ಸುಳ್ಳು ಸುದ್ದಿ ಹಬ್ಬಿಸಬೇಡಿ: ಮೊದಲ ಬಾರಿಗೆ ಮೌನ ಮುರಿದ ಮೇಘನ ರಾಜ್

ಎರಡು ಗಂಡು ಮಗು ಜೊತೆ ಮೇಘನಾ-ಧ್ರುವ ಸರ್ಜಾ, ಮಗು ಹಿಡಿದು ಕಣ್ಣೀರು ಹಾಕಿ ಧ್ರುವ,ಮೇಘನಾ ಪರಿಸ್ಥಿತಿ ಏನಾಗಿದೆ..? ಎಂದು ಇತ್ತೀಚೆಗೆ ಕೆಲ ಯೂಟ್ಯೂಬ್ ಚಾನಲ್‍ಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು.

Published: 25th September 2020 10:07 AM  |   Last Updated: 25th September 2020 01:36 PM   |  A+A-


meghana raj

ಮೇಘನಾ ರಾಜ್

Posted By : Shilpa D
Source : Online Desk

ಬೆಂಗಳೂರು: ಎರಡು ಗಂಡು ಮಗು ಜೊತೆ ಮೇಘನಾ-ಧ್ರುವ ಸರ್ಜಾ, ಮಗು ಹಿಡಿದು ಕಣ್ಣೀರು ಹಾಕಿ ಧ್ರುವ, ಮೇಘನಾ ಪರಿಸ್ಥಿತಿ ಏನಾಗಿದೆ..? ಎಂದು ಇತ್ತೀಚೆಗೆ ಕೆಲ ಯೂಟ್ಯೂಬ್ ಚಾನಲ್‍ಗಳಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿತ್ತು. ಆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ನಟಿ ಮೇಘನಾ ರಾಜ್ ಸುಳ್ಳು ಸುದ್ದಿಗಳ ವಿರುದ್ಧ ಕಿಡಿಕಾರಿದ್ದಾರೆ.

ಸತ್ಯ ಏನೆಂದು ತಿಳಿದುಕೊಳ್ಳದೆ ಕೆಲವರು ಹೆಚ್ಚಿನ ವೀಕ್ಷಕರು ಮತ್ತು ಅಧಿಕ ವೀಕ್ಷಣೆ ಪಡೆದುಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ. ಹಾಗೇನಾದರೂ ನನ್ನ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಾವೇ ನೇರವಾಗಿ ನೀಡುತ್ತೇವೆ. ಇಂತಹ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಮೇಘನಾ ರಾಜ್ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳು ಮನವಿ ಮಾಡಿರುವ ಅವರು, ನನ್ನ ಹಾಗೂ ನನ್ನ ಕುಟುಂಬ ಕುರಿತಾದ ಗಾಳಿ ಸುದ್ದಿಗಳನ್ನು ನಂಬಬೇಡಿ. ಈ ಕುರಿತು ಅಧಿಕೃತ ಪ್ರಕಟಣೆಯನ್ನು ನಾವೇ ನೀಡುತ್ತೇವೆ. ಕೆಲವು ಸಾಮಾಜಿಕ ಜಾಲತಾಣಗಳು  ಅವರ ಲಾಭಾಕ್ಕಾಗಿ ನಮ್ಮನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ನಿಮ್ಮ ಮುಂದೆ ಬಂದು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆಯೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದ ಮೇಘನಾ, ಚಿರು ಅಗಲಿಕೆ ಬಳಿಕ ದೂರ ಉಳಿದಿದ್ದಾರೆ. ಚಿರು ಸಾವಿನ ಸಂದರ್ಭದಲ್ಲಿ ನಾಡಿನ ಜನರು ತೋರಿದ ಪ್ರೀತಿ ಕುರಿತು ಧನ್ಯವಾದ ತಿಳಿಸಿದ್ದರು. ಬಳಿಕ ಒಂದೆರಡು ಸೀಮಿತ ಪೋಸ್ಟ್​ಗಳನ್ನು ಮಾಡಿದ್ದರು.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp