ಕನ್ನಡ ನಾಡಲ್ಲಿ ಹುಟ್ಟಬೇಕು ಎಂದಿದ್ದ ಎಸ್‍ಪಿಬಿ: ಕೆ. ಕಲ್ಯಾಣ್

ಗಾನ ಗಾರುಡಿಗ ಎಸ್‍ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಚಿತ್ರ ಸಾಹಿತಿ ಕೆ. ಕಲ್ಯಾಣ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಕೆ.ಕಲ್ಯಾಣ್ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಕೆ.ಕಲ್ಯಾಣ್ ಎಸ್.ಪಿ.ಬಾಲಸುಬ್ರಹ್ಮಣ್ಯಂ

 ಗಾನ ಗಾರುಡಿಗ ಎಸ್‍ ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಚಿತ್ರ ಸಾಹಿತಿ ಕೆ. ಕಲ್ಯಾಣ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

“ಎಸ್‍ಪಿಬಿಯವರಿಗೆ ಕನ್ನಡ, ಕರ್ನಾಟಕವೆಂದರೆ ಬಲು ಪ್ರೀತಿ. ಮುಂದಿನ ಜನ್ಮದಲ್ಲಾದರೂ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹೇಳುತ್ತಿದ್ದರು” ಎಂದು ಕರ್ನಾಟಕದ ಮೇಲಿನ ಅವರ ಅಭಿಮಾನದ ಬಗ್ಗೆ ಕೆ. ಕಲ್ಯಾಣ್ ತಿಳಿಸಿದ್ದಾರೆ.

ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಇಂದು ಮಧ್ಯಾಹ್ನ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಕಳೆದ ಐವತ್ತೊಂದು ದಿನಗಳಿಂಡ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದರು. 

ಎಸ್‍ಪಿಬಿ ಸಹಸ್ರಾರು ಹಾಡುಗಳ ಖಜಾನೆ ಬಿಟ್ಟುಹೋಗಿದ್ದಾರೆ: ವಿಜಯಪ್ರಕಾಶ್

ಖ್ಯಾತ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಾಯಕ ವಿಜಯಪ್ರಕಾಶ್‍ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಯಾವುದೇ ಸಾಹಿತ್ಯಕ್ಕೆ ಎಸ್‍ಪಿಬಿ ದನಿ ಸಿಕ್ಕಿದರೆ ಅದು ಅಮರವಾಗುತ್ತಿತ್ತು. ಗಾನ ಕೋಗಿಲೆಯ ಗಾಯನ ನಿಂತಿತಾದರೂ, ಸಹಸ್ರಾರು ಹಾಡುಗಳ ಖಜಾನೆಯನ್ನೇ ನಮಗಾಗಿ ಬಿಟ್ಟು ಹೋಗಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com