ನಾನು ಕೂಡ ಡ್ರಗ್ ರಾಕೆಟ್ ನ ಒಂದು ಭಾಗವಾಗಿದ್ದೆ: ಸಿಸಿಬಿ ಮುಂದೆ ಕೊನೆಗೂ ತಪ್ಪೊಪ್ಪಿಕೊಂಡ ಸಂಜನಾ

ಡ್ರಗ್ ರಾಕೆಟ್ ನಲ್ಲಿ ನಾನು ಒಂದು ಭಾಗವಾಗಿದ್ದೆ ಎಂದು ನಟಿ ಸಂಜನಾ ತಪ್ಪೊಪ್ಪಿಕೊಂಡಿದ್ದು, ಅದರಿಂದಲೇ ಆಕೆ ಅಪಾರ ಸಂಪತ್ತು ಗಳಿಸಿದ್ದಾಳೆ ಜೊತೆಗೆ ಐಷಾರಾಮಿ ಜೀವನ ನಡೆಸುತ್ತಿದ್ದಳು ಎಂದು ತಿಳಿಸಿದ್ದಾರೆ.
ಸಂಜನಾ ಗಲ್ರಾನಿ
ಸಂಜನಾ ಗಲ್ರಾನಿ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ ಸಂಬಂಧ ಬಂಧಿತ ನಟಿಯರಿಗೆ ಜಾಮೀನು ನೀಡದಂತೆ ಸಿಸಿಬಿ ಅಡ್ಡಿ ಪಡಿಸಿದೆ.

ಡ್ರಗ್ ರಾಕೆಟ್ ನಲ್ಲಿ ನಾನು ಒಂದು ಭಾಗವಾಗಿದ್ದೆ ಎಂದು ನಟಿ ಸಂಜನಾ ತಪ್ಪೊಪ್ಪಿಕೊಂಡಿದ್ದು, ಅದರಿಂದಲೇ ಆಕೆ ಅಪಾರ ಸಂಪತ್ತು ಗಳಿಸಿದ್ದಾಳೆ ಜೊತೆಗೆ ಐಷಾರಾಮಿ ಜೀವನ ನಡೆಸುತ್ತಿದ್ದಳು ಎಂದು ತಿಳಿಸಿದ್ದಾರೆ.

ಆಕೆ ಆರೋಪಿಯಾಗಿದ್ದು, ಜಾಮೀನು ನೀಡದಂತೆ ಸಿಸಿಬಿ ಆಕ್ಷೇಪ ವ್ಯಕ್ತ ಪಡಿಸಿದೆ, ಸ್ಟಾರ್ ಹೋಟೆಲ್, ಫಾರ್ಮ್ ಹೌಸ್ ಗಳಲ್ಲಿ ಆಯೋಜಿಸುವ ಪಾರ್ಟಿಗಳಲ್ಲಿ ಸಂಜನಾ ಭಾಗಿಯಾಗುತ್ತಿದ್ದರು. ಗೋವಾ, ಮುಂಬಯಿ, ಪಂಜಾಬ್, ಆಂಧ್ರ ಪ್ರದೇಶ, ಹಾಗೂ ವಿದೇಶಗಳಿಂದಲೂ ಡ್ರಗ್ಸ್ ತರಿಸುತ್ತಿದ್ದರು, ಜೊತೆಗೆ ಆಹ್ವಾನಿತರಿಗೆ ಮಾರುತ್ತಿದ್ದರು,  ಸಿನಿಮಾ ರಂಗದ ಕಲಾವಿದರನ್ನು ಬಳಸಿಕೊಂಡು ಅತಿಥಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದರು.

ತಾವು  ಮಾಡುತ್ತಿದ್ದ ತಪ್ಪಿನ ಬಗ್ಗೆ ಅರಿವಿದ್ದರೂ ಕೂಡ ನಟಿ ದಂಧೆಯಲ್ಲಿ ಭಾಗಿಯಾಗಿದ್ದರು, ಪಾರ್ಟಿಗೆ ಬರುತ್ತಿದ್ದ ನಟಿ ಶ್ರೀಮಂತರನ್ನು ಆಕರ್ಷಿಸಿ ಅವರಿಗೆ ಡ್ರಗ್ಸ್ ಖರೀದಿಸುವಂತೆ  ಮತ್ತು ಸೇವಿಸುವಂತೆ ಪ್ರಚೋದಿಸುತ್ತಿದ್ದರು ಎಂದು ಪ್ರಾಸಿಕ್ಯೂಷನ್ ಸಲ್ಲಿಸಲಾಗಿದೆ.

ವಿಚಾರಣೆ ವೇಳೆ ಆರೋಪಿ ಸಂಜನಾ ತನ್ನ ಎಲ್ಲಾ ತಪ್ಪುಳನ್ನು ಒಪ್ಪಿಕೊಂಡಿದ್ದು, ಡ್ರಗ್ಸ್  ಖರೀದಿಲ್ಲಿ ತನ್ನ ಪಾತ್ರದ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾಳೆ.  ದೇಶ ವಿದೇಶಗಳ ಡ್ರಗ್ ಪೆಡ್ಲರ್ ಗಳ ಜೊತೆ ನೇರವಾಗಿ ಸಂಪರ್ಕ ಹೊಂದಿದ್ದಾಗಿ ಪ್ರಾಸಿಕ್ಯೂಷನ್ತಿಳಿಸಿದೆ.

ಸಂಜನಾ ಮತ್ತು ಆಕೆಯ ಆಪ್ತ ರಾಹುಲ್ ಥಾನ್ಸೆ ಡ್ರಗ್ಸ್ ಸೇವಿಸುವ ವಾಟ್ಸಾಪ್ ಗುಂಪಿನ ಭಾಗವಾಗಿದ್ದರು, ರಾಹುಲ್ ಬಂಧನದ ನಂತರ ಸಂಜನಾ ವಾಟ್ಸಾಪ್ ಗ್ರೂಪ್ ಡಿಲೀಟ್ ಮಾಡಿದ್ದರು ಎಂದು ತಿಳಿಸಿದೆ.

ಆರೋಪಿ ನಟಿ ತನಿಖೆಗೆ ಸಹಕರಿಸಿಲ್ಲ ಮೆಡಿಕಲ್ ಟೆಸ್ಟ್ ಮಾಡಿಸಿಕೊಳ್ಳಲು ನಖರಾ ಮಾಡಿದ್ದಳು, ಜೊತೆಗೆ ತನ್ನ ಸಿಮ್ ಕಾರ್ಡ್ ಬಗ್ಗೆ ಮಾಹಿತಿ ನೀಡಿಲ್ಲ ಎಂದು ತನಿಖಾಧಿಕಾರಿಗಳು ದೂರಿದ್ದಾರೆ. ತನಿಖಾ ಅಧಿಕಾರಿ (ಐಒ) ಕಾಲ್ ರೆಕಾರ್ಡ್ ಸಂಗ್ರಹಿಸಿದ್ದು, ಇದರಲ್ಲಿ ಅರ್ಜಿದಾರರು ವಿವಿಧ ಮಾದಕವಸ್ತು ಸೇವಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಗಲ್ರಾನಿ ತನ್ನ ಮನೆಯಲ್ಲಿ ಪಾರ್ಟಿಗಳನ್ನು ಆಯೋಜಿಸಿ ಆಹ್ವಾನಿತರಿಗೆ ಡ್ರಗ್ಸ್ ಸರಬರಾಜು ಮಾಡಿದಳು ಮತ್ತು ಅವಳು ಸೇವಿಸುತ್ತಿದ್ದಳು. ಡ್ರಗ್ಸ್ವಶಪಡಿಸಿಕೊಂಡ ಇತರ ಆರೋಪಿಗಳ ನಿವಾಸಕ್ಕೂ ಆಕೆ ಭೇಟಿ ನೀಡಿದ್ದಾರೆ.ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳೊಂದಿಗೆ ಅವಳು ಸಂಬಂಧ ಹೊಂದಿದ್ದಾಳೆ ಮತ್ತು ಐಒ ಈ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಪ್ರಾಸಿಕ್ಯೂಷನ್ ಸಲ್ಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com