ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಕೊಟ್ರು ಸರ್ಪ್ರೈಸ್! ಮದುವೆಯ ಮುನ್ಸೂಚನೆಯೋ?

ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರು ಹುಡುಗಿಯ ಕೈ ಹಿಡಿದುಕೊಂಡಿರುವ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. 
ಶೈನ್ ಶೆಟ್ಟಿ
ಶೈನ್ ಶೆಟ್ಟಿ

ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರು ಹುಡುಗಿಯ ಕೈ ಹಿಡಿದುಕೊಂಡಿರುವ ವಿಡಿಯೋವೊಂದನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. 

ಕಾಫಿ ಶಾಪ್ ನಲ್ಲಿ ಶೈನ್ ಶೆಟ್ಟಿ ಹುಡುಗಿಯೊಬ್ಬರ ಕೈ ಹಿಡಿದಿದ್ದಾರೆ. ಇದಕ್ಕೆ ಹಿನ್ನಲೆ ಧ್ವನಿಯಾಗಿ ಬಾನಲಿ ಬದಲಾಗು ಬಣ್ಣವೇ ಭಾವನೆ ಹಾಡು ಕೇಳಿಬರುತ್ತದೆ. ವಿಡಿಯೋದಲ್ಲಿ ಹುಡುಗಿಯ ಮುಖ ಕಾಣದಿರುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. 

ಈ ವಿಡಿಯೋ ನೋಡಿದ ಅಭಿಮಾನಿಗಳು ಶೈನ್ ಶೆಟ್ಟಿ ಮದುವೆಯಾಗುತ್ತಿರುವ ಹುಡುಗಿ ಇರಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಶೈನ್ ಶೆಟ್ಟಿ ಮಾತ್ರ ಅಧಿಕೃತವಾಗಿ ತಮ್ಮ ಮದುವೆ ಬಗ್ಗೆ ಹೇಳಿಲ್ಲ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ನಡುವೆ ಪ್ರೇಮವಿದೆ ಎಂಬ ಚರ್ಚೆ ಆಗಿತ್ತು. ಹೀಗಾಗಿ ಕೆಲವರು ಇದು ದೀಪಿಕಾ ದಾಸ್ ಇರಬಹುದೇ ಎಂದು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com