'ಕೆಜಿಎಫ್ ಚಾಪ್ಟರ್ 2' ಗೆ 'ರಾಕಿ ಬಾಯ್' ಯಶ್ ಡಬಲ್ ವರ್ಕೌಟ್

ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸರಣಿ ಚಿತ್ರಕ್ಕಾಗಿ ನಟ ಯಶ್ ಭಾರೀ ವರ್ಕೌಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್  ಸೆಟ್ ಗೆ ಹೋಗುವ ಮುನ್ನ ಆದಷ್ಟು ದೇಹವನ್ನು ಚೆನ್ನಾಗಿ ಹುರಿಗೊಳಿಸಿ ತೆರೆಯ ಮೇಲೆ ಸುಂದರವಾಗಿ ಕಾಣಿಸಲು ಕಸರತ್ತು ನಡೆಸುತ್ತಿದ್ದಾರೆ.

Published: 24th September 2020 02:53 PM  |   Last Updated: 24th September 2020 04:00 PM   |  A+A-

Yash in Gym

ಜಿಮ್ ಮಾಸ್ಟರ್ ಜೊತೆ ನಟ ಯಶ್

Posted By : Sumana Upadhyaya
Source : The New Indian Express

ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸರಣಿ ಚಿತ್ರಕ್ಕಾಗಿ ನಟ ಯಶ್ ಭಾರೀ ವರ್ಕೌಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್  ಸೆಟ್ ಗೆ ಹೋಗುವ ಮುನ್ನ ಆದಷ್ಟು ದೇಹವನ್ನು ಚೆನ್ನಾಗಿ ಹುರಿಗೊಳಿಸಿ ತೆರೆಯ ಮೇಲೆ ಸುಂದರವಾಗಿ ಕಾಣಿಸಲು ಕಸರತ್ತು ನಡೆಸುತ್ತಿದ್ದಾರೆ.

ಯಶ್ ಅವರ ಆಪ್ತ ಮೂಲಗಳು ಹೇಳುವ ಪ್ರಕಾರ, ಅವರು ದಿನನಿತ್ಯದ ವರ್ಕೌಟ್ ಸಮಯವನ್ನು ಹೆಚ್ಚು ಮಾಡಿಕೊಂಡಿದ್ದು ವಿವಿಧ ವ್ಯಾಯಾಮ, ಕುಸ್ತಿಗಳನ್ನು ಬೇರೆ ಬೇರೆ ಸಮಯಗಳಲ್ಲಿ ಮಾಡುತ್ತಿದ್ದಾರಂತೆ. ಬೆಳಗ್ಗೆ 6 ಗಂಟೆಯಿಂದ ಅರ್ಧ ಗಂಟೆ ಕಾಲ ಕಾರ್ಡಿಯೊ ಮಾಡುತ್ತಾರೆ. ನಂತರ ತೂಕಕ್ಕೆ ಸಂಬಂಧಿಸಿದ ತರಬೇತಿ, ಆ್ಯಬ್ ವರ್ಕೌಟ್ ಒಂದು ಗಂಟೆ ಮತ್ತೆ ಕಾರ್ಡಿಯೊ ಸೆಷನ್ ನಲ್ಲಿ ಪಾಲ್ಗೊಳ್ಳುತ್ತಾರೆ. ಸಾಯಂಕಾಲ ವಿವಿಧ ವ್ಯಾಯಾಮ, ಭಾರೀ ದೈಹಿಕ ಕಸರತ್ತು ಮತ್ತು ಕಟ್ಟುನಿಟ್ಟಿನ ಡಯಟ್ ಕೂಡ ಪಾಲಿಸುತ್ತಾರಂತೆ.

ಕೆಜಿಎಫ್ 2ನಲ್ಲಿ ಅಧೀರ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಹಾಗೂ ಬಾಲಿವುಡ್ ನಟಿ ರವೀನಾ ಟಂಡನ್, ಮಾಳವಿಕಾ ಅವಿನಾಶ್ ಕೂಡ ಇದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?

Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp