'ಕಸ್ತೂರಿ ಮಹಲ್' ಫಸ್ಟ್‌ಲುಕ್‌ನಲ್ಲಿ ಕಂಗೊಳಿಸಿದ ನಟಿ ಶಾನ್ವಿ ಶ್ರೀವಾಸ್ತವ! 

ನಿರ್ದೇಶಕ ದಿನೇಶ್ ಬಾಬು ಅವರ ನಿರ್ದೇಶನದ 50ನೇ ಚಿತ್ರ ಕಸ್ತೂರಿ ಮಹಲ್ ನ ಮೊದಲ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ನಾಯಕ ನಟಿ ಶಾನ್ವಿ ಶ್ರೀವಾಸ್ತವ ಅವರು ಮೊದಲ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ.
ಕಸ್ತೂರಿ ಮಹಲ್ ಚಿತ್ರದ ಫರ್ಸ್ಟ್ ಲುಕ್
ಕಸ್ತೂರಿ ಮಹಲ್ ಚಿತ್ರದ ಫರ್ಸ್ಟ್ ಲುಕ್

ಬೆಂಗಳೂರು: ನಿರ್ದೇಶಕ ದಿನೇಶ್ ಬಾಬು ಅವರ ನಿರ್ದೇಶನದ 50ನೇ ಚಿತ್ರ ಕಸ್ತೂರಿ ಮಹಲ್ ನ ಮೊದಲ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ನಾಯಕ ನಟಿ ಶಾನ್ವಿ ಶ್ರೀವಾಸ್ತವ ಅವರು ಮೊದಲ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ.

ಈ ಹಿಂದೆ ಚಂದ್ರಲೇಖಾ ಎಂಬ ಹಾರರ್ ಚಿತ್ರದಲ್ಲಿ ನಟಿಸಿದ್ದ ಶಾನ್ವಿ ಶ್ರೀವಾಸ್ತವ ಇದೀಗ ಎರಡನೇ ಬಾರಿಗೆ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೊದಲ ಲುಕ್ ಇದೀಗ ಬಿಡುಗಡೆಯಾಗಿದ್ದು, ಶಾನ್ವಿ ಅವರು ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.

ಈ ಚಿತ್ರಕ್ಕೆ ದಿನೇಶ್ ಬಾಬು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರವೀಶ್‌ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದು, ಅಕ್ಷಯ್‌-ನವೀನ್‌ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಛಾಯಾಗ್ರಹಣವನ್ನು ಪಿಕೆಎಚ್ ದಾಸ್ ಮಾಡುತ್ತಿದ್ದು, ಗೌತಮ್ ಶ್ರೀವತ್ಸ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಶಾನ್ವಿ ಜೊತೆಗೆ ಶ್ರುತಿ ಪ್ರಕಾಶ್, ಸ್ಕಂದ ಅಶೋಕ್, ರಂಗಾಯಣ ರಘು ಮುಂತಾದವರು ನಟಿಸಲಿದ್ದಾರೆ. ಸದ್ಯ ಫಸ್ಟ್‌ ಲುಕ್ ರಿಲೀಸ್ ಮಾಡಿರುವ ಚಿತ್ರತಂಡ, ಅ.5ರಿಂದ ಶೂಟಿಂಗ್ ಆರಂಭಿಸಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com