ಪೊಗರು ಶೂಟಿಂಗ್ ಪುನಾರಂಭಕ್ಕೆ ಮಹೂರ್ತ ಫಿಕ್ಸ್: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಮುರಳಿ ಮಾಸ್ಟರ್ ಕೊರಿಯೋಗ್ರಫಿ

ಧ್ರುವ ಸರ್ಜಾ ಅವರ "ಪೊಗರು" ಟೀಂ ಶೂಟಿಂಗ್ ಪುನರಾಭದ ನಿರೀಕ್ಷೆಯಲ್ಲಿದೆ. ಅಂತಿಮವಾಗಿ ಇದೀಗ ಚಿತ್ರದ ಶೂಟಿಂಗ್ ಸೆಪ್ಟೆಂಬರ್ 24ಕ್ಕೆ ಪುನಾರಂಭವಾಗುವುದು ಪಕ್ಕಾ ಆಗಿದೆ. 
ಧ್ರುವ ಸರ್ಜಾ
ಧ್ರುವ ಸರ್ಜಾ

ಧ್ರುವ ಸರ್ಜಾ ಅವರ "ಪೊಗರು" ಟೀಂ ಶೂಟಿಂಗ್ ಪುನರಾಭದ ನಿರೀಕ್ಷೆಯಲ್ಲಿದೆ. ಅಂತಿಮವಾಗಿ ಇದೀಗ ಚಿತ್ರದ ಶೂಟಿಂಗ್ ಸೆಪ್ಟೆಂಬರ್ 24ಕ್ಕೆ ಪುನಾರಂಭವಾಗುವುದು ಪಕ್ಕಾ ಆಗಿದೆ. ತಂಡವು 1.50 ಕೋಟಿ ರೂ.ಗಳ ದೊಡ್ಡ ಬಜೆಟ್ ನಲ್ಲಿ ಬೆಂಗಳೂರಿನ ಎಚ್‌ಎಂಟಿಯಲ್ಲಿ ಭವ್ಯವಾದ ಸೆಟ್ ತಯಾರಿಸಿದೆ. ಆಕ್ಷನ್ ಪ್ರಿನ್ಸ್  ಧ್ರುವ ಹಾಗೂ  ಹಲವಾರು ಡ್ಯಾನ್ಸರ್ಸ್  ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ "ಪೊಗರು ಅಣ್ಣನಿಗೆ ಪೊಗರು" ಟ್ರ್ಯಾಕ್‌ಗೆ ಶೂಟಿಂಗ್ ನಡೆಸಲಿದ್ದಾರೆ. 

ನಿರ್ದೇಶಕ ನಂದಕಿಶೋರ್ ಅವರ ಪ್ರಕಾರ, ಪ್ರಸ್ತುತ, ಚಿತ್ರದ ಕ್ರಿಯೇಟಿವ್ ವರ್ಕ್ಸ್ ನಡೆಯುತ್ತಿದೆ. ಅವರು ಆರು ದಿನಗಳ ಶೂಟಿಂಗ್ ಶೆಡ್ಯೂಲ್ ಅನ್ನು ಗುರುವಾರದಿಂದ ಪ್ರಾರಂಭಿಸಲು ಸಿದ್ಧರಾಗಿದ್ದಾರೆ."ನಾವು ಶೂಟಿಂಗ್‌ನ ಕೊನೆಯ ಹಂತದಲ್ಲಿದ್ದೇವೆ ಮತ್ತು ನಟ ಧನಂಜಯ್ ಮತ್ತು ಇತರ ಕೆಲವು ಕಲಾವಿದರೊಂದಿಗೆ ಎರಡು ದಿನಗಳ ಟಾಕಿ ಭಾಗಗಳನ್ನು ಪೂರೈಸಿದ ನಂತರ ಚಿತ್ರದ ರೌಂಡ್ ಅಪ್ ಪ್ರಾರಂಭವಾಗಲಿದೆ." ಎಂದರು. "ಪೊಗರು" ಚಿತ್ರಕ್ಕೆ  ಬಿ.ಎಲ್ ಗಂಗಾಧರ್ ಬಂಡವಾಳ ಹೂಡಿದ್ದು ಧ್ರುವ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ  ಮಯೂರಿ, ರವಿಶಂಕರ್, ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಸಹ ಪ್ರಮುಖ ತಾರಾಂಗಣದಲ್ಲಿದ್ದಾರೆ.

ಕ್ಲೈಮ್ಯಾಕ್ಸ್ ಶಾಟ್‌ನಲ್ಲಿ ಬಾಡಿಬಿಲ್ಡರ್‌ಗಳಾದ ಕೈ ಗ್ರೀನ್, ಮೋರ್ಗನ್ ಅಸ್ಟೆ, ಜೋಹಾನ್ ಲ್ಯೂಕಾಸ್ ಮತ್ತು ಜೋ ಲಿಂಡರ್  ಗಳ ಸ್ಟಂಟ್ ಗಳಿರುವುದು ಚಿತ್ರದ ಪ್;ಅಸ್ ಪಾಯಿಂಟ್. ವಿಜಯ್ ಮಿಲ್ಟನ್ ಛಾಯಾಗ್ರಹಣ ಚಿತ್ರಕ್ಕಿದೆ, 

ಈ ನಡುವೆ ಉದಯ್ ಕೆ ಮೆಹ್ತಾ ನಿರ್ಮಿಸಲಿರುವ ಮುಂದಿನ ಯೋಜನೆಗಾಗಿ  ನಂದಕಿಶೋರ್  ಧ್ರುವ ಸರ್ಜಾ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. "ನಾವು ಸ್ಕ್ರಿಪ್ಟಿಂಗ್ ಕೆಲಸದ ಅಂತಿಮ ಹಂತದಲ್ಲಿದ್ದೇವೆ. ನಾವು ಪಾತ್ರವರ್ಗ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಇನ್ನಷ್ಟೇ ಅಂತಿಮಗೊಳಿಸುತ್ತೇವೆ. ಪೊಗರು ಚಿತ್ರೀಕರಣ ಪೂರ್ಣಗೊಂಡ ಕೂಡಲೇ ಈ ಹೊಸ ಯೋಜನೆ ಪ್ರಾರಂಭಿಸಲು ನಾವು ಬಯಸುತ್ತೇವೆ” ಎಂದು ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com