವಂತೆ ಚಲನಚಿತ್ರ ನಿರ್ಮಾಣ ಸಂಸ್ಥೆ ಟ್ರೈಡೆಂಟ್ ಆರ್ಟ್ಸ್ ಸಲ್ಲಿಸಿದ್ದ ಅರ್ಜಿ ಸಂಬಂಧ ನಟ ವಿಶಾಲ್ ಮತ್ತು ನಿರ್ದೇಶಕ ಎಂ ಆನಂದನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. 

ವಿಶಾಲ್ ರ ಹಿಂದಿನ 'ಆಕ್ಷನ್' ಚಿತ್ರದಿಂದ 8 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಟ್ರೈಡೆಂಟ್ ಆರ್ಟ್ಸ್ ಅರ್ಜಿ ಸಲ್ಲಿಸಿದ್ದು ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಎನ್ ಸತೀಶ್ ಕುಮಾರ್ ನಟ-ನಿರ್ದೇಶಕರಿಗೆ ನೋಟಿಸ್ ನೀಡಿದ್ದು ಗುರುವಾರದೊಳಗೆ ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿದೆ.

ಅರ್ಜಿದಾರರ ಪರ ವಕೀಲ ವಿಜಯನ್ ಸುಬ್ರಮಣಿಯನ್ ಅವರು ಆಗಸ್ಟ್ 29, 2018ರಂದು ಆನಂದನ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆ ಪ್ರಕಾರ "ವಿಶಾಲ್ ಸೇನಾಧಿಕಾರಿಯಾಗಿ ನಟಿಸಬೇಕು ಎಂದು ನಿರ್ಧರಿಸಲಾಯಿತು. ಅದೇ ದಿನ 1 ಲಕ್ಷ ರೂ. ಟೋಕನ್ ಮುಂಗಡ ಚೆಕ್ ಅನ್ನು ನಿರ್ದೇಶಕರಿಗೆ ನೀಡಲಾಗಿತ್ತು ಎಂದು ನಿರ್ಮಾಪಕರು ಹೇಳಿದ್ದಾರೆ.

ಆದಾಗ್ಯೂ, ಕೊರೋನಾ ಪ್ರೇರಿತ ಲಾಕ್‌ಡೌನ್ ನಿಂದಾಗಿ ಯೋಜನೆಗಳನ್ನು ಸ್ಥಗಿತಗೊಳಿಸಲಾಯಿತು. "ಆದರೆ ಆನಂದನ್ ನಿರ್ದೇಶನದಲ್ಲಿ ವಿಶಾಲ್ 'ಚಕ್ರ' ಹೆಸರಿನ ಚಿತ್ರದ ನಿರ್ಮಾಣವನ್ನು ಪ್ರಾರಂಭಿಸಿದರು. ಆ ಬಳಿಕ ಆನಂದನ್ ನನ್ನೊಂದಿಗೆ ಮಾತನಾಡುವುದನ್ನು ಅಥವಾ ಭೇಟಿಯಾಗುವುದನ್ನು ತಪ್ಪಿಸಿದರು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

44 ಕೋಟಿ ರೂ.ಗಳ ಪರಿಗಣನೆಗೆ 'ಚಕ್ರ' ಅನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅರ್ಜಿದಾರರು, ಈ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸದಿದ್ದಲ್ಲಿ, ಒಪ್ಪಂದದ ಅಡಿಯಲ್ಲಿ ನನ್ನ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಇದೇ ವೇಳೆ ಆನಂದನ್ ಮತ್ತು ವಿಶಾಲ್ ಅವರಿಗೆ 1 ಕೋಟಿ ರೂ. ಠೇವಣಿ ಇಡಲು ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಅವರು ವಾದಿಸಿದರು.

Related Stories

No stories found.

Advertisement

X
Kannada Prabha
www.kannadaprabha.com