ಎಸ್‌ಪಿಬಿಗೆ 'ಭಾರತ ರತ್ನ' ನೀಡಿ: ಪಿಎಂ ಮೋದಿಗೆ ಆಂಧ್ರ ಸಿಎಂ ಜಗನ್ ಪತ್ರ

ಶುಕ್ರವಾರ ಚೆನ್ನೈನಲ್ಲಿ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ "ಭಾರತ ರತ್ನ" ನೀಡುವಂತೆ ಆಂಧ್ರಪ್ರದೇಶ ಸರ್ಕಾರ ಸೋಮವಾರ ಕೇಂದ್ರವನ್ನು ಒತ್ತಾಯಿಸಿದೆ.

Published: 28th September 2020 07:48 PM  |   Last Updated: 28th September 2020 07:48 PM   |  A+A-


ಎಸ್ ಪಿ ಬಾಲಸುಬ್ರಹ್ಮಣ್ಯಂ

Posted By : Raghavendra Adiga
Source : Online Desk

ಅಮರಾವತಿ:  ಶುಕ್ರವಾರ ಚೆನ್ನೈನಲ್ಲಿ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ "ಭಾರತ ರತ್ನ" ನೀಡುವಂತೆ ಆಂಧ್ರಪ್ರದೇಶ ಸರ್ಕಾರ ಸೋಮವಾರ ಕೇಂದ್ರವನ್ನು ಒತ್ತಾಯಿಸಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಂಬಂಧ ಪತ್ರ ಬರೆದಿದ್ದು  ಎಸ್‌ಪಿಬಿ ಎಂದು ಖ್ಯಾತವಾಗಿರುವ ಬಾಲಸುಬ್ರಹ್ಮಣ್ಯಂ ಅವರ ಹೆಸರನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಾಗಿ ಪರಿಗಣಿಸುವಂತೆ ಕೋರಿದ್ದಾರೆ.

ಅಂತಹಾ ಶ್ರೇಷ್ಠ ಗಾಯಕನ ಜನ್ಮಸ್ಥಳ ಆಂಧ್ರಪ್ರದೇಶವಾಗಿರಿವಿದಿ ನಮ್ಮ ಅದೃಷ್ಟ ಎಂದಿರುವ ಜಗನ್  ಎಸ್‌ಪಿಬಿಅಕಾಲಿಕ ನಿಧನವು ದೇಶಾದ್ಯಂತದ ಲಕ್ಷಾಂತರ ಅಭಿಮಾನಿಗಳಿಗೆ ಮತ್ತು ಅಂತರರಾಷ್ಟ್ರೀಯ ಸಂಗೀತ ಪ್ರೇಮಿಗಳಿಗೂ ಸಾಕಷ್ಟು ಸಂಕಟವನ್ನುಂಟು ಮಾಡಿದೆ ಎಂದು ಹೇಳಿದರು. ಎಸ್‌ಪಿಬಿ  ಅಪಾರ ಜನಪ್ರಿಯತೆ ಮತ್ತು ಜಾಗತಿಕ ಸಂಗೀತ ಕ್ಷೇತ್ರದ ಮೇಲೆ ಅವರ 50 ವರ್ಷಗಳ ಪ್ರಬಾವ ವಿಶ್ವದಾದ್ಯಂತ ಸಂಗೀತ ಅಭಿಮಾನಿಗಳಿಂದ ಗೌರವ, ಆದರಗಳನ್ನು ಪಡೆದಿದ್ದಾರೆ.  ಎಸ್‌ಪಿಬಿ ಅವರ ಸಾಧನೆಗಳು ಸಂಗೀತವನ್ನು ಮೀರಿವೆ ಮತ್ತು ಅವರು ಸಂಯೋಜನೆ ಮಾಡಿದ್ದ ಹಾಡುಗಳು ಅವರನ್ನು ಇನ್ನಷ್ಟು ಎತ್ತರಕ್ಕೆ ಒಯ್ದಿವೆ ಎಂದು ಆಂಧ್ರ ಸಿಎಂ ಹೇಳಿದ್ದಾರೆ.

ಎಸ್‌ಪಿಬಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿ ನಾನಾ ಭಾಷೆಗಳಲ್ಲಿ 40,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಳು, ಆಂಧ್ರಪ್ರದೇಶದ 25 ನಂದಿ ಪ್ರಶಸ್ತಿ, ಪದ್ಮಶ್ರೀ (2001) ಮತ್ತು ಪದ್ಮಭೂಷಣ (2011)  ಸೇರಿ ಅನೇಕ ಪ್ರತಿಷ್ಠಿತ ಗೌರವಗಳಿಗೆ ಬಾಜನರಾಗಿದ್ದಾರೆ.

ಈ ಹಿಂದೆ ಸಂಗೀತ ಕ್ಷೇತ್ರದ  ಲತಾ ಮಂಗೇಶ್ಕರ್, ಭೂಪೆನ್ ಹಜರಿಕಾ, ಎಂ ಎಸ್ ಸುಬ್ಬುಲಕ್ಷ್ಮಿಬಿಸ್ಮಿಲ್ಲಾ ಖಾನ್ ಮತ್ತು ಭೀಮ್ಸೆನ್ ಜೋಶಿ ಅವರಿಗೆ ಭಾರತ ಸರ್ಕಾರ ಪ್ರತಿಷ್ಠಿತ "ಭಾರತ ರತ್ನ" ಶಸ್ತಿಯನ್ನು ನೀಡಿತ್ತು.

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp