ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರ ವರ್ಕೌಟ್ ವಿಡಿಯೋ ವೈರಲ್!
ಫಿಟ್ ನೆಸ್ ಕಾಯ್ದುಕೊಳ್ಳಬೇಕಾದರೆ ಪ್ರತಿ ನಿತ್ಯ ವರ್ಕೌಟ್ ಮಾಡಬೇಕಾಗುತ್ತದೆ. ಅದರಲ್ಲೂ ಸೆಲೆಬ್ರಿಟಿಗಳು ಹೆಚ್ಚಾಗಿ ಫಿಟ್ ನೆಸ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಸದ್ಯ ನಟ ಪ್ರಜ್ವಲ್ ದೇವರಾಜ್ ಪತ್ನಿ ವರ್ಕೌಟ್ ವಿಡಿಯೋ ವೈರಲ್ ಆಗಿದೆ.
Published: 28th September 2020 04:43 PM | Last Updated: 28th September 2020 04:43 PM | A+A A-

ರಾಗಿಣಿ ಪ್ರಜ್ವಲ್
ಫಿಟ್ ನೆಸ್ ಕಾಯ್ದುಕೊಳ್ಳಬೇಕಾದರೆ ಪ್ರತಿ ನಿತ್ಯ ವರ್ಕೌಟ್ ಮಾಡಬೇಕಾಗುತ್ತದೆ. ಅದರಲ್ಲೂ ಸೆಲೆಬ್ರಿಟಿಗಳು ಹೆಚ್ಚಾಗಿ ಫಿಟ್ ನೆಸ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಸದ್ಯ ನಟ ಪ್ರಜ್ವಲ್ ದೇವರಾಜ್ ಪತ್ನಿ ವರ್ಕೌಟ್ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಸೆಲೆಬ್ರಿಟಿಗಳು ತಮ್ಮ ವರ್ಕೌಟ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.
ಅದೇ ರೀತಿ ಇದೀಗ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಫಿಟ್ನೆಸ್ ಗಾಗಿ ಯಾವ ಎಕ್ಸಾಸೈಸ್ ಮಾಡಬೇಕು. ಎಷ್ಟು ಸಮಯ ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ. ಇನ್ನು ವಿಡಿಯೋ ನೋಡಿದ ಅಭಿಮಾನಿಗಳು ತಮ್ಮ ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ.